ಪ್ರಾಬ್ಲಂ ಏನಿದೆ? ಎಂಜಾಯ್ ಮಾಡೋಣ ಬನ್ನಿ: ನಟಿ ವಿದ್ಯಾ ಬಾಲನ್ ಮಾತಿಗೆ ದಂಗಾಗಿ ಹೋದ ನೆಟ್ಟಿಗರು!!

Entertainment Featured-Articles Movies News

ಬಾಲಿವುಡ್ ನಟ ರಣವೀರ್ ಸಿಂಗ್ ಬೆತ್ತಲೆ ಫೋಟೋ ಶೂಟ್ ವಿಚಾರದ ಕುರಿತಾದ ಚರ್ಚೆಗಳಿಗೆ ಇನ್ನೂ ಬ್ರೇಕ್ ಬಿದ್ದಿಲ್ಲ. ಒಂದು ಕಡೆ ಈಗಾಗಲೇ ನಟನ ಈ ಫೋಟೋ ವಿಚಾರವಾಗಿ ಎನ್ ಜಿ ಓ ಒಂದು ನಟನ ವಿ ರು ದ್ಧ ದೂರನ್ನು ದಾಖಲು ಮಾಡಿದೆ. ಸೋಶಿಯಲ್ ಮೀಡಿಯಾಗಳಲ್ಲಿ ಅನೇಕರು ಇದನ್ನು ಟೀಕೆ ಮಾಡಿದ್ದಾರೆ. ಆದರೆ ಇವೆಲ್ಲವುಗಳ ನಡುವೆಯೇ ಕೆಲವು ಸೆಲೆಬ್ರಿಟಿಗಳು ರಣವೀರ್ ಪರವಾಗಿ ಮಾತನಾಡಿದ್ದಾರೆ. ಕೆಲವು ನಟರು ತಾವು ಬೆತ್ತಲೆ ಟ್ರೆಂಡ್ ಸೇರುತ್ತೇವೆ ಎಂದು ಬಟ್ಟೆ ಬಿಚ್ಚಲು ಮುಂದಾಗಿದ್ದಾರೆ. ರಣವೀರ್ ಹಾದಿಯಲ್ಲಿ ನಡೆಯಲು ಸಜ್ಜಾಗಿದ್ದಾರೆ.

ಹೀಗೆ ಸಾಕಷ್ಟ ಚರ್ಚೆಗಳಿಗೆ ಕಾರಣವಾಗಿ, ಒಂದಷ್ಟು ಟೀಕೆ ಗಳಿಗೆ ಗುರಿಯಾದ ರಣವೀರ್ ಬೆತ್ತಲೆ ಫೋಟೋ ಶೂಟ್ ವಿಚಾರವಾಗಿ ಇದೀಗ ಬಾಲಿವುಡ್ ನಟಿ ವಿದ್ಯಾ ಬಾಲನ್ ಮಾತನಾಡಿದ್ದಾರೆ. ನಟಿ ವಿದ್ಯಾ ಬಾಲನ್ ರಣವೀರ್ ಸಿಂಗ್ ಬೆಂಬಲಕ್ಕೆ ನಿಂತಿದ್ದಾರೆ.
ಈ ವಿಚಾರವಾಗಿ ನಟಿ ವಿದ್ಯಾ ಬಾಲನ್ ತನ್ನದೇ ಆದ ಸ್ಟೈಲ್ ನಲ್ಲಿ ಪ್ರತಿಕ್ರಿಯೆ ನೀಡುತ್ತಾ, ಅರೆ ಕ್ಯಾ ಪ್ರಾಬ್ಲಂ ಹೈ ? ( ಅರೆ ಪ್ರಾಬ್ಲಂ ಏನು ?) ಎಂದು ಪ್ರಶ್ನೆಯನ್ನು ಮಾಡಿದ್ದಾರೆ. ಅಂದರೆ ರಣವೀರ್ ಬೆ ತ್ತಲೆ ಫೋಟೋ ಶೂಟ್ ಮಾಡಿರೋದ್ರಲ್ಲಿ ತಪ್ಪೇನಿದೆ ಎಂದಿದ್ದಾರೆ ವಿದ್ಯಾ ಬಾಲನ್.

ನಟಿ ಪ್ರತಿಕ್ರಿಯೆ ನೀಡುತ್ತಾ, ಇದರಿಂದ ಏನು ತೊಂದರೆ ಆಗಿದೆ‌. ಒಬ್ಬ ವ್ಯಕ್ತಿ ಇದನ್ನು ಮೊದಲು ಬಾರಿ ಮಾಡಿದ್ದಾರೆ. ನಾವು ಅದನ್ನು ಎಂಜಾಯ್ ಮಾಡೋಣ ಎಂದು ಹೇಳಿದ್ದಾರೆ. ಈ ವೇಳೆ ಅವರು ರಣವೀರ್ ಸಿಂಗ್ ವಿ ರು ದ್ಧ ದಾಖಲಾಗಿರುವಂತಹ ಎಫ್ ಐ ಆರ್ ಬಗ್ಗೆ ಸಹಾ ಮಾತನಾಡಿದ್ದು, ಯಾರಿಗಾದರೂ ಮನಸ್ಸಿಗೆ ನೋವು ಆಗುವುದಾದರೆ ಈ ಫೋಟೋಗಳನ್ನು ನೋಡಬೇಡಿ. ದೂರು ನೀಡಿದವರಿಗೆ ಮಾಡೋಕೆ ಬೇರೆ ಏನೂ ಕೆಲಸ ಇರಲಿಲ್ಲ ಅನಿಸುತ್ತೆ. ಅದಕ್ಕೆ ಈ ವಿಷಯಗಳಲ್ಲಿ ಹೆಚ್ಚು ಸಮಯ ವ್ಯರ್ಥ ಮಾಡಿದ್ದಾರೆ.

ನಿಮಗೆ ಇಷ್ಟ ಇಲ್ಲ ಎಂದರೆ ನೋಡಬೇಡಿ. ನೀವು ಬಯಸಿದ್ದನ್ನು ನೋಡಿ. ಇದಕ್ಕೆ ಯಾಕೆ ಎಫ್ ಐ ಆರ್ ದಾಖಲು ಮಾಡುವ ಅಗತ್ಯ ಏನಿದೆ? ಎಂದಿದ್ದಾರೆ ನಟಿ ವಿದ್ಯಾ ಬಾಲನ್. ನಟ ರಣವೀರ್ ಸಿಂಗ್ ಅವರ ಈ ಬೆತ್ತಲೆ ಫೋಟೋಶೂಟ್ ಗೆ ಈಗಾಗಲೇ ಹಲವು ಸೆಲೆಬ್ರಿಟಿಗಳು ಬೆಂಬಲ ನೀಡಿದ್ದಾರೆ. ನಿರ್ಮಾಪಕ ವಿಜಯ್ ಅಗ್ನಿಹೋತ್ರಿ, ನಟಿಯರಾದ ಸ್ವರಾ ಭಾಸ್ಕರ್, ಆಲಿಯಾ ಭಟ್, ನಟ ಅರ್ಜುನ್ ಕಪೂರ್, ನಟಿ ಪೂಜಾ ಬೇಡಿ ಮತ್ತು ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಸೇರಿದಂತೆ ಅನೇಕರು ಬೆಂಬಲ ನೀಡಿದ್ದಾರೆ. 

Leave a Reply

Your email address will not be published.