ಬಾಹುಬಲಿ ಸಿನಿಮಾ ಖ್ಯಾತಿಯ ನಿರ್ದೇಶಕ ರಾಜಮೌಳಿ ಅವರ ತಂದೆ ವಿಜಯೇಂದ್ರ ಪ್ರಸಾದ್ ಅವರ ಕುರಿತಾಗಿ ವಿಶೇಷವಾದ ಪರಿಚಯವನ್ನು ನೀಡುವ ಅಗತ್ಯವೇ ಇಲ್ಲ ಎನ್ನುವಷ್ಟು ಹೆಸರನ್ನು ಅವರು ಮಾಡಿದ್ದಾರೆ. ಅದ್ಭುತ ಎನಿಸುವಂತಹ ಸಿನಿಮಾ ಕಥೆಗಳನ್ನು ರಚನೆ ಮಾಡುವುದರಲ್ಲಿ ಅವರೊಬ್ಬ ನಿಸ್ಸೀಮ ರಚನೆಕಾರ ಎನಿಸಿಕೊಂಡಿದ್ದಾರೆ. ಬಾಹುಬಲಿ, ಮಣಿಕರ್ಣಿಕ, ಭಜರಂಗಿ ಭಾಯಿಜಾನ್, ಆರ್ ಆರ್ ಆರ್ ಹೀಗೆ ಬಹಳಷ್ಟು ಸದ್ದು ಮಾಡಿರುವ, ಮಾಡುತ್ತಿರುವ ಸಿನಿಮಾಗಳಿಗೆ ಕಥೆಯನ್ನು ಬರೆದಿರುವವರು ವಿಜಯೇಂದ್ರ ಪ್ರಸಾದ್ ಅವರು ಪ್ರಸ್ತುತ ಅವರು ರಾಮಾಯಣದ ಸೀತಾದೇವಿಯ ಪಾತ್ರದ ಕುರಿತಾಗಿ ಹೊಸ ಸಿನಿಮಾ ಒಂದರ ಕಥೆಯನ್ನು ಸಿದ್ಧಪಡಿಸುತ್ತಿದ್ದಾರೆ ಎನ್ನುವ ವಿಷಯ ಈಗಾಗಲೇ ದೊಡ್ಡ ಸುದ್ದಿಯಾಗಿದೆ.
ಇವೆಲ್ಲವುಗಳ ನಡುವೆ ಅವರ ಕುರಿತಾದ ಹೊಸ ಸುದ್ದಿಯೊಂದು ಹೊರ ಬಂದಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚಿನ ದಿನಗಳಲ್ಲಿ ತಮ್ಮ ಉದ್ದನೆಯ ಗಡ್ಡ ದಿಂದಾಗಿ ಸುದ್ದಿಯಲ್ಲಿದ್ದಾರೆ. ಅವರ ಅಭಿಮಾನಿಗಳಿಗೆ ಹೊಸ ಲುಕ್ ಬಹಳಷ್ಟು ಇಷ್ಟವಾಗಿದೆ. ಅದೇ ರೀತಿ ಕಥೆಗಾರ ವಿಜಯೇಂದ್ರ ಪ್ರಸಾದ್ ಅವರು ಕೂಡಾ ಉದ್ದವಾದ ಗಡ್ಡವನ್ನು ಬಿಡುವ ಮೂಲಕ ತೆಲುಗು ಚಿತ್ರರಂಗದ ಅನೇಕರ ಗಮನವನ್ನು ಸೆಳೆದಿದ್ದಾರೆ. ವಿಜಯೇಂದ್ರ ಪ್ರಸಾದ್ ಅವರು ಇದುವರೆಗೂ ಯಾವುದೇ ಸಿನಿಮಾದಲ್ಲಿ ನಟಿಸಿಲ್ಲ, ಆದರೆ ಇದೀಗ ಅವರ ಗಡ್ಡದ ಕಾರಣದಿಂದಲೇ ಅವರಿಗೆ ಹೊಸ ಅವಕಾಶವೊಂದು ಅರಸಿಕೊಂಡು ಬಂದಿದೆ ಎಂದು ತಿಳಿದು ಬಂದಿದೆ.
ತೆಲುಗಿನ ಒಬ್ಬ ಯುವ ಸಿನಿಮಾ ನಿರ್ಮಾಪಕರು ಮೋದಿ ಅವರ ಜೀವನಾಧಾರಿತ ಕಿರುಚಿತ್ರವನ್ನು ಮಾಡುವ ಆಲೋಚನೆ ಮಾಡಿದ್ದು, ಮೋದಿ ಅವರ ಪಾತ್ರಕ್ಕೆ ಅವರಿಗೆ ತಟ್ಟನೆ ನೆನಪಾಗಿರುವುದು ಉದ್ದ ಗಡ್ಡ ಬಿಟ್ಟಿರುವಂತಹ ವಿಜಯೇಂದ್ರ ಪ್ರಸಾದ್ ಅವರಾಗಿದ್ದಾರೆ. ಅವರು ಈ ವಿಷಯವನ್ನು ವಿಜಯೇಂದ್ರ ಪ್ರಸಾದ ಅವರ ಬಳಿ ಮಾತನಾಡಿದಾಗ, ವಿಜಯೇಂದ್ರ ಪ್ರಸಾದ್ ಅವರು ಯಾವುದೇ ರೀತಿಯ ಮಾತನಾಡದೇ ನಕ್ಕು ಸುಮ್ಮನಾಗಿದ್ದಾರೆ ಎನ್ನಲಾಗಿದೆ. ಹಾವ ಭಾವಗಳಲ್ಲಿ ನರೇಂದ್ರ ಮೋದಿಯವರನ್ನು ಹೋಲದೇ ಹೋದರೂ ಗಡ್ಡದ ಲುಕ್ ನಿಂದಾಗಿ ಮೋದಿ ಅವರಂತೆ ಕಾಣುತ್ತಿದ್ದಾರೆ ಎನ್ನುವ ಕಾರಣದಿಂದಾಗಿ ಅವರಿಗೆ ಈ ಆಫರ್ ಬಂದಿದೆ.