HomeEntertainmentಪ್ರಮುಖ ಕಂಪನಿಯ ರಾಯಭಾರಿ ಸ್ಥಾನದಿಂದ ರಶ್ಮಿಕಾ ವಜಾ: ಬೇರೊಬ್ಬ ಸ್ಟಾರ್ ನಟಿಯ ಎಂಟ್ರಿ

ಪ್ರಮುಖ ಕಂಪನಿಯ ರಾಯಭಾರಿ ಸ್ಥಾನದಿಂದ ರಶ್ಮಿಕಾ ವಜಾ: ಬೇರೊಬ್ಬ ಸ್ಟಾರ್ ನಟಿಯ ಎಂಟ್ರಿ

ಸ್ಯಾಂಡಲ್ವುಡ್ ನಿಂದ ಹೆಸರು ಪಡೆದ ನಟಿ ರಶ್ಮಿಕಾ ಮಂದಣ್ಣ ಅತಿ ಕಡಿಮೆ ಸಮಯದಲ್ಲಿ ದೊಡ್ಡ ಹೆಸರನ್ನು ಮಾಡಿದ್ದರು. ಪುಷ್ಪ ಸಿನಿಮಾದ ನಂತರ ರಶ್ಮಿಕ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಇನ್ನಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ. ಒಂದರ್ಥದಲ್ಲಿ ಪುಷ್ಪ ಸಿನಿಮಾ ನಂತರ  ನಟಿ ರಶ್ಮಿಕಾ ಕ್ರೇಜ್ ದುಪ್ಪಟ್ಟಾಗಿದೆ. ದಕ್ಷಿಣದ ಸಿನಿಮಾಗಳು ಮಾತ್ರವೇ ಅಲ್ಲದೇ ಬಾಲಿವುಡ್ ನಲ್ಲೂ ನಟಿ ದೊಡ್ಡ ಮಟ್ಟದಲ್ಲಿ ಅವಕಾಶಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಬಾಲಿವುಡ್ ನಲ್ಲಿ ನಟಿಯ ಬಿಡುಗಡೆಯಾದ ಮೊದಲ ಸಿನಿಮಾ ಯಶಸ್ಸನ್ನು ಪಡೆಯದೆ ಹೋದರೂ ನಟಿಗೆ ಅವಕಾಶಗಳ ಕೊರತೆ ಉಂಟಾಗಿಲ್ಲ ಎನ್ನುವ ಮಾತು ಸಹ ಕೇಳಿ ಬರುತ್ತಿದೆ. ಆದರೆ ಇವೆಲ್ಲವುಗಳ ನಡುವೆಯೇ ನಟಿ ರಶ್ಮಿಕಾ ಇತ್ತೀಚೆಗೆ ಒಂದು ದೊಡ್ಡ ವಿ ವಾ ದ ದಲ್ಲಿ ಸಿಲುಕಿಕೊಂಡಿರುವ ವಿಷಯ ಈಗಾಗಲೇ ದೊಡ್ಡ ಸುದ್ದಿಯಾಗಿದೆ.

ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಅಡಿ ಇಟ್ಟ ರಶ್ಮಿಕಾ ಮಂದಣ್ಣ ಆ ಸಿನಿಮಾದ ದೊಡ್ಡ ಯಶಸ್ಸಿನಿಂದ ಸಾಕಷ್ಟು ಅವಕಾಶಗಳನ್ನು ಪಡೆದುಕೊಂಡರು. ತೆಲುಗು ಚಿತ್ರರಂಗದಲ್ಲಿ ಬಹಳ ಬೇಗ ಸ್ಟಾರ್ ನಟಿಯಾಗಿ ಬೆಳೆದರು. ಅಲ್ಲದೇ ಬಾಲಿವುಡ್ ನಲ್ಲಿ ಅವಕಾಶವನ್ನು ಪಡೆದುಕೊಂಡ ನಟಿ ಇತ್ತೀಚೆಗೆ, ಕಾಂತರಾ ಸಿನಿಮಾದ ಬಗ್ಗೆ ಮಾತನಾಡಿ ಜನರ ಅಸಮಾಧಾನಕ್ಕೆ ಕಾರಣವಾಗಿದ್ದರು. ಇಡೀ ದೇಶ ಮೆಚ್ಚಿರುವ ಕಾಂತರಾ ಸಿನಿಮಾ ವನ್ನು ನೀವು ನೋಡಿದ್ದೀರಾ? ಎಂದು ಮಾಧ್ಯಮಗಳು ಪ್ರಶ್ನೆ ಮಾಡಿದಾಗ, ನಟಿಯು ಇನ್ನೂ ಸಿನಿಮಾ ನೋಡಿಲ್ಲ ಎನ್ನುವ ಮಾತನ್ನು ಹೇಳಿದ್ದರು. ಅದು ಸಾಲದೆಂಬಂತೆ ಸಂದರ್ಶನ ಒಂದರಲ್ಲಿ ತಮ್ಮ ಮೊದಲ ಸಿನಿಮಾ ಮತ್ತು ಆ ಸಿನಿಮಾ ನಿರ್ಮಾಣ ಸಂಸ್ಥೆಯ ಕುರಿತಾಗಿ ಕೂಡಾ ವ್ಯಂಗ್ಯವಾಗಿ ಮಾತನಾಡಿದರು.

ನಟಿ ವ್ಯಂಗ್ಯ ಮಾಡಿದ ದೃಶ್ಯವನ್ನು ಒಳಗೊಂಡ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಮೇಲೆ ಕನ್ನಡ ಸಿನಿಮಾ ರಂಗದಿಂದ ರಶ್ಮಿಕಾ ಅವರನ್ನು ಬ್ಯಾನ್ ಮಾಡಲು ಸಿದ್ಧತೆಗಳು ನಡೆಯುತ್ತಿದೆ ಎನ್ನುವ ಸುದ್ದಿಗಳು ಹರಿದಾಡಿದವು. ಅಲ್ಲದೇ ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡಿಗರು ಸಹಾ ನಟಿಯ ಮೇಲೆ ತಮ್ಮ ಸಿ ಟ್ಟು ಮತ್ತು ಅಸಮಾಧಾನವನ್ನು ಹೊರ ಹಾಕುತ್ತಾ, ರಶ್ಮಿಕಾ ಅಭಿನಯದ ಸಿನಿಮಾಗಳನ್ನು ಕರ್ನಾಟಕದಲ್ಲಿ ಬ್ಯಾನ್ ಮಾಡಬೇಕು ಎಂದು  ಆಗ್ರಹಿಸುತ್ತಿದ್ದಾರೆ. ಈಗ ಈ ಎಲ್ಲಾ ವಿ ವಾ ದ ಗಳ ಬೆನ್ನಲ್ಲೇ ಪ್ರಮುಖ ಆಭರಣ ಬ್ರಾಂಡ್ ಆದ ಖಜಾ‌ನಾ ಜ್ಯುವೆಲ್ಲರಿ ತನ್ನ ಬ್ರಾಂಡ್ ಅಂಬಾಸಿಡರ್ ಆಗಿದ್ದ ರಶ್ಮಿಕ ಅವರನ್ನು ಮಜಾ ಮಾಡಿದೆ ಎಂದು ತಿಳಿದು ಬಂದಿದೆ.

ಹೌದು, ಈ ಮೊದಲು ಅಕ್ಷಯ ತೃತೀಯದಿಂದ ಪ್ರಾರಂಭಿಸಿ, ರಶ್ಮಿಕಾ ಭಾರತದಾದ್ಯಂತ ಪ್ರಿಂಟ್, ಔಟ್​ಡೋರ್ ಮತ್ತು ಟಿವಿ ಜಾಹೀರಾತುಗಳ ಮೂಲಕ ಖಜಾನಾ ಆಭರಣದ ಸುಂದರ ವಿನ್ಯಾಸಗಳ ರಾಯಭಾರಿಯಾಗಿದ್ದರು. ಆದರೆ ಇತ್ತೀಚಿಗೆ ನಟಿಯ ವಿ ವಾ ದಗಳಿಂದ ಕರ್ನಾಟಕ ಇಂಡಸ್ಟ್ರಿಯಲ್ಲಿ ಅವರಿಗೆ ಸಂಪೂರ್ಣ ವಿ ರೋ ಧ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ತಮ್ಮ ರಿಟೇಲ್ ಕಂಪನಿಯ ಇಮೇಜ್ ಕ್ಷೀಣಿಸುತ್ತದೆ ಎಂದುಕೊಂಡ ಖಜಾನಾ ಜ್ಯುವೆಲ್ಲರಿ ವ್ಯವಸ್ಥಾಪಕರು ನಟಿಯನ್ನು ಅಂಬಾಸಿಡರ್ ಸ್ಥಾನದಿಂದ ಕೈಬಿಟ್ಟಿದ್ದಾರೆ ಎನ್ನಲಾಗಿದೆ. ಅಲ್ಲದೇ ಈಗ ರಶ್ಮಿಕಾ ಜಾಗಕ್ಕೆ ದಕ್ಷಿಣದ ಪ್ರಮುಖ ಸ್ಟಾರ್ ನಟಿಯಾಗಿರುವ ತ್ರಿಷಾ ಅವರನ್ನು ಕರೆತರಲಾಗಿದೆ.

- Advertisment -