ಪ್ರಭಾಸ್ ‘ರಾಧೇ ಶ್ಯಾಮ್’ ಬಗ್ಗೆ ನೆಗೆಟಿವ್ ಟಾಕ್, ಮನನೊಂದು ಸಾವಿಗೆ ಶರಣಾದ ರವಿತೇಜ!!

Entertainment Featured-Articles News

ಸ್ಟಾರ್ ನಟರೆಂದರೆ ಅವರ ಅಭಿಮಾನಿ ಬಳಗ ಬಹಳ ದೊಡ್ಡದಾಗಿಯೇ ಇರುತ್ತದೆ ಎಂದು ಅನುಮಾನವಿಲ್ಲದೇ ಹೇಳಬಹುದು. ಆದರೆ ಇತ್ತೀಚಿನ ವರ್ಷಗಳಲ್ಲಿ ಈ ಅಭಿಮಾನ ಎನ್ನುವುದು ಅತಿರೇಕವನ್ನು ತಲುಪಿದೆ ಎನ್ನುವುದು ಕೂಡಾ ಎಲ್ಲರಿಗೂ ತಿಳಿದೇ ಇದೆ. ಅಭಿಮಾನ ಎನ್ನುವುದು ಅಂ ಧಾ ಭಿ ಮಾನ ಸಹಾ ಆಗುತ್ತಿದೆ. ಅಭಿಮಾನದ ಹುಚ್ಚಾಟದಲ್ಲಿ ಅಭಿಮಾನಿಗಳು ಮಾಡುವ ಕೆಲಸಗಳು ಕೆಲವೊಮ್ಮೆ ಅವರ ಕುಟುಂಬಗಳಿಗೆ ತೀರದ ನಷ್ಟವನ್ನು, ನೋ ವನ್ನು ಉಳಿಸುವಂತೆಯೂ ಆಗಿದೆ. ತಮ್ಮ ಅಭಿಮಾನ ನಟನ ಮೇಲಿನ ಹುಚ್ಚು ಅಭಿಮಾನದಿಂದ ಪ್ರಾಣಕ್ಕೆ ಕು ತ್ತು ತಂದುಕೊಳ್ಳುವ ಮಂದಿ ಕ್ಷಣ ಕಾಣ ತಮ್ಮನ್ನು ಹೆತ್ತು ಹೊತ್ತವರ ಬಗ್ಗೆ ಆಲೋಚಿಸುವುದಿಲ್ಲ.

ಪ್ರಸ್ತುತ ಅಂತಹುದೇ ಮತ್ತೊಂದು ಘಟನೆ ವರದಿಯಾಗಿದೆ. ಮೊನ್ನೆ ಶುಕ್ರವಾರದಂದು ಟಾಲಿವುಡ್ ನಟ ಪ್ರಭಾಸ್ ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾ ರಾಧೇ ಶ್ಯಾಮ್ ವಿಶ್ವದಾದ್ಯಂತ ಬಿಡುಗಡೆಗೊಂಡಿದೆ. ರಾಧೇ ಶ್ಯಾಮ್ ಬಗ್ಗೆ ಅಭಿಮಾನಿಗಳು ಹಾಗೂ ಸಿನಿ ಪ್ರೇಮಿಗಳು ಬಹಳ ದೊಡ್ಡ ಮಟ್ಟದ ನಿರೀಕ್ಷೆಯನ್ನು ಇಟ್ಟುಕೊಂಡಿದ್ದರು. ಈ ಮೊದಲು ಸಿನಿಮಾ ಬಿಡುಗಡೆ ತಡವಾದಾಗಲೂ ಸಿನಿಮಾ ಬಗ್ಗೆ ಅಪ್ಡೇಟ್ ನೀಡದೇ ಹೋದರೆ ಅಭಿಮಾನಿಗಳು ಆ ತ್ಮ ಹ ತ್ಯೆ ಮಾಡಿಕೊಳ್ಳುವೆವು ಎನ್ನುವ ಎಚ್ಚರಿಕೆ ನೀಡಿದ್ದರು‌.

ಅದಾದ ಮೇಲೆ ಅಭಿಮಾನಿಗಳ ಒತ್ತಡಕ್ಕೆ ಮಣಿದು ಸಿನಿಮಾದ ಟೀಸರ್ ಬಿಡುಗಡೆ ಮಾಡಲಾಗಿತ್ತು. ಈಗ ಎಲ್ಲಾ ಅಡೆ ತಡೆಗಳು ಮುಗಿದ ಮೇಲೆ ರಾಧೇ ಶ್ಯಾಮ್ ದೊಡ್ಡ ಮಟ್ಟದಲ್ಲಿ ತೆರೆ ಕಂಡಿತು. ಆದರೆ ಸಿನಿಮಾ ನೋಡಿದ ಮೇಲೆ ಪ್ರೇಕ್ಷಕರಿಂದ ಪಾಸಿಟಿವ್ ಗಿಂತ ನೆಗೆಟಿವ್ ಮಾತುಗಳೇ ಹೆಚ್ಚಾದವು. ಸಿನಿಮಾ ಬಗ್ಗೆ ಬಹಳಷ್ಟು ಜನರು ಅಸಮಾಧಾನವನ್ನು ಹೊರ ಹಾಕಿದರು. ಸಾಮಾಜಿಕ ಜಾಲತಾಣಗಳಲ್ಲಿ ಸಹಾ ಸಿನಿಮಾ ಬಗ್ಗೆ ಬಹಳಷ್ಟು ಜನ ಟೀಕೆ ಟಿಪ್ಪಣಿಗಳನ್ನು ಮಾಡಿದರು.

ರಾಧೇ ಶ್ಯಾಮ್ ಬಿಡುಗಡೆಯ ನಂತರ ತನ್ನ ಅಭಿಮಾನ ನಟನ ಸಿನಿಮಾ ಬಗ್ಗೆ‌ ನೆಗೆಟಿವ್ ಟಾಕ್ಸ್ ಬರುತ್ತಿದೆ ಎನ್ನುವ ಕಾರಣಕ್ಕೆ ಅಭಿಮಾನಿಯೊಬ್ಬನು ತನ್ನ ಜೀವವನ್ನೇ ಕಳೆದುಕೊಂಡಿದ್ದಾರೆ. ಹೌದು ಆಂದ್ರಪ್ರದೇಶದ ಕರ್ನೂಲಿನ ರವಿತೇಜ ಎನ್ನುವ ಅಭಿಮಾನಿಯೊಬ್ಬನು ತನ್ನ ಅಭಿಮಾನ ನಟ ಪ್ರಭಾಸ್ ಸಿನಿಮಾ ಬಗ್ಗೆ ನೆಗೆಟಿವ್ ಕಾಮೆಂಟ್ ಗಳು ಬಂದ ಕಾರಣ ಮನನೊಂದು ಆ ತ್ಮ ಹ ತ್ಯೆ ಮಾಡಿಕೊಂಡು ಜೀವಕ್ಕೆ ಕು ತ್ತು ತಂದು ಕೊಟ್ಟಿದ್ದಾನೆ. ರವಿತೇಜ ಮಾಡಿದ ಈ ಆತುರದ ನಿರ್ಧಾರದಿಂದ ಆತನ ಇಡೀ ಕುಟುಂಬ ಈಗ ಶೋಕ ಸಾಗರದಲ್ಲಿ ಮುಳುಗಿದೆ.

Leave a Reply

Your email address will not be published.