ಪ್ರಶಾಂತ್ ನೀಲ್ ಸಿನಿಮಾದಲ್ಲಿ NTR ಪಾತ್ರಕ್ಕೆ ಸಖತ್ ಟ್ವಿಸ್ಟ್: NTR ವಿಲನ್ ಆದ್ರೆ ಹೀರೋ ಯಾರು?

Entertainment Featured-Articles Movies News

ನಿರ್ದೇಶಕ ಪ್ರಶಾಂತ್ ನೀಲ್ ಪ್ರಸ್ತುತ ಸ್ಟಾರ್ ನಿರ್ದೇಶಕ ರ ಸಾಲಿಗೆ ಸೇರ್ಪಡೆಯಾಗಿರುವ ದಕ್ಷಿಣ ಸಿನಿಮಾ ರಂಗದ ಯಶಸ್ವಿ ನಿರ್ದೇಶಕ ಆಗಿದ್ದಾರೆ. ಸ್ಯಾಂಡಲ್ವುಡ್ ಸಿನಿಮಾ ನಿರ್ದೇಶನದ ಮೂಲಕ ತಮ್ಮ‌ ಜರ್ನಿಯನ್ನು ಆರಂಭಿಸಿದ ಪ್ರಶಾಂತ್ ನೀಲ್ ಕೆಜಿಎಫ್ ಸರಣಿ ಸಿನಿಮಾಗಳ ಮೂಲಕ ಪಡೆದ ಯಶಸ್ಸು ಅವರಿಗೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಜನಪ್ರಿಯತೆಯನ್ನು ತಂದು ಕೊಟ್ಟಿದೆ. ಕೆಜಿಎಫ್ ನಂತರ ಟಾಲಿವುಡ್ ನಲ್ಲಿ ಬ್ಯುಸಿಯಾಗಿರುವ ಅವರು ನಟ ಪ್ರಭಾಸ್ ನಾಯಕನಾಗಿರುವ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ಸಲಾರ್ ಅನ್ನು ನಿರ್ದೇಶನ ಮಾಡುತ್ತಿದ್ದಾರೆ. ಅಲ್ಲದೇ ಅವರು ಮುಂದಿನ ದಿನಗಳಲ್ಲಿ ತೆಲುಗಿನ ಸ್ಟಾರ್ ನಟ ಸಿನಿಮಾಗಳನ್ನು ನಿರ್ದೇಶನ ಮಾಡುವ ವಿಚಾರವಾಗಿ ಸಾಕಷ್ಟು ಸುದ್ದಿಗಳಾಗಿದೆ.

ಪ್ರಶಾಂತ್ ನೀಲ್ ಮತ್ತು ಟಾಲಿವುಡ್ ನ ಸ್ಟಾರ್ ನಟ ಜೂನಿಯರ್ ಎನ್ ಟಿ ಆರ್ ಇಬ್ಬರೂ ಹೊಸ ಸಿನಿಮಾ ಮಾಡಲಿರುವ ವಿಚಾರ ಬಹಳ ದಿನಗಳ ಹಿಂದೆಯೇ ಅಧಿಕೃತವಾಗಿ ಘೋಷಣೆಯಾಗಿದೆ. ಅಲ್ಲದೇ ಈ ವಿಚಾರವಾಗಿ ಸುದ್ದಿಗಳು ಹೊರ ಬಂದಾಗ ಅಭಿಮಾನಿಗಳು ಖುಷಿ ಪಟ್ಟಿದ್ದಾರೆ. ಪ್ರಸ್ತುತ ಎನ್ ಟಿ ಆರ್ ಅವರು ಬೇರೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಪ್ರಶಾಂತ್ ನೀಲ್ ಸಹಾ ಸಲಾರ್ ಸಿನಿಮಾ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಎನ್ ಟಿ ಆರ್ ಮತ್ತು ಪ್ರಶಾಂತ್ ನೀಲ್ ಅವರು ತಮ್ಮ ಪ್ರಸ್ತುತ ಪ್ರಾಜೆಕ್ಟ್ ಗಳನ್ನು ಮುಗಿಸಿದ ನಂತರ ಈ ಜೋಡಿಯ ಕಾಂಬಿನೇಷನ್ ನ ಹೊಸ ಸಿನಿಮಾ ಸೆಟ್ಟೇರಲಿದೆ ಎನ್ನಲಾಗಿದೆ.

ಈಗ ಇವೆಲ್ಲವುಗಳ ಬೆನ್ನಲ್ಲೇ ಪ್ರಶಾಂತ್ ನೀಲ್ ಮತ್ತು ಎನ್ ಟಿ ಆರ್ ಕಾಂಬಿನೇಷನ್ ನ NTR31 ಸಿನಿಮಾದ ಕುರಿತಾಗಿ ಒಂದು ಹೊಸ ಅಪ್ಡೇಟ್ ಒಂದು ಟಾಲಿವುಡ್ ಅಂಗಳದಲ್ಲಿ ಹೊರ ಬಂದಿದ್ದು, ಈ ವಿಷಯ ಕೇಳಿ ಅಭಿಮಾನಿಗಳು ಥ್ರಿಲ್ ಆಗಿರುವುದು ಮಾತ್ರವೇ ಅಲ್ಲದೇ ಸಿನಿಮಾ ಆರಂಭಕ್ಕೂ ಮೊದಲೇ ಸಿಕ್ಕಾಪಟ್ಟೆ ಕ್ರೇಜ್ ಹುಟ್ಟು ಹಾಕುತ್ತಿದೆ. ಅಭಿಮಾನಿಗಳಿಗೆ ಇಷ್ಟೊಂದು ಥ್ರಿಲ್ ಉಂಟು ಮಾಡಿರುವ ವಿಚಾರ ಏನೆಂದು ತಿಳಿಯುವ ಕುತೂಹಲ ಈಗ ನಿಮಗೂ ಮೂಡಿದ್ದರೆ ಅದಕ್ಕೆ ಇಲ್ಲಿದೆ ಉತ್ತರ. ಈ ಹೊಸ ಅಪ್ಡೇಟ್ ಖಂಡಿತ ಅಚ್ಚರಿಯನ್ನು ಮೂಡಿಸಿದೆ.

ಟಾಲಿವುಡ್ ನಲ್ಲಿ ಹರಿದಾಡಿರುವ ಸುದ್ದಿಗಳ ಪ್ರಕಾರ ಪ್ರಶಾಂತ್ ನೀಲ್ ಅವರ ನಿರ್ದೇಶನದ ಹೊಸ ಸಿನಿಮಾದಲ್ಲಿ ಎನ್ ಟಿ ಆರ್ ಎರಡು ರೀತಿಯ ಪಾತ್ರಗಳನ್ನು ನಿರ್ವಹಿಸಲಿದ್ದಾರೆ ಎನ್ನಲಾಗುತ್ತಿದೆ. ಹೌದು, ಈ ಸಿನಿಮಾದಲ್ಲಿ ನಾಯಕನ ಪಾತ್ರ ಮತ್ತು ಖಳನಾಯಕನ ಪಾತ್ರ ಎರಡನ್ನೂ ಸಹಾ ನಟ ಎನ್ ಟಿ ಆರ್ ಅವರೇ ಮಾಡಲಿದ್ದಾರೆ ಎನ್ನಲಾಗಿದ್ದು, ಈ ಸಿನಿಮಾದಲ್ಲಿ ಎನ್ ಟಿ ಆರ್ ಅಭಿಮಾನಿಗಳಿಗೆ ನಾಯಕನಾಗಿ ಮಾತ್ರವೇ ಅಲ್ಲದೇ ವಿಲನ್ ಆಗಿ ಸಹಾ ಭರ್ಜರಿ ಮನರಂಜನೆಯನ್ನು ನೀಡುತ್ತಾರೆ ಎನ್ನಲಾಗಿದ್ದು, ಈ ವಿಚಾರ ತಿಳಿದ ಅಭಿಮಾನಿಗಳು ಥ್ರಿಲ್ಲಾಗಿದ್ದಾರೆ.

Leave a Reply

Your email address will not be published.