‘ಪ್ರತಿದಿನ ಹಿಂದೂ ದೇವರುಗಳಿಗೆ ಅವಮಾನ’- ನೂಪುರ್ ಶರ್ಮಾಗೆ ಕಂಗನಾ‌ ಸಾಥ್

Entertainment Featured-Articles Movies News
58 Views

ಪ್ರವಾದಿ ಮೊಹಮ್ಮದ್ ಕುರಿತು ಕಾಮೆಂಟ್ ಮಾಡಿದ ಕಾರಣದಿಂದಾಗಿ ಭಾರತೀಯ ಜನತಾ ಪಾರ್ಟಿ ರಾಷ್ಟ್ರೀಯ ವಕ್ತಾರರಾಗಿರುವ ನೂಪುರ್ ಶರ್ಮಾ ಅವರ ಮೇಲೆ ಕ್ರಮ ಕೈಗೊಂಡಿರುವ ಬಿಜೆಪಿ ನೂಪುರ್ ಶರ್ಮಾ ಅವರನ್ನು ಪಕ್ಷದಿಂದ ಅಮಾನತು ಮಾಡಿದೆ. ಅಲ್ಲದೇ ತನ್ನ ಹೇಳಿಕೆಯಿಂದಾಗಿ ಉದ್ಭವಿಸಿದ ಸಮಸ್ಯೆಯ ತೀವ್ರತೆಯು ಹೆಚ್ಚುತ್ತಿರುವುದನ್ನು ಕಂಡು ನೂಪುರ್ ಸಹಾ ಈಗಾಗಲೇ ಸಾರ್ವಜನಿಕವಾಗಿ ಕ್ಷಮೆ ಯಾಚಿಸಿದ್ದಾರೆ. ಆದರೆ ಈ ನಡುವೆ ಬಾಲಿವುಡ್ ನಟಿ ಕಂಗನಾ ರಣಾವತ್ ನೂಪುರ್ ಗೆ ತಮ್ಮ ಬೆಂಬಲವನ್ನು ಸೂಚಿಸಿದ್ದಾರೆ. ನೂಪುರ್ ಶರ್ಮಾ ಇತ್ತೀಚೆಗೆ ಒಂದು ಚರ್ಚಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಆ ಕಾರ್ಯಕ್ರಮದಲ್ಲಿ ಮಾತನಾಡುವ ವೇಳೆ ನೂಪುರ್ ಶರ್ಮಾ ಪ್ರವಾದಿ ಮೊಹಮ್ಮದ್ ಕುರಿತಾಗಿ ಒಂದು ವಿ ವಾ ದಾ ತ್ಮಕ ಹೇಳಿಕೆಯನ್ನು ನೀಡಿದ ನಂತರ ಈ ವಿಚಾರವಾಗಿ ಮುಸ್ಲಿಂ ಸಮುದಾಯ ಮಾತ್ರವೇ ಅಲ್ಲದೆ ಅರಬ್ ದೇಶಗಳಲ್ಲಿನ ಜನರು ಸಹಾ ನೂಪುರ್ ಶರ್ಮಾ ಅವರ ಈ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಇದನ್ನು ಗಮನಿಸಿದ ಬಿಜೆಪಿ, ಇಂತಹ ಹೇಳಿಕೆಗಳು ಪಕ್ಷದ ಮೂಲ ಕಲ್ಪನೆಗೆ ವಿರುದ್ಧವಾಗಿದೆ ಎಂದು ಹೇಳಿಕೆ ನೀಡಿತ್ತು. ನೂಪುರ್ ಅವರನ್ನು ಅಮಾನತುಗೊಳಿಸಿತ್ತು.

ಇದೀಗ ಈ ವಿಚಾರದಲ್ಲಿ ನೂಪುರ್ ಶರ್ಮಾ ಅವರನ್ನು ಬಾಲಿವುಡ್ ನಟಿ ಕಂಗನಾ ರಣಾವತ್ ಸಮರ್ಥಿಸಿದ್ದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಲು ಆಕೆಗೆ ಅರ್ಹತೆ ಇದೆ ಎಂದು ಕಂಗನಾ ರಣಾವತ್ ಹೇಳಿದ್ದಾರೆ. ಕಂಗನಾ ತಮ್ಮ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ನೂಪುರ್ ಬಗ್ಗೆ ತಮ್ಮ ವಿಚಾರವನ್ನು ಹಂಚಿಕೊಂಡಿದ್ದಾರೆ. ಕಂಗನಾ ತಮ್ಮ ಪೋಸ್ಟ್ ನಲ್ಲಿ, ನೂಪುರ್ ಶರ್ಮಾ ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಲು ಅರ್ಹರು. ನೂಪುರ್ ಗೆ ಬರುತ್ತಿರುವ ಎಲ್ಲಾ ರೀತಿಯ ಬೆದರಿಕೆಗಳನ್ನು ನಾನು ಗಮನಿಸುತ್ತಿದ್ದೇನೆ. ಅವರು ಪ್ರತಿದಿನ ಹಿಂದೂ ದೇವರುಗಳಿಗೆ ಅವಮಾನ ಮಾಡುತ್ತಿದ್ದಾರೆ.

ಅದರ ವಿ ರು ದ್ಧ ನಾವು ನ್ಯಾಯಾಲಯಕ್ಕೆ ಹೋಗುತ್ತೇವೆ. ದಯವಿಟ್ಟು ಡಾನ್ ಗಳಾಗುವ ಅಗತ್ಯವಿಲ್ಲ. ಇದು ಅಫ್ಘಾನಿಸ್ತಾನ ಅಲ್ಲ. ನಾವು ಒಂದು ಸಕ್ರಿಯ ಸರ್ಕಾರವನ್ನು ಹೊಂದಿದ್ದೇವೆ, ಇದು ಅದು ಪ್ರಜಾಪ್ರಭುತ್ವ ಎಂಬ ಪ್ರಕ್ರಿಯೆಯ ಮೂಲಕ ಚುನಾಯಿತವಾಗುತ್ತದೆ. ಇದನ್ನು ಮರೆತವರಿಗೆ ನಾನು ಒಮ್ಮೆ ನೆನಪಿಸುತ್ತಿದ್ದೇನೆ ಎಂದು ಹೇಳುವ ಮೂಲಕ ನೂಪುರ್ ಅವರ ಹೇಳಿಕೆಗೆ ಬೆದರಿಕೆ ಒಡ್ಡುತ್ತಿರುವವರ ವಿ ರು ದ್ಧ ತಮ್ಮ ಅಸಮಾಧಾನವನ್ನು ಕಂಗನಾ ಹೊರ ಹಾಕಿದ್ದಾರೆ.

Leave a Reply

Your email address will not be published. Required fields are marked *