ಟ್ರೋಲಿಂಗ್ ಎನ್ನುವುದು ಪ್ರಸ್ತುತ ಸೋಶಿಯಲ್ ಮೀಡಿಯಾಗಳಲ್ಲಿ ಸಾಮಾನ್ಯ ಎನಿಸಿದೆ. ಕೆಲವೊಮ್ಮೆ ಟ್ರೋಲ್ ಗಳು ಸೆಲೆಬ್ರಿಟಿಗಳಿಗೆ ಮುಜುಗರ ಉಂಟು ಮಾಡಿದರೆ, ಇನ್ನೂ ಅನೇಕ ಬಾರಿ ಟ್ರೋಲ್ ಗಳಿಂದ ಸೆಲೆಬ್ರಿಟಿಗಳು ತಮ್ಮನ್ನು ತಾವು ತಿದ್ದಿ ಕೊಂಡು, ಮುಂದೆ ಅಂತಹ ಟ್ರೋಲ್ ಗೆ ಆಹಾರ ಆಗಬಾರದು ಎಂದು ಬಹಳ ಎಚ್ಚರ ವಹಿಸುತ್ತಾರೆ. ಆದರೆ ನಟಿ ರಶ್ಮಿಕಾ ವಿಷಯದಲ್ಲಿ ಮಾತ್ರ ಇದು ಏಕೋ ಆಗುತ್ತಲೇ ಇಲ್ಲ ಎನ್ನುವುದು ವಾಸ್ತವ. ಏಕೆಂದರೆ ಈ ನಟಿಯಷ್ಟು ಟ್ರೋಲ್ ಗೆ ಆಹಾರವಾಗೋ ನಟಿ ಇನ್ನೊಬ್ಬರಿಲ್ಲ ಎನ್ನಬಹುದು.
ನಟಿ ರಶ್ಮಿಕಾ ಮತ್ತೆ ಮತ್ತೆ ಮಾಡಿದ ತಪ್ಪನ್ನೇ ಮಾಡುವ ಮೂಲಕ ಟ್ರೋಲಿಗರಿಗೆ ಭರ್ಜರಿ ಕಂಟೆಂಟ್ ಕೊಡುತ್ತಾರೆ. ಇದು ನಟಿಯ ಅಮಾಯತನವೋ ಅಥವಾ ಸದಾ ಸುದ್ದಿಯಲ್ಲಿರಲು ಅನುಸರಿಸುವ ಜಾಣ್ಮೆಯೋ ಗೊತ್ತಿಲ್ಲ. ಸದ್ಯಕ್ಕಂತೂ ಕೈ ತುಂಬಾ ಅವಕಾಶಗಳನ್ನು ಪಡೆದು ಸ್ಟಾರ್ ನಟಿಯಾಗಿದ್ದಾರೆ ರಶ್ಮಿಕಾ. ಆದರೆ ತನ್ನ ಸಿಕ್ಕ ಸ್ಟಾರ್ ಗಿರಿ, ಜನಪ್ರಿಯತೆ ಹೊರತಾಗಿ ವೇದಿಕೆಗಳಲ್ಲಿ ಗಾಂಭೀರ್ಯತೆ ಮೆರೆಯದ ರಶ್ಮಿಕಾ ಟ್ರೋಲ್ ಆಗೋದು ಸಹಜ ಎನ್ನುವಂತೆ ಆಗಿದೆ.
ಇದಕ್ಕೆ ಲೇಟೆಸ್ಟ್ ಉದಾಹರಣೆ ಮೊನ್ನೆ ಮೊನ್ನೆ ಬೆಂಗಳೂರಿನಲ್ಲಿ ನಡೆದ ಪುಷ್ಪ ಸಿನಿಮಾದ ಪ್ರಮೋಷನ್. ಆ ವೇಳೆ ಹೆಸರಿಗೆ, ಸಿನಿಮಾ ನಾಯಕಿ ಎನ್ನುವ ಕಾರಣಕ್ಕೆ ಅವರನ್ನು ವೇದಿಕೆ ಮೇಲೆ ಕೂರಿಸಿದ ಹಾಗಿತ್ತು. ಬಹಳ ವಿಷಯಗಳಿಗೆ ರಶ್ಮಿಕಾ ಬದಲಿಗೆ ಅಲ್ಲು ಅರ್ಜುನ್ ಅವರೇ ಉತ್ತರ ನೀಡಿದ್ದು ನೋಡಿದಾಗ ಬಹುಶಃ ರಶ್ಮಿಕಾ ಮಾತನಾಡಿದರೆ ಅದು ಮತ್ತೇನೋ ಆಗಬಹುದು ಎನ್ನುವ ಕಾರಣಕ್ಕೆ ಅಲ್ಲು ಅರ್ಜುನ್ ಅವರೇ ಉತ್ತರ ಕೊಟ್ರಾ ಎನ್ನುವ ಹಾಗಿತ್ತು.
ಕೊನೆಗೆ ಮಾತನಾಡಿದ ರಶ್ಮಿಕಾ ಕನ್ನಡ ಕಷ್ಟವಾಗ್ತಿದೆ, ಡಬ್ ಮಾಡೋಕೆ ಟೈಮ್ ಇಲ್ಲ ಅದು ಇದು ಎಂದು ತನ್ನ ಹಳೇ ಸ್ಟೈಲ್ ತೋರಿಸಿ ಜನರ ಅಸಮಾಧಾನಕ್ಕೆ ಕಾರಣರಾದರು. ಇದೆಲ್ಲಾ ಮುಗಿದ ಮೇಲೆ ಸಿನಿಮಾ ತಂಡ ಪ್ರಮೋಷನ್ ಗಾಗಿ ಕೇರಳಕ್ಕೆ ತೆರಳಿತು. ಪುಷ್ಪ ಸಿನಿಮಾ ಮಲೆಯಾಳಂ ನಲ್ಲಿ ಕೂಡಾ ಬಿಡುಗಡೆ ಆಗಿದೆ. ಆದ ಕಾರಣ ಸಿನಿಮಾ ಪ್ರಮೋಷನ್ ಗಾಗಿ ಕೇರಳಕ್ಕೆ ಹೋಯಿತು ಚಿತ್ರ ತಂಡ. ಈಗ ಅಲ್ಲಿ ಪ್ರಮೋಷನ್ ವೇಳೆ ರಶ್ಮಿಕಾ ತೊಟ್ಟ ಡ್ರೆಸ್ ದೊಡ್ದ ಸದ್ದು ಮಾಡಿದೆ, ಟ್ರೋಲ್ ಆಗಿದೆ.
ಹೌದು ಕೇರಳದಲ್ಲಿ ಸಿನಿಮಾ ಪ್ರಮೋಷನ್ ಗೆ ಹೋದಾಗ ರಶ್ಮಿಕಾ ಧರಿಸಿದ ಡ್ರೆಸ್ ಕ್ಯಾಮೆರಾ ಕಣ್ಣುಗಳನ್ನು ಕುಕ್ಕಿದರೆ, ಅಭಿಮಾನಿಗಳು ಹಾಗೂ ಪಡ್ಡೆಗಳಿಗೆ ಖುಷಿ ನೀಡಿದೆ. ಆದರೆ ತಮ್ಮ ಆ ಭಾಗ ಕಾಣುವಂತೆ ರಶ್ಮಿಕಾ ಧರಿಸಿದ್ದ ಡ್ರೆಸ್ ನ ಫೋಟೋಗಳು ವೈರಲ್ ಆದ ಮೇಲೆ ಅಭಿಮಾನಿಗಳು ಹೊಗಳಿದರೆ, ನೆಟ್ಟಿಗರು ಮುಜುಗರ ಪಡುತ್ತಿದ್ದಾರೆ, ಅಲ್ಲದೇ ಕೇರಳದಲ್ಲೂ ಅವಕಾಶ ಪಡೆಯುವ ಪ್ರಯತ್ನ ಇರಬಹುದಾ?? ಇದು ಎಂದು ಕೆಲವರು ಟೀಕೆ ಮಾಡಿದ್ದಾರೆ.
ರಶ್ಮಿಕಾ ಈ ಬೋಲ್ಡ್ ಡ್ರೆಸ್ ಧರಿಸಿದ್ದು ನೋಡಿ ಕೆಲವರು ಇದು ಹಾಟ್, ಬೋಲ್ಡ್ , ಸ್ಟನ್ನಿಂಗ್ ಎಂದರೆ, ಇನ್ನೂ ಕೆಲವರು ಇಂತಹ ಡ್ರೆಸ್ ಗಳು ಸಿನಿಮಾಗಳಲ್ಲಿ ಇದ್ದರೆ ಚೆನ್ನ, ಅದರ ಬದಲಾಗಿ ಸಾರ್ವಜನಿಕ ಕಾರ್ಯಕ್ರಮಗಳಲ್ಲೂ ಇದರ ಅವಶ್ಯಕತೆ ಇದೆಯಾ?? ಎಂದರೆ, ಇನ್ನೂ ಕೆಲವರು ನಿಮ್ಮ ಮೈಂಡ್ ಸೆಟ್ ಚೇಂಜ್ ಮಾಡಿಕೊಳ್ಳಿ, ಇದೆಲ್ಲಾ ಈಗ ಫ್ಯಾಷನ್ ಎಂದು ರಶ್ಮಿಕಾ ಪರವಾಗಿ ಬ್ಯಾಟಿಂಗ್ ಮಾಡಿದ್ದಾರೆ.