‘ಪ್ರೀತಿಸುವುದ ಕಲಿಸಿದೆ’ ನಾಗಚೈತನ್ಯ ಪೋಸ್ಟ್ ನೋಡಿ ಭಾವುಕರಾದ ಅಭಿಮಾನಿಗಳು: ಸಮಂತಾನ ಮರೆತಿಲ್ವ ನಾಗಚೈತನ್ಯ!!

Entertainment Featured-Articles Movies News

ದಕ್ಷಿಣ ಸಿನಿಮಾ ರಂಗದಲ್ಲಿ ಅದರಲ್ಲೂ ವಿಶೇಷವಾಗಿ ಟಾಲಿವುಡ್ ಇಂಡಸ್ಟ್ರಿಯಲ್ಲಿ ಕ್ಯೂಟ್ ಕಪಲ್ ಎನಿಸಿಕೊಂಡಿದ್ದವರು ಸ್ಟಾರ್ ಜೋಡಿ ನಾಗಚೈತನ್ಯ ಮತ್ತು ಸಮಂತಾ. ಆದರೆ ಅವರ ನಡುವೆ ಏನಾಯಿತೋ ಏನೋ ಇದ್ದಕ್ಕಿದ್ದ ಹಾಗೆ ಅಭಿಮಾನಿಗಳಿಗೆ ಶಾ ಕ್ ನೀಡುವಂತೆ ಕಳೆದ ವರ್ಷ ಈ ಜೋಡಿ ವಿಚ್ಚೇದನ ಪಡೆದು ದೂರವಾದರು. ಅನಂತರ ಇವರ ವಿಷಯವಾಗಿ ಸಾಕಷ್ಟು ಸುದ್ದಿಗಳು ಹರಿದಾಡಿದವು. ಸಮಂತಾ ಅವರು ಟಾ ರ್ಗೆ ಟ್ ಆದರು. ತನ್ನದೇ ಶೈಲಿಯಲ್ಲಿ ಸಮಂತಾ ಪ್ರತಿಕ್ರಿಯೆ ನೀಡಿದರು. ಆದರೆ ಈ ಜೋಡಿ ನೇರವಾಗಿ ತಮ್ಮ ವಿಚ್ಛೇದನದ ಬಗ್ಗೆ ಮಾತ್ರ ಎಲ್ಲೂ ಮಾತನಾಡಲಿಲ್ಲ.

ಈಗ ಇವೆಲ್ಲವುಗಳ ನಂತರ, ಬಹು ದಿನಗಳಾದ ಮೇಲೆ ನಟ ನಾಗಚೈತನ್ಯ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡ ಫೋಟೋ ಒಂದನ್ನು ನೋಡಿದ ಅಭಿಮಾನಿಗಳು ಸಖತ್ ಖುಷಿ ಪಡುತ್ತಿದ್ದಾರೆ. ನಟ ನಾಗಚೈತನ್ಯ ಅವರ ಹೊಸ ಸಿನಿಮಾ ಥ್ಯಾಂಕ್ಯೂ ಶೀಘ್ರದಲ್ಲೇ ತೆರೆಗೆ ಬರಲು ಸಜ್ಜಾಗುತ್ತಿದೆ. ಈ ವೇಳೆ ನಟ ನಾಗಚೈತನ್ಯ ಅವರು ತಮ್ಮ ಹೊಸ ಸಿನಿಮಾ ಪ್ರಮೋಷನ್ ಕೆಲಸಗಳಲ್ಲಿ ಸಾಕಷ್ಟು ಬ್ಯುಸಿಯಾಗಿದ್ದಾರೆ. ವಿವಿಧೆಡೆಗಳಲ್ಲಿ ಸಿನಿಮಾ ಪ್ರಚಾರ ಕಾರ್ಯದಲ್ಲಿ ತೊಡಗಿರುವ ಅವರು ಸೋಶಿಯಲ್ ಮೀಡಿಯಾ ದಲ್ಲಿ ಸಹಾ ತಮ್ಮದೇ ಸ್ಟೈಲ್ ನಲ್ಲಿ ಥ್ಯಾಂಕ್ಯೂ ಪ್ರಮೋಷನ್ ಮಾಡಿದ್ದಾರೆ.

ನಾಗಚೈತನ್ಯ ತಮ್ಮ ಇನ್ಸ್ಟಾಗ್ರಾಂ ನಲ್ಲಿ ಮೂರು ಫೋಟೋ ಗಳನ್ನು ಶೇರ್ ಮಾಡಿದ್ದಾರೆ. ಅದರಲ್ಲಿ ಒಂದು ಫೋಟೋ ನಟ ನಾಗಚೈತನ್ಯ ಮತ್ತು ಸಮಂತಾ ನಡುವೆ ಇದ್ದ ಪ್ರೇಮದ ಸಂಕೇತವಾಗಿದೆ. ಇದನ್ನು ನೋಡಿ ಅಭಿಮಾನಿಗಳು ನಾಗಚೈತನ್ಯ ಮನಸ್ಸಿನಲ್ಲಿ ನಟಿ ಸಮಂತಾ ಬಗ್ಗೆ ಇನ್ನೂ ಒಲವು ಇದೆ ಎಂದೇ ಭಾವಿಸುತ್ತಿದ್ದಾರೆ. ಹೌದು ನಾಗಚೈತನ್ಯ ಶೇರ್ ಮಾಡಿದ ಮೂರು ಫೋಟೋಗಳಲ್ಲಿ ಒಂದು ಈಗ ಅವರ ಅಭಿಮಾನಿಗಳು ಮತ್ತು ಸಮಂತಾ ಅಭಿಮಾನಿಗಳ ಗಮನವನ್ನು ವಿಶೇಷವಾಗಿ ಸೆಳೆಯುತ್ತಿದೆ.

ನಾಗಚೈತನ್ಯ ಶೇರ್ ಮಾಡಿದ ಮೂರು ಫೋಟೋಗಳಲ್ಲಿ ಒಂದು ತನ್ನ ಮತ್ತು ಸಮಂತಾ ನಡುವಿನ ಪ್ರೀತಿಯ ಸಂಕೇತವೆಂದೇ ಇರುವ ಅವರ ಮುದ್ದಿನ ಶ್ವಾನ ಹ್ಯಾಷ್ ನ ಫೋಟೋ ಆಗಿದೆ. ಈ ಶ್ವಾನವು ನಾಗಚೈತನ್ಯ ಮತ್ತು ಸಮಂತಾ ನಡುವಿನ ಪ್ರೇಮಕ್ಕೆ ಸಾಕ್ಷಿಯಾಗಿ ಅವರು ಇಟ್ಟುಕೊಂಡಿದ್ದ ಶ್ವಾನ. ನಾಗಚೈತನ್ಯ ತನ್ನ ಜೀವನದ ಮೂರು ಮುಖ್ಯ ವ್ಯಕ್ತಿಗಳಿಗೆ ಧನ್ಯವಾದ ಎನ್ನುತ್ತಾ ತಮ್ಮ ತಾಯಿ, ತಂದೆ ಹಾಗೂ ಹ್ಯಾಷ್ ನ ಫೋಟೋ ಶೇರ್ ಮಾಡಿ ಕೆಲವು ಸಾಲುಗಳನ್ನು ಬರೆದು ಧನ್ಯವಾದಗಳನ್ನು ತಿಳಿಸಿದ್ದಾರೆ.

ಹಾಗೆ ಬರೆದುಕೊಂಡ ಅವರು ಹ್ಯಾಷ್ ಬಗ್ಗೆ, ಪ್ರೀತಿಸುವುದು ಹೇಗೆ ಎಂದು ನನಗೆ ತಿಳಿಸಿದ, ಅನುಭೂತಿಯನ್ನು ಉಂಟು ಮಾಡಿದ ಹಾಗೂ ನಾನು ಮನುಷ್ಯನಾಗಿಯೇ ಉಳಿಯುವಂತೆ ಮಾಡಿದ ಹ್ಯಾಷ್ ಗೆ ಧನ್ಯವಾದಗಳು ಎಂದು ಹೇಳಿದ್ದಾರೆ. ನಾಗಚೈತನ್ಯ ಅವರ ಈ ಪೋಸ್ಟ್ ವೈರಲ್ ಆಗಿದೆ. ಇದಕ್ಕೆ ಅಭಿಮಾನಿಗಳಿಂದ ಮೆಚ್ಚುಗೆಗಳು ಹರಿದು ಬಂದಿದೆ. ಸೆಲೆಬ್ರಿಟಿಗಳು ಸಹಾ ಕಾಮೆಂಟ್ ಮಾಡಿ ನಾಗಚೈತನ್ಯ ಅವರ ಪೋಸ್ಟ್ ಗೆ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಅಭಿಮಾನಿಗಳು ಕಾಮೆಂಟ್ ಮಾಡಿ ಮೆಚ್ಚುಗೆ ನೀಡಿದ್ದಾರೆ.

Leave a Reply

Your email address will not be published.