ಬಾಡಿಗೆ ತಾಯಿಯಿಂದ ಮಗು ಪಡೆದ ಪ್ರಿಯಾಂಕ ಚೋಪ್ರಾ, ನಿಕ್ ಜೋನಸ್: ಪ್ರೈವೆಸಿಗೆ ಗೌರವ ನೀಡಿ ಎಂದ ನಟಿ!

0 2

ಪ್ರಮುಖ ಬಾಲಿವುಡ್ ನಟಿ, ಸದ್ಯಕ್ಕೆ ಬಾಲಿವುಡ್ ಹಾಗೂ ಹಾಲಿವುಡ್ ಎರಡೂ ಕಡೆ ಸಕ್ರಿಯವಾಗಿರುವ ಸ್ಟಾರ್ ನಟಿ ಪ್ರಿಯಾಂಕ ಚೋಪ್ರಾ ಹಾಗೂ ಆಕೆಯ ಪತಿ ನಿಕ್ ಜೋನಸ್ ಜೀವನದಲ್ಲಿ ಹೊಸದೊಂದು ಸಂತೋಷವು ಪ್ರವೇಶ ನೀಡಿದೆ. ಇಷ್ಟು ದಿನ ದಂಪತಿಯಾಗಿ ಬಹಳ ಸಂತೋಷದ ದಿನಗಳನ್ನು ಕಳೆದಿದ್ದ ಈ ಜೋಡಿಗೆ ಈಗ ಒಂದು ಹೊಸ ಜವಾಬ್ದಾರಿ ಜೊತೆಯಾಗಿದೆ. ಹೌದು ಜೀವನದಲ್ಲಿ ಮತ್ತೊಂದು ಹಂತಕ್ಕೆ ಏರಿರುವ ಈ ದಂಪತಿ ಈಗ ತಂದೆ ತಾಯಿ ಆಗಿದ್ದಾರೆ. ನಟಿ ಪ್ರಿಯಾಂಕ ಚೋಪ್ರಾ ತಾನು ತಾಯಿಯಾದ ವಿಷಯವನ್ನು ಸೋಶಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ.

ಏನಿದು? ಪ್ರಿಯಾಂಕ ಚೋಪ್ರಾ ಗರ್ಭಿಣಿ ಆಗಿದ್ದು ಯಾವಾಗ?? ಮಗುವಿಗೆ ಜನ್ಮ ನೀಡಿದ್ದು ಯಾವಾಗ? ಎಂದು ಅಚ್ಚರಿ ಮೂಡಬಹುದು. ಅಚ್ಚರಿ ಸಹಜವೇ ಆದರೂ ವಿಷಯ ನಿಜ. ಪ್ರಿಯಾಂಕ ಚೋಪ್ರಾ ಸರೋಗಸಿ ( ಬಾಡಿಗೆ ತಾಯಿ ) ಮೂಲಕ ಮಗುವನ್ನು ಪಡೆದುಕೊಂಡಿದ್ದಾರೆ. ಈ ಸಂತೋಷದ ವಿಷಯವನ್ನು ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮ ಅಭಿಮಾನಿಗಳ ಜೊತೆಗೆ ಹಂಚಿಕೊಂಡಿದ್ದಾರೆ ಸುಂದರಿ ಪ್ರಿಯಾಂಕ ಚೋಪ್ರಾ. ಪ್ರಿಯಾಂಕ ಮತ್ತು ನಿಕ್ ಜೋನಸ್ 2018 ರಲ್ಲಿ ವಿವಾಹವಾಗಿದ್ದರು. ಮದುವೆ ಆಗಿ ಮೂರು ವರ್ಷ ಕಳೆದರೂ ಎಲ್ಲೂ ಈ ದಂಪತಿ ಮಗುವಿನ ಬಗ್ಗೆ ಪ್ರಸ್ತಾಪ ಮಾಡಿರಲಿಲ್ಲ.

ಅಲ್ಲದೇ ಮಾದ್ಯಮಗಳ ಮುಂದೆ ಸಹಾ ಮಗುವಿನ ಬಗ್ಗೆ ಯಾವುದೇ ಪ್ಲಾನ್ ಮಾಡಿರುವ ವಿಚಾರವಾಗಿಯೂ ಅವರು ಯಾವುದೇ ವಿಚಾರವನ್ನು ಹಂಚಿಕೊಂಡಿರಲಿಲ್ಲ. ಆದರೆ ಈಗ ಸೋಶಿಯಲ್ ಮೂಲಕ ಪ್ರಿಯಾಂಕ ತಾನು ಮತ್ತು ನಿಕ್ ತಂದೆ ತಾಯಿ ಆದ ವಿಚಾರವನ್ನು ತಿಳಿಸಿ ಅಭಿಮಾನಿಗಳಲ್ಲಿ ಒಂದು ಅಚ್ಚರಿ ಯನ್ನು ಮೂಡಿಸಿದ್ದಾರೆ. ಸರ್ಪ್ರೈಸ್ ನೀಡಿದ್ದಾರೆ. ಪತಿ, ಪತ್ನಿ ಇಬ್ಬರೂ ಈ ಸಂತೋಷದ ವಿಚಾರವನ್ನು ತಮ್ಮ ಇನ್ಸ್ಟಾಗ್ರಾಂ ವೀಡಿಯೋದಲ್ಲಿ ಹಂಚಿಕೊಂಡು ಖುಷಿ ಪಟ್ಟಿದ್ದಾರೆ.

https://www.instagram.com/p/CZAJvizvjf4/?utm_medium=copy_link

ಪ್ರಿಯಾಂಕ ಹಾಗೂ ನಿಕ್ ತಮ್ಮ ಪೋಸ್ಟ್ ನಲ್ಲಿ, “ನಾವು ಸರೋಗಸಿ ಮೂಲಕ ಮಗುವನ್ನು ಸ್ವಾಗತಿಸಲು ಬಹಳ ಸಂತೋಷವಾಗುತ್ತಿದೆ. ನಾವು ಈ ಸಂತೋಷದ ಸಮಯದಲ್ಲಿ ನಮ್ಮ ಕುಟುಂಬದ ಕಡೆಗೆ ಗಮನವನ್ನು ನೀಡಲು ಬಯಸುತ್ತೇವೆ. ದಯವಿಟ್ಟು ನಮ್ಮ‌ ಖಾಸಗಿತನವನ್ನು ಗೌರವಿಸಿ” ಎಂದು ಬರೆದುಕೊಂಡಿದ್ದಾರೆ. ಇಬ್ಬರೂ ತಂದೆ ತಾಯಿ ಆದ ವಿಚಾರವನ್ನು ಮಾತ್ರವೇ ಹಂಚಿಕೊಂಡಿದ್ದು, ಶೀಘ್ರದಲ್ಲೇ ಮಗುವಿನ ಫೋಟೋ ಶೇರ್ ಮಾಡಬಹುದು ಎಂದು ಅಭಿಮಾನಿಗಳು ನಿರೀಕ್ಷೆ ಮಾಡುತ್ತಿದ್ದಾರೆ.

Leave A Reply

Your email address will not be published.