ಪ್ರಶಾಂತ್ ಸಂಬರ್ಗಿ ವಿರುದ್ಧ ಪೋಲಿಸ್ ಠಾಣೆ ಮೆಟ್ಟಿಲೇರಿದ ಚಕ್ರವರ್ತಿ ಚಂದ್ರಚೂಡ್: ದಾಖಲಾಯ್ತು ದೂರು

Entertainment Featured-Articles News
51 Views

ಕನ್ನಡ ಬಿಗ್ ಬಾಸ್ ಎಂಟು ಮುಗಿದಾಗಿದೆ. ಬಿಗ್ ಬಾಸ್ ಸ್ಪರ್ಧಿ ಗಳು ಮನೆಯಿಂದ ಹೊರಗೆ ಬಂದ ಮೇಲೆ ಖುಷಿಯಿಂದ ಹಬ್ಬ ಹರಿ ದಿನಗಳನ್ನು ಸಂಭ್ರಮಿಸುತ್ತಿದ್ದಾರೆ. ಮಾದ್ಯಮಗಳ ಸಂದರ್ಶನಗಳಲ್ಲಿ ಭಾಗವಹಿಸಿ ತಮ್ಮ ಜರ್ನಿಯ ಕುರಿತಾಗಿ, ತಮ್ಮ ಜೀವನದ ಕುರಿತಾಗಿ ಆಸಕ್ತಿಕರ ವಿಷಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಆದರೆ ಇವೆಲ್ಲವುಗಳ ನಡುವೆ ಇಬ್ಬರ ನಡುವೆ ಮಾತ್ರ ಒಂದು ಶೀತಲ ಸ ಮ ರವೇ ಪ್ರಾರಂಭವಾಗಿದೆ. ಹೌದು ಪ್ರಶಾಂತ್ ಸಂಬರ್ಗಿ ಮತ್ತು ಚಕ್ರವರ್ತಿ ಚಂದ್ರಚೂಡ್ ನಡುವೆ ಒಂದು ಹೋ ರಾ ಟಕ್ಕೆ ವೇದಿಕೆ ಸಜ್ಜಾಗುತ್ತಿದೆ.

ಪ್ರಶಾಂತ್ ಸಂಬರ್ಗಿ ಸ್ಯಾಂಡಲ್ವುಡ್ ಡ್ರ ಗ್ಸ್ ವಿಚಾರ ಸದ್ದು ಮಾಡಿದಾಗಲೆಲ್ಲಾ, ಸಂಚಲನ ಹುಟ್ಟಿಸುವ ಹೇಳಿಕೆಗಳನ್ನು ನೀಡುವುದು, ಮಾದ್ಯಮಗಳ ಮುಂದೆ ಮಾತನಾಡಿ ಕೆಲವರ ಮೇಲೆ ಆ ರೋ ಪ ಮಾಡುವುದು ಸಾಮಾನ್ಯ ಎನಿಸಿದೆ. ಬಿಗ್ ಬಾಸ್ ಮನೆಯಿಂದ ಬಂದ ಮೇಲೆ ಕೆಲವೇ ದಿನಗಳ ಹಿಂದೆ ಪ್ರಶಾಂತ್ ಸಂಬರ್ಗಿ ಇದೇ ವಿಚಾರವಾಗಿ ಮಾದ್ಯಮಗಳಲ್ಲಿ ಮತ್ತೆ ಸುದ್ದಿಯಾಗಿದ್ದಾರೆ.

ಪ್ರಶಾಂತ್ ಸಂಬರ್ಗಿ ಆಡುವ ಮಾತುಗಳಿಗೆ ಅಸಮಾಧಾನ ವ್ಯಕ್ತಪಡಿಸಿ, ಸಿಟ್ಟನ್ನು ವ್ಯಕ್ತಪಡಿಸುತ್ತಾ ಚಕ್ರವರ್ತಿ ಚಂದ್ರಚೂಡ್ ಕೆಲವು ದಿನಗಳ ಹಿಂದೆ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಸುದೀರ್ಘ ಬರಹವನ್ನು ಹಾಕಿ ಪ್ರಶಾಂತ್ ಸಂಬರ್ಗಿ ಅಸಲಿಯತ್ತು ಇದು ಎನ್ನುವ ಹಾಗೆ ಹಲವು ಹೊಸ ಹೊಸ ವಿಚಾರಗಳನ್ನು ತಿಳಿಸಿದ್ದರು. ಈಗ ಅವರು ಪ್ರಶಾಂತ್ ಸಂಬರ್ಗಿ ವಿ ರು ದ್ಧ ಇನ್ನೊಂದು ಹೆಜ್ಜೆ ಮುಂದೆ ಇಟ್ಟಿದ್ದಾರೆ.

ಡ್ರ ಗ್ಸ್ ಪ್ರಕರಣದ ವಿಚಾರವಾಗಿ ಪದೇ ಪದೇ ಗಂಭೀರ ಆರೋಪಗಳನ್ನು ಮಾಡುತ್ತಿರುವ ಸಾಮಾಜಿಕ ಕಾರ್ಯಕರ್ತ, ಹೋರಾಟಗಾರ ಎಂದೆಲ್ಲಾ ಹೆಸರಾಗಿರುವ ಪ್ರಶಾಂತ್ ಸಂಬರ್ಗಿ ವಿ ರು ದ್ಧ ನಿರ್ದೇಶಕ, ಪತ್ರಕರ್ತ ಆಗಿರುವ ಚಕ್ರವರ್ತಿ ಚಂದ್ರಚೂಡ್ ಇಂದು ಬೆಂಗಳೂರು ಪೋಲಿಸ್ ಆಯುಕ್ತರಾದ ಕಮಲ್ ಪಂತ್ ಅವರನ್ನು ಭೇಟಿ ಮಾಡಿ ದೂರನ್ನು ನೀಡಿದ್ದಾರೆ. ಈ ವಿಷಯ ಇದೀಗ ಎಲ್ಲೆಡೆ ಸುದ್ದಿಯಾಗಿದೆ.

ಚಕ್ರವರ್ತಿ ಚಂದ್ರಚೂಡ್, ಪ್ರಶಾಂತ್ ಸಂಬರ್ಗಿ ಮೇಲೆ ಸೂಕ್ತ ಕ್ರಮವನ್ನು ಜರುಗಿಸುವಂತೆ ಲಿಖಿತ ದೂರು ನೀಡಿದ್ದಾರೆ ಎನ್ನಲಾಗಿದೆ. ಅವರು ತಮ್ಮ ದೂರಿನಲ್ಲಿ ಸಂಬರ್ಗಿ ಓರ್ವ ಬ್ಲಾ ಕ್​ ಮೇ ಲ ರ್, ಆತ ಯಾವುದೇ ಆಧಾರಗಳ ತನ್ನಲ್ಲಿ ಇಲ್ಲದೇ ಅನಗತ್ಯವಾಗಿ ನಟ ನಟಿಯರನ್ನು ಟಾರ್ಗೆಟ್ ಮಾಡ್ತಿದ್ದಾರೆ ಎಂದು ಆರೋಪವನ್ನು ದಾಖಲು ಮಾಡಿದ್ದಾರೆಂದು ತಿಳಿದು ಬಂದಿದೆ. ಈ ವಿಷಯ ಸೋಶಿಯಲ್ ಮೀಡಿಯಾ ದಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಚಕ್ರವರ್ತಿ ಅವರು, ಪ್ರಶಾಂತ್ ಸಂಬರ್ಗಿ ವಿರುದ್ಧ ಪೋಲೀಸ್ ಕಮಿಷನರ್ ಕಮಲ್ ಪಂಥ್ ಅವರಿಗೆ ದೂರು ನೀಡಲಾಯಿತು.ಇಪ್ಪತ್ತು ನಿಮಿಷಗಳ ಕಾಲ ನಮ್ಮ ವಿವರಣೆ ಕೇಳಿದ ಕಮಿಷನರ್ ತೋಳದ ಕಥೆಯೊಂದನ್ನು ಮಾರ್ಮಿಕವಾಗಿ ಹೇಳಿದರು.ಸಿಸಿಬಿ ಯವರಿಗೆ ಪ್ರಕರಣವನ್ನು ವರ್ಗಾಯಿಸಲಾಗಿದೆ. ಜೊತೆಯಲ್ಲಿ ವಕೀಲರಾದ ಸೂರ್ಯ ಮುಕುಂದರಾಜ್ ಇದ್ದರೆಂದು ಬರೆದುಕೊಂಡಿದ್ದಾರೆ.

Leave a Reply

Your email address will not be published. Required fields are marked *