ಪ್ರೇಕ್ಷಕರ ಮನ ಗೆಲ್ಲಲು ವರ್ಷಗಳ ನಂತರ ಮತ್ತೆ ಬಂದ ಪುಟ್ಟಗೌರಿ ಮದುವೆಯ ಜೂ. ಪುಟ್ಟಗೌರಿ ಸಾನ್ಯಾ

Entertainment Featured-Articles News

ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿಯಾಗಿ ಜನರ ಅಪಾರ ಅಭಿಮಾನವನ್ನು ಪಡೆದುಕೊಂಡಿದ್ದ ಪುಟ್ಟು ಗೌರಿ ಮದುವೆ ಸೀರಿಯಲ್ ಅನ್ನು ಕಿರುತೆರೆಯ ಪ್ರೇಕ್ಷಕರು ಇನ್ನೂ ಮರೆತಿಲ್ಲ. ಹೌದು ಪುಟ್ಟಗೌರಿ ಮದುವೆ ಸೀರಿಯಲ್ ಇನ್ನೂ ಅನೇಕರಿಗೆ ಬಹಳ ಇಷ್ಟವಾದ ಧಾರಾವಾಹಿಯಾಗಿ ಅವರ ಮನಸ್ಸಿನಲ್ಲಿ ಸ್ಥಾನವನ್ನು ಪಡೆದುಕೊಂಡಿದೆ. ಈ ಧಾರಾವಾಹಿಯ ಪ್ರಮುಖ ಪಾತ್ರವೇ ಪುಟ್ಟಗೌರಿ. ಜೂನಿಯರ್ ಪುಟ್ಟಗೌರಿಯಾಗಿ, ಚೈತನ್ಯ ತುಂಬಿದ ನಡೆ, ನುಡಿ ಹಾಗೂ ಕ್ರಿಯಾಶೀಲತೆಯೊಂದಿಗೆ ಜನರ ಮನಸ್ಸನ್ನು ಗೆದ್ದಿದ್ದ ಬಾಲ ನಟಿಯನ್ನು ಜನ ಹೇಗೆ ತಾನೇ ಮರೆಯಲು ಸಾಧ್ಯ. ಖಂಡಿತ ಆ ಬಾಲ ನಟಿಯನ್ನು ಜನ ಮರೆತಿಲ್ಲ.

ಅಸಂಖ್ಯಾತ ಹೃದಯಗಳನ್ನು ಗೆದ್ದಿದ್ದ ಅದೇ ಬಾಲ ನಟಿ ಈಗ ಡಾನ್ಸಿಂಗ್ ಸೆನ್ಸೇಷನ್ ಆಗಿ ಕಮ್ ಬ್ಯಾಕ್ ಮಾಡುತ್ತಿದ್ದಾರೆ. ಕೆಲವು ವರ್ಷಗಳಿಂದ ಕೂಡಾ ಹಿನ್ನೆಲೆಗೆ ಸರಿದಿದ್ದ ಈ ಬಾಲನಟಿ ಸಾನ್ಯಾ ಅಯ್ಯರ್, ಈಗ ಯುವ ಡಾನ್ಸರ್ ಆಗಿ ಮತ್ತೆ ಮುನ್ನೆಲೆಗೆ ಬಂದಿದ್ದು, ಟಿವಿ ಗೆ ಕಮ್ ಬ್ಯಾಕ್ ಮಾಡುವ ಮೂಲಕ ತಮ್ಮನ್ನು ಮಿಸ್ ಮಾಡಿಕೊಳ್ಳುತ್ತಿದ್ದವರಿಗೆ ಒಂದು ದೊಡ್ಡ ಸರ್ಪ್ರೈಸ್ ನೀಡಿದ್ದಾರೆ. ಹೌದು ಕನ್ನಡ ಕಿರುತೆರೆಯಲ್ಲಿ ಮೂಡಿ ಬರುತ್ತಿರುವ ಡಾನ್ಸಿಂಗ್ ಚಾಂಪಿಯನ್ ಡಾನ್ಸ್ ರಿಯಾಲಿಟಿ ಶೋ ನಲ್ಲಿ ಸಾನ್ಯಾ ಸ್ಪರ್ಧಿಯಾಗಿ ಪ್ರವೇಶ ನೀಡಿದ್ದಾರೆ.

ಸಾನ್ಯಾ ಸೆಲೆಬ್ರಿಟಿ ಡಾನ್ಸ್ ಸ್ಪರ್ಧಿಯಾಗಿ ಬರುತ್ತಿದ್ದು, ಅವರಿಗೆ ಒಬ್ಬ ಪಾರ್ಟ್ನರ್ ಕೂಡಾ‌ ಇರುತ್ತಾರೆ. ಸಾನ್ಯಾ ತಮ್ಮ ಈ ಡಾನ್ಸಿಂಗ್ ಜರ್ನಿ ಬಗ್ಗೆ ಸಾಕಷ್ಟು ಉತ್ಸುಕರಾಗಿದ್ದಾರೆ ಎನ್ನಲಾಗಿದೆ. ಗಮನಿಸಬೇಕಾದ ವಿಷಯ ಏನೆಂದರೆ ಸಾನ್ಯಾ ಅವರಿಗೆ ಇದು ಮೊದಲ ಡಾನ್ಸ್ ರಿಯಾಲಿಟಿ ಶೋ ಅಲ್ಲ. ಈ ಮೊದಲು ಚಿಕ್ಕ ವಯಸ್ಸಿನಲ್ಲೇ ಸಾನ್ಯಾ ಡಾನ್ಸಿಂಗ್ ಸ್ಟಾರ್ಸ್ ನಲ್ಲಿ ಸ್ಪರ್ಧಿಯಾಗಿ ಭಾಗವಹಿಸಿ, ಇನ್ನಿತರೆ ಸ್ಪರ್ಧಿಗಳಿಗೆ ಬಹಳ ಕಠಿಣ ಎನಿಸುವ ರೀತಿಯಲ್ಲಿ ಸ್ಪರ್ಧೆಯನ್ನು ನೀಡಿದ್ದರು.

ಸ್ಟಾರ್ ಗಳು ಇರುವ ಕುಟುಂಬದಲ್ಲಿ ಜನಿಸಿದ ಸಾನ್ಯಾ ಸಣ್ಣ ವಯಸ್ಸಿನಲ್ಲೇ ಕಲಾ ಜಗತ್ತಿಗೆ ಬಾಲ ಕಲಾವಿದೆಯಾಗಿ ಪ್ರವೇಶ ನೀಡಿದ್ದು, ಪುಟ್ಟಗೌರಿ ಮದುವೆ ಮೂಲಕ ಕಿರುತೆರೆಯ ಪ್ರೇಕ್ಷಕರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ಸನ್ನು ಪಡೆದವರು. ಈ ಸೀರಿಯಲ್ ನ ಪ್ರಮುಖ ಪಾತ್ರವಾದ ಪುಟ್ಟಗೌರಿ ಪಾತ್ರದಲ್ಲಿ ಅವರು ನಟಿಸಿದ್ದರು. ಬಾಲ್ಯ ವಿವಾಹಕ್ಕೆ ಒಳಗಾಗುವ ಪುಟ್ಟ ಹುಡುಗಿಯ ಪಾತ್ರಕ್ಕೆ ಸಾನ್ಯಾ ಜೀವ ತುಂಬಿ ಜನ ಮನವನ್ನು ಗೆದ್ದಿದ್ದರು.

Leave a Reply

Your email address will not be published. Required fields are marked *