ಪ್ರಪೋಸ್ ಮಾಡಿದ ಸ್ಯಾಂಡಲ್ವುಡ್ ಸುಂದರಿಯನ್ನು ನಾಚುತ್ತಾ ಅಕ್ಕ ಎಂದ ಹನುಮಂತ

Entertainment Featured-Articles Movies News
59 Views

ಸರಿಗಮಪ ಶೋ ಮೂಲಕ ಎಲ್ಲಾ ಸ್ಪರ್ಧಿಗಳಿಗಿಂತ ಸಿಕ್ಕಾಪಟ್ಟೆ ಸುದ್ದಿಯಾಗಿ, ಜನಪ್ರಿಯತೆ ಪಡೆದ ಸ್ಪರ್ಧಿ ಯಾರು ಅನ್ನೋದಾದ್ರೆ ಯಾವುದೇ ಅನುಮಾನ ಇಲ್ಲದೇ ಹನುಮಂತ ಅಂತ ಹೇಳೋಷ್ಟು ಈ ಗಾಯಕ ಸುದ್ದಿ ಮಾಡಿದ್ದಾರೆ. ಹನುಮಂತು ಸರಿಗಮಪ ಮಾತ್ರವೇ ಅಲ್ಲದೇ ಬೇರೆ ಬೇರೆ ಶೋ ಗಳ ಸಮಯದಲ್ಲಿ ಕಾಣಿಸಿಕೊಂಡು ಮನರಂಜನೆ ನೀಡಿದ್ದುಂಟು. ಇನ್ನು ಹನುಮಂತನ ಮದುವೆ ಯಾವಾಗ ? ಅನ್ನೋದು ಸಾಕಷ್ಟು ಚರ್ಚೆಯಾದ ವಿಷಯ‌, ಆದ್ರೆ ಇಲ್ಲಿ ವಿಶೇಷ ಏನೆಂದ್ರೆ ಕೆಲವು ಸಲ ವದಂತಿಗಳಲ್ಲಿ ಹನುಮಂತಣ್ಣನ ಮದುವೆಯನ್ನು ಸಹಾ ಮಾಡಿ, ಆ ಸುದ್ದಿಗಳು ಸಹಾ ಹರಿದಾಡಿದ್ದುಂಟು. ಹನುಮಂತು ಮದುವೆ ವಿಚಾರ ಬಂದಾಗಲೆಲ್ಲಾ ಆತ ಬಹಳ ನಾಚಿಕೆಯಿಂದಲೇ ಅದೆಲ್ಲಾ ಸುಳ್ಳು ಎಂದು ಹೇಳಿದ್ದುಂಟು.

ಆದರೆ ಈಗ ಇದೇ ಹನುಮಂತನಿಗೆ ಸ್ಯಾಂಡಲ್ವುಡ್ ನಟಿಯೊಬ್ಬರು ಲವ್ ಪ್ರಪೋಸ್ ಮಾಡಿದ್ದಾರೆ. ರಿಯಾಲಿಟಿ ಶೋ ನಲ್ಲಿ ಸ್ಯಾಂಡಲ್ವುಡ್ ನಟಿ ನಿಶ್ವಿಕಾ ನಾಯ್ಡು ಅವರು ಅತಿಥಿಯಾಗಿ ಆಗಮಿಸಿದ್ದರು. ಅದೇ ವೇದಿಕೆಯಲ್ಲಿ ಹನುಮಂತ ರಾಕಿಭಾಯ್ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದು ವಿಶೇಷವಾಗಿತ್ತು. ಈ ವೇಳೆಯಲ್ಲಿ ನಿರೂಪಕಿ ಶ್ವೇತ ಚೆಂಗಪ್ಪ ಅವರು ಅತಿಥಿಯಾಗಿ ಆಗಮಿಸಿದ್ದ ನಿಶ್ವಿಕಾ ಅವರ ಕಡೆ ತೋರಿಸುತ್ತಾ, ಇಂತಹ ಸುಂದರ ಹುಡುಗಿಯನ್ನು ಕಂಡರೆ ಏನನಿಸುತ್ತದೆ ಎಂದು ಹನುಮಂತನ ಬಳಿ ಪ್ರಶ್ನೆಯೊಂದನ್ನು ಕೇಳಿದ್ದಾರೆ. ಆಗ ನಿಶ್ವಿಕಾ ಹಾರ್ಟ್ ಸಿಂಬಲ್ ತೋರಿಸಿ ಲವ್ ಪ್ರಪೋಸಲ್ ಮಾಡಿದ್ದಾರೆ.

ಅನಂತರ ನಿಶ್ವಿಕಾ ತನಗಾಗಿ ಒಂದು ರೋಮ್ಯಾಂಟಿಕ್ ಹಾಡನ್ನು ಹೇಳುವಂತೆ ಕೇಳಿದ್ದು ಹನುಮಂತ ಬಹಳ ನಾಚಿಕೆಯಿಂದಲೇ ಪ್ರತಿಕ್ರಿಯೆ ನೀಡಿದ್ದು, ತಾನು ಭಜನಿ ಹಾಡನ್ನು ಹಾಡುವುದಾಗಿ ಪ್ರತಿಕ್ರಿಯೆ ನೀಡಿದ್ದಾನೆ ಹನುಮಂತ. ಆಗ ನಿಶ್ವಿಕಾ ರೊಮ್ಯಾಂಟಿಕ್ ಆಗಿ ಮಾತನಾಡುವುದು ಹೇಗೆ ಗೊತ್ತಾ? ಎಂದಾಗ ಹನುಮಂತ ಇಲ್ಲ ಎಂದು ಉತ್ತರ ಕೊಟ್ಟಿದ್ದಾರೆ. ಆಗ ನಿಶ್ವಿಕಾ ಅವರು ನಾನು ಹೇಳಿಕೊಡಲಾ ಎಂದು ಕೇಳಿದಾಗ ಹನುಮಂತ ಕೊಟ್ಟ ಉತ್ತರ ನಿಜಕ್ಕೂ ಶಾಕಿಂಗ್ ಆಗಿತ್ತು. ಹೌದು, ಹನುಮಂತು ನಟಿಗೆ ಉತ್ತರ ನೀಡುತ್ತಾ, ಹೇಳಿಕೊಡು ಅಕ್ಕಾ ಎಂದು ನಟಿಗೆ ಶಾ ಕ್ ನೀಡಿದ್ದಾರೆ.

ಹನುಮಂತು ನಟಿ ನಿಶ್ವಿಕಾ ಅವರಿಗಾಗಿ ಸಂಸಾರ ಅಷ್ಟೊಂದು ಸಲೀಸಲ್ಲ, ಕೇಳು ಅಕ್ಕ ಎನ್ನುವ ಅರ್ಥದಲ್ಲಿ ಒಂದು ಭಜನೆಯ ಪದವೊಂದನ್ನು ಹೇಳಿದ್ದು, ಅದನ್ನು ಕೇಳಿ ನಿಶ್ವಿಕಾ ನಿದ್ರೆಗೆ ಜಾರಿದಂತೆ ಪ್ರತಿಕ್ರಿಯೆ ನೀಡಿದ್ರು, ಇಡೀ ಸನ್ನಿವೇಶ ಬಹಳ ಮನರಂಜನೆಯನ್ನು ನೀಡಿದ್ದು ಮಾತ್ರವೇ ಅಲ್ಲದೇ ಹನುಮಂತ ಅವರ ಮುಗ್ಧತೆ ಎಲ್ಲರ ಮನಸ್ಸನ್ನು ಗೆದ್ದಿತು ಎನ್ನುವುದರಲ್ಲಿ ಎರಡು ಮಾತಿಲ್ಲ. ಹನುಮಂತು ಪ್ರತಿ ಬಾರಿ ಯಾವುದೇ ಕಾರ್ಯಕ್ರಮಕ್ಕೂ ಬಂದರೂ ಸಹಾ ಅಲ್ಲೊಂದು ಸುದ್ದಿ ಆಗುವುದು ಖಂಡಿತ.

Leave a Reply

Your email address will not be published. Required fields are marked *