ಪ್ರೀತಿಸಿ ಮದುವೆಯಾದ ಮಗಳ ಜುಟ್ಟು ಹಿಡಿದ ತಂದೆ ಏನು ಮಾಡಿದ್ದಾರೆ ನೋಡಿ!!

Entertainment Featured-Articles News
80 Views

ಪ್ರೀತಿ, ಪ್ರೇಮ ಎನ್ನೋದು ಇತ್ತೀಚಿನ ವರ್ಷಗಳಲ್ಲಿ ಬಹಳ ಸಾಮಾನ್ಯ ಎನಿಸಿ ಹೋಗಿದೆ. ವಯಸ್ಸಿಗೆ ಬಂದ ಕೂಡಲೇ ಪ್ರಣಯ ಪಕ್ಷಿಗಳಾಗುವ ಯುವಕ ಯುವತಿಯರು, ಮದುವೆ ವಯಸ್ಸು ಆಗಿದೆ ಎಂದ್ರೆ ಸಾಕು ಭವಿಷ್ಯ ಹೇಗೋ ರೂಪಿಸಿಕೊಳ್ತೇವೆ ಅನ್ನೋ ಭರದಲ್ಲಿ ಮದುವೆಯಾಗೋಕೆ ಸಿದ್ಧವಾಗಿ ಬಿಡ್ತಾರೆ. ತಮ್ಮ ಇಂತಹ ನಿರ್ಧಾರದಿಂದ ಹೆತ್ತವರ ವಿ ರೋ ಧ ಕಟ್ಟಿ ಕೊಳ್ಳೋದಕ್ಕೂ ಅವರು ಹಿಂಜರಿಯೋದಿಲ್ಲ. ಆದ್ರೆ ಕೆಲವೊಂದು ಜೋಡಿಗಳು ಎಲ್ಲರನ್ನೂ ಎದುರು ಹಾಕಿಕೊಂಡು ಮದುವೆ ಆದರೂ, ಅನಂತರ ಒಳ್ಳೆ ಜೀವನ ಕಟ್ಟಿಕೊಂಡು ಮಾದರಿಯಾಗಿರೋ ಉದಾಹರಣೆ ಉಂಟು.

ಇನ್ನೂ ಕೆಲವರು ಮದುವೆಯ ನಂತರ ಪಶ್ಚಾತ್ತಾಪ ಪಟ್ಟು ಬೇರೆಯಾಗೋದು ಉಂಟು. ಆದ್ರೆ ಪ್ರೇಮ ಪಾಶದಲ್ಲಿ ಸಿಲುಕಿದ ಮಕ್ಕಳನ್ನು ಅವರ ತಂದೆ ತಾಯಿ ಸುಲಭವಾಗಿ ಬಿಟ್ಟು ಕೊಡೋಕೆ ಸಿದ್ಧ ಇರಲ್ಲ. ಅದೇ ವೇಳೆ ಪ್ರೀತಿಸಿದವರನ್ನು ತಂದೆ ತಾಯಿಗಾಗಿ ಬಿಡೋಕೆ ಮಕ್ಕಳು ಸಿದ್ಧವಿರಲ್ಲ. ಈಗ ಇಂತದ್ದೇ ಒಂದು ಘಟನೆಯಲ್ಲಿ ಪ್ರೀತಿಸಿ ಮದುವೆಯಾದ ಮಗಳ ಮೇಲೆ ಸಿಟ್ಟಿನಿಂದ ಆಕೆಯ ಜುಟ್ಟು ಹಿಡಿದು ಎಳೆದುಕೊಂಡು ಹೋಗುವ ಪ್ರಯತ್ನ ಮಾಡಿದ್ದಾರೆ ಒಬ್ಬ ತಂದೆ. ಇಂತಹ ಒಂದು ಘಟನೆ ನಡೆದಿರುವುದು ನಂಜನಗೂಡಿನಲ್ಲಿ.

ಹೌದು ನಂಜನಗೂಡು ತಾಲೂಕಿನ ಹರತಲೆ ಗ್ರಾಮದ ನಿವಾಸಿ ಬಸವರಾಜ ನಾಯ್ಕ ಎನ್ನುವವರ ಮಗಳು ಚೈತ್ರ ಹಲ್ಲೆರೆ ಗ್ರಾಮದ ನಿವಾಸಿ ಮಹೇಂದ್ರ ಇಬ್ಬರೂ ಕಳೆದ ಒಂದೂವರೆ ವರ್ಷದಿಂದ ಒಬ್ಬರನ್ನೊಬ್ಬರು ಪ್ರೀತಿಸ್ತಾ ಇದ್ದರು. ಅವರ ಪ್ರೀತಿಗೆ ಡಿಸೆಂಬರ್ ಎಂಟರಂದು ಮದುವೆ ರೂಪವನ್ನು ನೀಡಿದ್ದಾರೆ ಈ ಜೋಡಿ. ಮನೆಯವರಿಗೆ ತಿಳಿಯದೇ ಇವರು ಮದುವೆ ಆಗಿದ್ದು, ನಿನ್ನೆ ಈ ಜೋಡಿ ತಮ್ಮ ಮದುವೆಯನ್ನು ರಿಜಿಸ್ಟರ್ ಮಾಡಿಸೋಕೆ ಸಬ್ ರಿಜಿಸ್ಟ್ರಾರ್ ಅವರ ಕಛೇರಿಗೆ ಆಗಮಿಸಿದ್ದಾರೆ.

ನೋಂದಣಿ ಮುಗಿಸಿಕೊಂಡು ಜೋಡಿ ಹೊರ ಬರುವ ವೇಳೆಗೆ ಹೇಗೋ ಮಗಳು ಅಲ್ಲಿಗೆ ಬಂದಿರುವ ವಿಷಯ ತಿಳಿದ ಚೈತ್ರ ತಂದೆ ಬಸವರಾಜ ನಾಯ್ಕ ಅಲ್ಲಿ ಪ್ರತ್ಯಕ್ಷ ಆಗಿದ್ದಾರೆ. ಸಿಟ್ಟಿನಿಂದ ಮಗಳ ಮಾಂಗಲ್ಯ ಸರ ಕಿತ್ತು ಹಾಕಿ, ಮಗಳ ಜುಟ್ಟು ಹಿಡಿದು ಎಳೆದೊಯ್ಯುವ ಪ್ರಯತ್ನ ಮಾಡಿದ್ದಾರೆ. ಆಗ ಚೈತ್ರ ಸಹಾಯಕ್ಕಾಗಿ ಅರಚಾಡಿದ್ದು ಅಲ್ಲಿದ್ದವರು ಸಹಾಯ ಮಾಡಿದ್ದಾರೆ. ಚೈತ್ರ ಮಹೇಂದ್ರ ನ ಬಳಿ ಓಡಿ ಹೋಗಿ ಆತನನ್ನು ಅಪ್ಪಿಕೊಂಡಿದ್ದಾಳೆ. ಅಲ್ಲದೇ ತಂದೆಯಿಂದ ರಕ್ಷಣೆ ನೀಡಿ ಎಂದು ಪೋಲಿಸರ ಮೊರೆ ಹೋಗಿದ್ದಾಳೆ.

ಸಾಮಾಜಿಕ ಜಾಲತಾಣಗಳಲ್ಲಿ ಈ ವಿಷಯ ಸುದ್ದಿಯಾದ ಮೇಲೆ ಜನರು ವೈವಿದ್ಯಮಯ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಇಷ್ಟು ವರ್ಷ ಹೊತ್ತು ಹೆತ್ತವರಿಗಿಂತ ನಿನ್ನೆ ಮೊನ್ನೆ ಬಂದವರಿಗಾಗಿ ತಂದೆ ತಾಯಿಯನ್ನೇ ಎದುರು ಹಾಕಿಕೊಳ್ಳುವ ಇಂತ ಮಕ್ಕಳು ಬೇಡ ಎಂದಿದ್ದಾರೆ. ಹೇಗೆ ಒಂದೂವರೆ ವರ್ಷದಿಂದ ಪರಿಚಯ ಆದವನಿಗಾಗಿ ಇಷ್ಟು ವರ್ಷ ಸಾಕಿದ, ಪ್ರೀತಿ ತೋರಿಸಿದ ತಂದೆ ಬೇಡವಾದನೇ ಎಂದೆಲ್ಲಾ ಪ್ರಶ್ನೆ ಮಾಡುತ್ತಿದ್ದಾರೆ.

Leave a Reply

Your email address will not be published. Required fields are marked *