ಪ್ರತಿ ಬಾರಿ ಕರೆಸಿ ನನ್ನನ್ನು ಬಳಸಿಕೊಳ್ತಾರೆ: ನಾನು ಟಿಶ್ಯೂ ಪೇಪರ್ ಅಲ್ಲ, ರಾಖೀ ಸಾವಂತ್ ಕಣ್ಣೀರು

Written by Soma Shekar

Published on:

---Join Our Channel---

ಹಿಂದಿ ಕಿರುತೆರೆಯ ಅತಿ ದೊಡ್ಡ ರಿಯಾಲಿಟಿ ಶೋ ಎನ್ನುವ ಹೆಗ್ಗಳಿಕೆ ಬಿಗ್ ಬಾಸ್ ನದ್ದು. ಪ್ರತಿ ಸೀಸನ್ ಕೂಡಾ ಅನೇಕ ವಿ ವಾ ದಗಳು, ಮನೆಯಲ್ಲಿ ಸ್ಪರ್ಧಿಗಳ ನಡುವೆ ನಡೆಯುವ ಗಲಾಟೆಗಳು, ಮಾತಿನ ಚ ಕ ಮಕಿ ಹಾಗೂ ಕೆಲವೊಮ್ಮೆ ಹೊ ಡೆ ದಾ ಟಗಳು ಕೂಡಾ ನಡೆದು ದೊಡ್ಡ ಮಟ್ಟದಲ್ಲಿ ಸುದ್ದಿಗಳಾಗುತ್ತವೆ. ಪ್ರತಿ ಸೀಸನ್ ನಲ್ಲೂ ಯಶಸ್ಸನ್ನು ಪಡೆಯುತ್ತಾ ಬರೋಬ್ಬರಿ ಹದಿನೈದು ಸೀಸನ್ ಗಳ ಯಾತ್ರೆ ಮುಗಿಸಿ, ಇದೀಗ ಹದಿನೈದನೇ ಸೀಸನ್ ನಾಳೆಗೆ ಕೊನೆಯಾಗಲಿದೆ. ಇನ್ನು ಬಿಗ್ ಬಾಸ್ ಮತ್ತು ಕಾಂಟ್ರವರ್ಸಿ ಕ್ವೀನ್, ಡ್ರಾಮಾ ಕ್ವೀನ್ ಹಾಗೂ ಟಿ ಆರ್ ಪಿ ಕ್ವೀನ್ ಎಂದೆಲ್ಲಾ ಹೆಸರು ಪಡೆದಿರುವ ರಾಖಿ ಸಾವಂತ್ ಗೆ ಒಂದು ವಿಶೇಷ ಸಂಬಂಧವಿದೆ.

ರಾಖಿ ಸಾವಂತ್ ಬಿಗ್ ಬಾಸ್ ನ ಮೊದಲ ಸೀಸನ್ ನಲ್ಲಿ ಸ್ಪರ್ಧಿಯಾಗಿ ಮನೆಗೆ ಎಂಟ್ರಿ ನೀಡಿದ್ದರು. ಅನಂತರ ಬಿಗ್ ಬಾಸ್ ನ ಪ್ರತಿ ಸೀಸನ್ ನಲ್ಲಿ ರಾಖಿಯನ್ನು ಅತಿಥಿಯಾಗಿ ಕರೆಸಲಾಗುತ್ತದೆ. ಅದರಲ್ಲೂ ಕಳೆದ ಕೆಲವು ಸೀಸನ್ ಗಳಿಂದಲೂ ಬಿಗ್ ಬಾಸ್ ನಲ್ಲಿ ಎಂಟರ್ಟೈನ್ಮೆಂಟ್ ಕಡಿಮೆ ಆಗಿದೆ ಅಥವಾ ಟಿ ಆರ್ ಪಿ ಕಡಿಮೆ ಆಗಿದೆ ಎನ್ನುವ ಸುದ್ದಿಗಳು ಬಂದ ಕೂಡಲೇ ರಾಖಿ ಸಾವಂತ್ ಗೆ ವೈಲ್ಡ್ ಕಾರ್ಡ್ ಎಂಟ್ರಿ, ವಿಐಪಿ ಕಂಟೆಸ್ಟಂಟ್ ಎಂಟ್ರಿ ಹೀಗೆಲ್ಲಾ ಮನೆಯೊಳಕ್ಕೆ ಎಂಟ್ರಿ ನೀಡಲಾಗುತ್ತದೆ.

ರಾಖಿ ಎಂಟ್ರಿ ಸಹಜವಾಗಿಯೇ ಬಿಗ್ ಬಾಸ್ ನಲ್ಲಿ ಹೊಸ ಸಂಚಲನಕ್ಕೆ ಕಾರಣವಾಗುತ್ತದೆ. ಈ ಬಾರಿ ಕೂಡಾ ಅಂದರೆ ಬಿಗ್ ಬಾಸ್ ಸೀಸನ್ 15 ರಲ್ಲೂ ಕೂಡಾ ಟಿ ಆರ್ ಪಿ ಮೊದಲಿನಿಂದಲೇ ಕುಸಿದಿತ್ತು. ಎಂಟರ್ಟೈನ್ಮೆಂಟ್ ಎನ್ನುವುದು ಈ ಸೀಸನ್ ನಲ್ಲಿ ಕಾಣೆಯಾಗಿತ್ತು. ಆಗ ಎಂದಿನಂತೆ ಬಿಗ್ ಬಾಸ್ ರಾಖೀ ಸಾವಂತ್ ಅನ್ನು ವೈಲ್ಡ್ ಕಾರ್ಡ್ ಮೂಲಕ ಮನೆಗೆ ಪ್ರವೇಶವನ್ನು ನೀಡಿತು. ಖುಷಿಯಾಗಿ ಬಂದ ರಾಖೀ ಕಳೆದ ವಾರ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ.

ಹೊರ ಬಂದ ಮೇಲೆ ಇದೀಗ ರಾಖೀ ಬಿಗ್ ಬಾಸ್ ಮೇಲೆ ಮೊದಲ ಬಾರಿಗೆ ತನ್ನ ಸಿಟ್ಟು, ಅಸಮಾಧಾನವನ್ನು ಹೊರ ಹಾಕಿದ್ದಾರೆ. ಹೌದು, ಬಿಗ್ ಬಾಸ್ ನಿಂದ ಹೊರ ಬಂದ ಮೇಲೆ ಎಂದಿನಂತೆ ಜಿಮ್ ಗೆ ಹೋಗುತ್ತಿದ್ದ ರಾಖಿಯನ್ನು ಮಾದ್ಯಮಗಳು ಮಾತನಾಡಿಸಿದಾಗ, ರಾಖಿ ಬಿಗ್ ಬಾಸ್ ಬಗ್ಗೆ ಸಿಟ್ಟಿನಿಂದ, ಪ್ರತಿವರ್ಷ ನೀವು ನನಗೆ ಕರೆ ಮಾಡಿ ಶೋ ಗೆ ಕರೆಸಿಕೊಳ್ಳುತ್ತೀರಿ. ಅಲ್ಲಿ ಅಗತ್ಯಕ್ಕೆ ತಕ್ಕಂತೆ ನನ್ನನ್ನು ಬಳಸಿಕೊಳ್ಳುತ್ತೀರಿ ಎನ್ನುವುದು ಸ್ಪಷ್ಟವಾಗಿ ಇದು ತೋರಿಸುತ್ತಿದೆ.

ಕಿತ್ತಳೆ ಹಣ್ಣಿನಲ್ಲಿ ರಸ ಇರುವವರೆಗೆ ಹಿಂಡುತ್ತೀರಿ, ಅನಂತರ ಸಿಪ್ಪೆಯನ್ನು ಎಸೆಯುತ್ತೀರಿ.‌ ಹಾಗೆ ಮನರಂಜನೆ ಅಗತ್ಯ ಇರೋವರೆಗೆ ನನ್ನನ್ನು ಬಳಸಿಕೊಂಡು, ಆಮೇಲೆ ನನ್ನನ್ನು ಹೊರಗೆ ಹಾಕುತ್ತೀರಿ. ನಾನೇನು ಕಿತ್ತಳೆ ಹಣ್ಣೋ ಅಥವಾ ಟಿಶ್ಯೂ ಪೇಪರೊ ಅಲ್ಲ. ಬಿಗ್ ಬಾಸ್ ನಾನು ನಿಮ್ಮನ್ನು ತುಂಬಾ ಇಷ್ಟ ಪಡುತ್ತೇನೆ. ನಾನು ಟ್ರೋಫಿಗೆ ಅರ್ಹಳಾಗಿದ್ದೆ ಆದರೆ ಎಂದು ರಾಖೀ ಸಾವಂತ್ ಮಾದ್ಯಮಗಳ ಮುಂದೆ ಕಣ್ಣೀರನ್ನು ಹಾಕಿದ್ದು, ವೀಡಿಯೋ ವೈರಲ್ ಆಗಿ ಎಲ್ಲರ ಗಮನ ಸೆಳೆದಿದೆ.

https://www.instagram.com/reel/CZO0GdGFQUL/?utm_medium=copy_link

ರಾಖಿಯ ಕಣ್ಣೀರಿಗೆ ಅಭಿಮಾನಿಗಳು ಸಹಾ ಭಾವುಕರಾಗಿದ್ದಾರೆ. ಅಲ್ಲದೇ ಪ್ರತಿಕ್ರಿಯೆ ನೀಡಿದ ಕೆಲವರು ಸಹಾ , ಇದು ಮೋಸ, ಟಿ ಆರ್ ಪಿ ಕಡಿಮೆಯಾದಾಗ ರಾಖೀ ಸಾವಂತ್ ಅನ್ನು ಕರೆಸಿಕೊಳ್ಳುತ್ತಾರೆ, ಫಿನಾಲೇ ವೇಳೆಗೆ ಉಳಿಸಿಕೊಳ್ಳುವುದಿಲ್ಲ ಎಂದಿದ್ದಾರೆ. ಇನ್ನೂ ಕೆಲವರು ರಾಖಿ ನೀವು ಇನ್ನೊಮ್ಮೆ ಬಿಗ್ ಬಾಸ್ ಗೆ ಆಹ್ವಾನ ಬಂದರೆ ಅದನ್ನು ತಿರಸ್ಕರಿಸಿ, ಆ ಕಾರ್ಯಕ್ರಮಕ್ಕೆ ಹೋಗಬೇಡಿ ಎನ್ನುವ ಸಲಹೆಯನ್ನು ಸಹಾ ನೀಡಿದ್ದಾರೆ.

Leave a Comment