ಪ್ರಮುಖ ಪಾತ್ರವನ್ನು ತಿರಸ್ಕರಿಸಿದ ರಾಧಿಕಾ ಪಂಡಿತ್: ನಟನೆಗೆ ಇನ್ನು ಗುಡ್ ಬೈ ಅಂದ್ರಾ??

0 5

ಕನ್ನಡ ಚಿತ್ರರಂಗದಲ್ಲಿ ಹಲವು ನಟಿಯರು ಕಿರುತೆರೆಯಿಂದ ಬೆಳ್ಳಿತೆರೆಗೆ ಪಾದರ್ಪಣೆ ಮಾಡಿದವರಾಗಿದ್ದಾರೆ. ಹೀಗೆ ಕಿರುತೆರೆಯಿಂದ ಬಂದ ಕೆಲವು ನಟಿಯರು ಚಿತ್ರರಂಗದಲ್ಲಿ ದೊಡ್ಡ ಮಟ್ಟದ ಯಶಸ್ಸು ಹಾಗೂ ಜನಪ್ರಿಯತೆಯನ್ನು ಪಡೆದುಕೊಳ್ಳುವ ಮೂಲಕ ಸ್ಟಾರ್ ನಟಿಯರ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಅಂತಹ ನಟಿಯರ ಸಾಲಿನಲ್ಲಿ ನಟಿ ರಾಧಿಕಾ ಪಂಡಿತ್ ಅವರು ಕೂಡಾ ಸೇರಿದ್ದಾರೆ. ಪ್ರಸ್ತುತ ರಾಧಿಕಾ ಪಂಡಿತ್ ಅವರು ನಟನೆಯಿಂದ ದೂರ ಉಳಿದಿದ್ದಾರೆ ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಅವರು ಸಾಕಷ್ಟು ಸಕ್ರಿಯರಾಗಿದ್ದಾರೆ.

ನಟಿ ರಾಧಿಕಾ ಪಂಡಿತ್ ಸಿನಿಮಾ ರಂಗಕ್ಕೆ ಬಂದ ಕೆಲವೇ ವರ್ಷಗಳಲ್ಲಿ ಕನ್ನಡ ಸಿನಿಮಾರಂಗದ ಸ್ಟಾರ್ ನಟಿಯ ಪಟ್ಟವನ್ನು ಅಲಂಕರಿಸಿದ್ದರು. ಆದರೆ ಮದುವೆಯ ನಂತರ ಅವರು ತಮ್ಮ ಖಾಸಗಿ ಜೀವನಕ್ಕೆ ಹೆಚ್ಚಿನ ಒತ್ತನ್ನು ನೀಡಿದ್ದು, ನಟಿ ರಾಧಿಕಾ ಪಂಡಿತ್ ಅವರು ನಟನೆಯಿಂದ ದೂರವೇ ಉಳಿದಿದ್ದಾರೆ. ಆದರೆ ಅವರ ಅಭಿಮಾನಿಗಳು ಮಾತ್ರ ರಾಧಿಕಾ ಪಂಡಿತ್ ಅವರನ್ನು ತೆರೆಯ ಮೇಲೆ ಮತ್ತೊಮ್ಮೆ ನೋಡುವ ನೂರು ನಿರೀಕ್ಷೆಗಳನ್ನು ಇಟ್ಟುಕೊಂಡು ಕಾಯುತ್ತಿದ್ದಾರೆ.

ನಟಿ ರಾಧಿಕಾ ಪಂಡಿತ್ ಅವರು ತಮ್ಮ ವೈಯಕ್ತಿಕ ಜೀವನದ ವಿಶೇಷ ಕ್ಷಣಗಳ ಕುರಿತಾಗಿ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿಯನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳ ಸಂಪರ್ಕದಲ್ಲಿದ್ದಾರೆ. ಈ ನಟಿಯ ಸಿನಿಮಾಗಳಿಂದ ದೂರವುಳಿದಿದ್ದರು ಕೂಡಾ ಅವರನ್ನು ಅರಸಿ ಹೊಸ ಸಿ‌ನಿಮಾಗಳ ಅವಕಾಶಗಳು ಬರುತ್ತಲೇ ಇರುತ್ತವೆ ಎಂದು ಹೇಳಲಾಗಿದೆ. ಆದರೆ ಬರುವ ಅವಕಾಶಗಳನ್ನು ರಾಧಿಕಾ ಪಂಡಿತ್ ಅವರೇ ತಿರಸ್ಕರಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಮಾಹಿತಿಗಳ ಪ್ರಕಾರ ಕನ್ನಡ ಸಿನಿಮಾ ಡಿಎನ್ಎ ಚಿತ್ರತಂಡವು ಸಿನಿಮಾದ ಪ್ರಮುಖ ಪಾತ್ರವೊಂದನ್ನು ಮಾಡಲು ರಾಧಿಕಾ ಪಂಡಿತ ಅವರನ್ನು ಕೇಳಿದ್ದರು ಎನ್ನಲಾಗಿದೆ. ಅಲ್ಲದೇ ರಾಧಿಕಾ ಅವರಿಗೆ ಸಿನಿಮಾ ಕಥೆಯು ಸಹಾ ತುಂಬಾ ಇಷ್ಟವಾಗಿತ್ತು ಎನ್ನಲಾಗಿದೆ. ಆದರೆ ಅವರು ತಾನು ತಾಯಿಯ ಪಾತ್ರದಲ್ಲಿ ನಟಿಸುವುದಿಲ್ಲ ಎಂದು ಹೇಳಿದರು ಎನ್ನುವ ವಿಷಯ ಈಗ ಸುದ್ದಿಯಾಗಿದೆ. ರಾಧಿಕಾ ಅವರು ಪಾತ್ರ ಮಾಡಲು ಒಪ್ಪದೇ ಇದ್ದ ಕಾರಣ ಆ ಪಾತ್ರಕ್ಕೆ ಚಿತ್ರತಂಡ ಬೇರೆ ನಟಿಯನ್ನು ಕರೆ ತರಬೇಕಾಯಿತು.

ರಾಧಿಕಾ ಪಂಡಿತ್ ಅವರು ಸಿನಿಮಾಗಳಿಂದ ಅಂತರವನ್ನು ಕಾಯ್ದುಕೊಂಡು ಬರೋಬ್ಬರಿ ಆರು ವರ್ಷಗಳು ಕಳೆದಿದೆ. ಈ ಅವಧಿಯಲ್ಲಿ ಅವರಿಗೆ ಹಲವು ಸಿನಿಮಾಗಳ ಆಫರ್ ಗಳನ್ನು ಬಂದಿದೆ. ಆದರೆ ರಾಧಿಕಾ ಅವರು ಯಾವ ಸಿನಿಮಾಗಳನ್ನೂ ಸಹಾ ಒಪ್ಪಿಕೊಳ್ಳುತ್ತಿಲ್ಲ. ಅವರು ಹೀಗೆ ಸಿನಿಮಾಗಳನ್ನು ಮಾಡದೇ ಇರುವುದು, ಅವರು ಇನ್ನು ಮುಂದೆ ಸಿನಿಮಾಗಳನ್ನೇ ಮಾಡುವುದೇ ಇಲ್ಲವೇನೋ? ಎನ್ನುವ ಅನುಮಾನವೊಂದಕ್ಕೆ ಕಾರಣವಾಗಿದೆ.

Leave A Reply

Your email address will not be published.