ಪ್ರಭಾಸ್ ಇಷ್ಯೂನಿಂದ ನಾನು ಮಾನಸಿಕವಾಗಿ ಕುಗ್ಗಿ ಹೋಗಿದ್ದೆ: ನಿತ್ಯ ಮೆನನ್ ಶಾಕಿಂಗ್ ಹೇಳಿಕೆ.
ದಕ್ಷಿಣ ಸಿನಿರಂಗದಲ್ಲಿ ತನ್ನ ಅಂದ ಹಾಗೂ ಅದ್ಬುತ ನಟನೆಯಿಂದ ತನಗಾಗಿ ಒಂದು ವಿಶೇಷ ಸ್ಥಾನವನ್ನು ಪಡೆದುಕೊಂಡಿರುವ ನಟಿ ಎಂದರೆ ನಿತ್ಯ ಮೆನನ್. ನಿತ್ಯ ಮೆನನ್ ದಕ್ಷಿಣದ ನಾಲ್ಕು ಭಾಷೆಗಳಲ್ಲಿ ಹಾಗೂ ಬಾಲಿವುಡ್ ಸಿನಿಮಾದಲ್ಲಿಯೂ ನಟಿಸಿದ್ದಾರೆ. ಕನ್ನಡ ಚಿತ್ರರಂಗದಿಂದ ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟ ನಿತ್ಯ ಮೆನನ್ ಹೆಚ್ಚು ಹೆಸರನ್ನು ಪಡೆದಿದ್ದು ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ. ಅಲಾ ಮೊದಲೈಂದಿ ಹೆಸರಿನ ಹಸಿನಿಮಾ ಮೂಲಕ ತೆಲುಗು ಚಿತ್ರರಂಗಕ್ಕೆ ಕಾಲಿಟ್ಟ ನಿತ್ಯ ಮೆನನ್ ಆನಂತರ ಅಲ್ಲಿನ ಪ್ರೇಕ್ಷಕರ ಮನಸ್ಸನ್ನು ಗೆದ್ದರು, ಸ್ಟಾರ್ ನಟಿಯಾಗಿ ಬೆಳೆದರು.
ತನ್ನ ಅಂದ ಹಾಗೂ ಅಭಿನಯದ ಮೂಲಕ ಉತ್ತಮ ಚಿತ್ರಗಳಲ್ಲಿ ಅವಕಾಶವನ್ನು ಪಡೆದುಕೊಂಡ ನಿತ್ಯ ಮೆನನ್ ತೆಲುಗು ಸಿನಿ ರಂಗದಲ್ಲಿ ತನ್ನ ಛಾಪು ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಿತ್ಯ ಮೆನೆನ್ ಸಿನಿಮಾ ನಾಯಕಿಯಾಗಿ ಮಾತ್ರವೇ ಅಲ್ಲದೆ ಗಾಯಕಿಯಾಗಿಯೂ ತೆಲುಗು ಸಿನಿಮಾ ರಂಗದಲ್ಲಿ ಹೆಸರನ್ನು ಪಡೆದುಕೊಂಡಿದ್ದಾರೆ. ಸಿನಿಮಾ ರಂಗದಲ್ಲಿ ಉತ್ತಮ ಸ್ಥಾನದಲ್ಲಿ ಇರುವಾಗಲೇ ಸಣ್ಣ ಬ್ರೇಕ್ ಪಡೆದುಕೊಂಡಿದ್ದ ನಟಿಯು ಇದೀಗ ಮತ್ತೊಮ್ಮೆ ತೆಲುಗು ಚಿತ್ರರಂಗಕ್ಕೆ ಕಮ್ ಬ್ಯಾಕ್ ಮಾಡಿದ್ದಾರೆ.
ತೆಲುಗಿನ ಪವರ್ ಸ್ಟಾರ್ ಪವನ್ ಕಲ್ಯಾಣ್ ಅಭಿನಯದ ಬೀಮ್ಲಾ ನಾಯಕ್ ಸಿನಿಮಾದಲ್ಲಿ ನಟಿಸಿದ್ದಾರೆ. ಇತ್ತೀಚಿಗೆ ಬಿಡುಗಡೆಯಾಗಿ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿರುವ ಸ್ಕೈ ಲ್ಯಾಬ್ ಸಿನಿಮಾ ಮೂಲಕ ನಟಿಯಾಗಿ ಮಾತ್ರವೇ ಅಲ್ಲದೇ ನಿರ್ಮಾಪಕಿಯಾಗಿಯೂ ನಿತ್ಯ ಮೆನನ್ ಗೆಲುವು ಪಡೆದುಕೊಂಡಿದ್ದಾರೆ. ಈ ಯಶಸ್ಸಿನ ಬಗ್ಗೆ ಸಿನಿಮಾ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ, ಹಿಂದಿನ ಕಹಿ ಅನುಭವವನ್ನು ನಿತ್ಯ ಸ್ಮರಿಸಿದ್ದಾರೆ.
ಪ್ರಭಾಸ್ ವಿಷಯದಲ್ಲಿ ನನಗೆ ತೆಲುಗು ಚಿತ್ರರಂಗದಲ್ಲಿ ಭಾರಿ ಹೊ ಡೆ ತ ಬಿದ್ದಿತ್ತು ಎನ್ನುವ ಮಾತನ್ನು ಹೇಳಿದ್ದಾರೆ. ಆ ವಿಷಯ ಇನ್ನೂ ಕೂಡಾ ನನಗೆ ಮಾನಸಿಕವಾಗಿ ಕುಗ್ಗುವಂತೆ ಮಾಡುತ್ತದೆ ಎಂದಿದ್ದಾರೆ. ನನ್ನ ಬಗ್ಗೆ ಜರ್ನಲಿಸ್ಟುಗಳು ಆ ರೀತಿ ಬರೆದಿದ್ದನ್ನು ಮರೆಯಲು ಸಾಧ್ಯವಿಲ್ಲ. ಆ ವಿಷಯ ಬಹಳ ನೋವನ್ನು ನೀಡಿತ್ತು. ಆಗ ನಾನಿನ್ನೂ ಚಿತ್ರರಂಗಕ್ಕೆ ಹೊಸದಾಗಿ ಬಂದಿದ್ದೆ, ನಾನಿನ್ನೂ ಚಿಕ್ಕವಳು, ನನ್ನ ಮೊದಲ ಸಿನಿಮಾ ಬಂದಿತ್ತಷ್ಟೇ. ನನಗೆ ತೆಲುಗು ಬರುತ್ತಿರಲಿಲ್ಲ ತೆಲುಗು ಸಿನಿಮಾಗಳನ್ನು ನೋಡಿರಲಿಲ್ಲ.
ಆದರೆ ಅದೇ ಸಮಯದಲ್ಲಿ ನನ್ನನ್ನು ಪ್ರಭಾಸ್ ಅವರ ಕುರಿತಾಗಿ ಕೇಳಲಾಯಿತು, ನನಗೆ ಅವರ ಬಗ್ಗೆ ಗೊತ್ತಿಲ್ಲದ ಕಾರಣ ಗೊತ್ತಿಲ್ಲ ಎಂದು ಹೇಳಿಬಿಟ್ಟೆ, ಅದನ್ನೇ ದೊಡ್ಡ ವಿಷಯ ಮಾಡಿದರು ನನ್ನ ಅಮಾಯಕತನವನ್ನು ದುರುಪಯೋಗ ಮಾಡಿಕೊಂಡರು, ನಾನು ಯಾವುದೋ ದೊಡ್ಡ ತಪ್ಪನ್ನು ಮಾಡಿದಂತೆ ನ್ಯೂಸ್ ಕ್ರಿಯೇಟ್ ಮಾಡಿದರು. ಆ ಘಟನೆಯ ನಂತರ ಪ್ರಾಮಾಣಿಕವಾಗಿ ಇರಬಾರದು,ಎಲ್ಲಿ ಯಾವ ರೀತಿಯಲ್ಲಿ ಇರಬೇಕೋ ಹಾಗೆ ಇರಬೇಕು, ಮಾತಿನಲ್ಲಿ ಮೋಡಿ ಮಾಡಿದರೆ ಜನರಿಗೆ ಇಷ್ಟ ಆಗುತ್ತದೆ ಎನ್ನುವ ವಿಷಯ ನನಗೆ ಅರ್ಥವಾಯಿತು.
ಅಲ್ಲಿದ್ದ ಮಾದ್ಯಮಗಳವರಿಗೂ ಗೊತ್ತಿತ್ತು ನನಗೆ ತೆಲುಗು ಬರುವುದಿಲ್ಲ ಹಾಗೂ ನನಗೆ ಪ್ರಭಾಸ್ ಬಗ್ಗೆ ಗೊತ್ತಿಲ್ಲ ಎಂದು, ಆದ್ದರಿಂದಲೇ ಅವರು ಬೇಕಂತಲೇ ಅದೇ ವಿಚಾರವನ್ನು ನನ್ನ ಬಳಿ ಕೇಳಿದರು. ನಾನು ನನಗೆ ಗೊತ್ತಿಲ್ಲದ ಕಾರಣ ಗೊತ್ತಿಲ್ಲ ಎಂದೆ, ಅದೇ ದೊಡ್ಡ ವಿ ವಾ ದಕ್ಕೆ ಕಾರಣವಾಯಿತು. ಆ ವಿಷಯ ಇಂದಿಗೂ ಕೂಡಾ ನನಗೆ ಬಹಳ ನೋವನ್ನು ಉಂಟುಮಾಡುತ್ತದೆ ಎಂದು ನಿತ್ಯಮೇನನ್ ಮನಸ್ಸಿನ ಮಾತುಗಳನ್ನು ಹಂಚಿಕೊಂಡಿದ್ದಾರೆ.