ಪ್ರಸ್ತುತ ಸಂದರ್ಭಕ್ಕೆ ತಕ್ಕಂತೆ ಸೀನ್ ಮಾಡಿದ್ರಾ? ಅನುಮಾನದ ನಡುವೆ ಅನಿರುದ್ಧ್ ನಟನೆಯ ಕೊನೆ ಸಂಚಿಕೆ ಇಂದು ಪ್ರಸಾರ

Entertainment Health Movies News
58 Views

ಜೊತೆ ಜೊತೆಯಲಿ ಸೀರಿಯಲ್ ಕನ್ನಡ ಕಿರುತೆರೆಯ ಜನಪ್ರಿಯ ಸೀರಿಯಲ್ ಗಳಲ್ಲಿ ಅಗ್ರ ಪಂಕ್ತಿಯಲ್ಲಿ ಇರುವ ಸೀರಿಯಲ್ ಎನ್ನುವುದನ್ನು ಪ್ರತ್ಯೇಕವಾಗಿ ಹೇಳುವ ಅಗತ್ಯ ಇಲ್ಲ. ಒಂದು ವಿಭಿನ್ನವಾದ ಕಥೆಯೊಂದಿಗೆ ಆರಂಭವಾದ ಈ ಸೀರಿಯಲ್ ನಲ್ಲಿ ಪ್ರೇಮ ಹುಟ್ಟುವುದೇ ವಯಸ್ಸಿನಲ್ಲಿ ಬಹಳ ಅಂತರ ಇರುವ ನಾಯಕ ಆರ್ಯವರ್ಧನ್ ಮತ್ತು ನಾಯಕಿ ಅನು ಸಿರಿಮನೆ ನಡುವೆ. ಆದರೆ ಅವರ ಪ್ರೇಮಕ್ಕೆ ವಯಸ್ಸು ಎಂದೂ ಅಡ್ಡಿಯಿಲ್ಲ ಎಂದು ಅವರು ಸಾಬೀತು ಮಾಡಿ, ಒಂದಾದ ನಂತರವೇ ಕಥೆಯಲ್ಲಿ ಸಿಕ್ಕಿದ್ದು ದೊಡ್ಡ ಟ್ವಿಸ್ಟ್. ಅದೇನೆಂದರೆ ಅನು ನಾಯಕ ಆರ್ಯವರ್ಧನ್ ನ ಮೊದಲ ಪತ್ನಿಯಾದ ರಾಜನಂದಿನಿಯ ಪುನರ್ಜನ್ಮ ಎನ್ನುವುದು.

ನಾಯಕಿ ಅನುಗೆ ಹಿಂದಿನ ಜನ್ಮದಲ್ಲಿ ತನ್ನ ಮತ್ತು ತನ್ನ ಸಾವಿಗೆ ಕಾರಣವಾಗಿದ್ದು ಇದೇ ಆರ್ಯವರ್ಧನ್ ಎನ್ನುವುದನ್ನು ತಿಳಿದ ಮೇಲೆ, ತಾನು ಈ ಜನ್ಮದಲ್ಲಿ ಪ್ರೀತಿಸಿ ಮದುವೆಯಾದ ಆರ್ಯ ನನ್ನು ಆದಷ್ಟು ದೂರ ಇಡುವ ಪ್ರಯತ್ನವನ್ನು ಮಾಡುತ್ತಿದ್ದಾಳೆ. ಅವನೊಂದಿಗೆ ಅವಶ್ಯಕತೆ ಇದ್ದಷ್ಟೇ ಮಾತನಾಡುತ್ತಿದ್ದಾಳೆ.‌ ಇದೇ ವೇಳೆ ಆರ್ಯವರ್ಧನ್ ಗೆ ತಾನು ಬಹಳ ಪ್ರೀತಿಸುವ ಅನು ತನ್ನ ಬಗ್ಗೆ ಆಸಕ್ತಿ ತೋರುತ್ತಿಲ್ಲ ಎನ್ನುವುದು ಅರ್ಥವಾಗಿದ್ದು, ಆ ವಿಚಾರದಿಂದಾಗಿ ಹತಾಶೆಗೊಂಡಿದ್ದಾನೆ. ಜೊತೆ ಜೊತೆಯಲಿ ಸೀರಿಯಲ್ ನಲ್ಲಿ ಆರ್ಯವರ್ಧನ್ ಆಗಿ ನಟ ಅನಿರುದ್ಧ್ ಮತ್ತು ಅನು ಆಗಿ ನಟಿ ಮೇಘಾಶೆಟ್ಟಿ ಕಿರುತೆರೆಯ ಪ್ರೇಕ್ಷಕರ ಅಚ್ಚುಮೆಚ್ಚಿನ ಜೋಡಿಯಾಗಿದ್ದಾರೆ.

ಈಗ ಕಥೆಯಲ್ಲಿ ಕಂಡಿರುವ ಹೊಸ ತಿರುವೊಂದರಲ್ಲಿ ಮನೆಯಲ್ಲಿ ಪ್ರೀತಿ ತೋರಿಸಬೇಕಾದ ಮಡದಿಯೇ ನಿರ್ಲಕ್ಷ್ಯ ಮಾಡುತ್ತಿರುವುದರ ಅರಿವಾದ ಆರ್ಯವರ್ಧನ್ , ಆ ಕಹಿ ವಾತಾವರಣದಲ್ಲಿ ಇರುವುದು ಬೇಡ, ತಾನು ಹೇಳಿದ ಸತ್ಯಗಳನ್ನು ನಂಬದ ಕಡೆ ತಾನು ಇರುವುದು ಬೇಡ ಎಂದು ತೀರ್ಮಾನಿಸಿ ಮನೆಯಿಂದ ದೂರ ಹೋಗಲು ನಿರ್ಧರಿಸಿದ್ದು, ಪತ್ರವೊಂದನ್ನು ಬರೆದು, ತನ್ನ ಮನಸ್ಸಿನ ಭಾವನೆಗಳನ್ನು ಅದರಲ್ಲಿ ಹಂಚಿಕೊಂಡು ಮನೆ ಬಿಟ್ಟು ಹೋಗಲು ಸಜ್ಜಾಗಿದ್ದಾ‌ನೆ. ಸೀರಿಯಲ್ ನ ಇಂದಿನ ಎಪಿಸೋಡ್ ನಲ್ಲಿ ಈ ಸನ್ನಿವೇಶ ಪ್ರೇಕ್ಷಕರ ಮುಂದೆ ಬರಲಿದೆ.

ಆದರೆ ಈಗ ಈ ದೃಶ್ಯದ ಕುರಿತಾಗಿ ಹೊಸದೊಂದು ಸುದ್ದಿ ಹರಿದಾಡಿದೆ. ಪ್ರೇಕ್ಷಕರ ಚರ್ಚೆಗೆ ಕಾರಣವಾಗಿದೆ‌. ಹೌದು, ಜೊತೆ ಜೊತೆಯಲಿ ಸೀರಿಯಲ್ ತಂಡಕ್ಕೂ ನಟ ಅನಿರುದ್ಧ್ ಅವರ ನಡುವೆ ನಡೆದ ಒಂದು ಕಹಿ ಘಟನೆಯಿಂದ ನಟನನ್ನು ಸೀರಿಯಲ್ ನಿಂದ ಕೈಬಿಡಲಾಗಿದೆ. ಆರ್ಯವರ್ಧನ್ ಜಾಗಕ್ಕೆ ಹೊಸ ನಟನ ಕರೆ ತರುವ ಪ್ರಯತ್ನಗಳು ನಡೆದಿವೆ. ಇಂತಹ ಸನ್ನಿವೇಶದಲ್ಲಿ ಸೀರಿಯಲ್ ನಲ್ಲಿ ಆರ್ಯವರ್ಧನ್ ಮನೆ ಬಿಟ್ಟು ಹೋಗುವ ದೃಶ್ಯ ಕಂಡಿದ್ದು, ಇದು ಅನಿರುದ್ಧ್ ಅವರ ಕೊನೆಯ ಎಪಿಸೋಡ್ ಆಗಲಿದೆಯಾ? ಎನ್ನುವ ಪ್ರಶ್ನೆಯ ಜೊತೆಗೆ, ಅವರು ಸೀರಿಯನ್ ನಿಂದ ಹೊರ ನಡೆಯುವ ವೇಳೆಗೆ ತಕ್ಕಂತೆ ಈ ಸೀನ್ ಮಾಡಲಾಗಿದ್ಯಾ ಎಂದು ಅನುಮಾನ ವ್ಯಕ್ತವಾಗಿದೆ.

Leave a Reply

Your email address will not be published. Required fields are marked *