ಕಿಂಗ್ ಈಸ್ ಬ್ಯಾಕ್ ಅಂತ ಬಾಯ್ಕಾಟ್ ಪಠಾಣ್ ಎಂದವರ ಕೆಣಕಿದ ಪ್ರಕಾಶ್ ರೈ: ಪಠಾಣ್ ನ ಹಾಡಿ ಹೊಗಳಿದ ನಟ

0
2871

Prakash Raj on Pathan : ಬಾಲಿವುಡ್(Bollywood) ಬಾದ್ ಶಾ, ಕಿಂಗ್ ಖಾನ್ ಖ್ಯಾತಿಯ ನಟ ಶಾರೂಖ್(Shahrukh Khan) ಅಭಿನಯದ ಪಠಾಣ್(Pathan Release) ಸಿನಿಮಾ ನಿನ್ನೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಸಿನಿಮಾ ಬಿಡುಗಡೆಗೆ ಕಾದಿದ್ದ ಅಸಂಖ್ಯಾತ ಅಭಿಮಾನಿಗಳ ನಿರೀಕ್ಷೆಯನ್ನು ಸಿನಿಮಾ ಸುಳ್ಳು ಮಾಡದೇ, ಅವರ ನಿರೀಕ್ಷೆಗಳನ್ನು ಭರಪೂರವಾಗಿ ಈಡೇರಿಸಿದೆ. ಮೊದಲ ದಿನವೇ ಭರ್ಜರಿ ಓಪನಿಂಗ್ ಪಡೆದ ಪಠಾಣ್(Pathan Opening) ಕೋಟಿಗಳ ಮೊತ್ತದಲ್ಲಿ ಕಲೆಕ್ಷನ್ ಮಾಡಿದ್ದು, ಪಠಾಣ್(Pathan Collection) ಸಿನಿಮಾ ಬಾಲಿವುಡ್ ಗೆ ಹೊಸ ಚೈತನ್ಯವನ್ನು ನೀಡಿದೆ ಎಂದೇ ಹೇಳಲಾಗುತ್ತಿದ್ದು, ಇದೀಗ ಈ ಸಿನಿಮಾ ಬಗ್ಗೆ ದಕ್ಷಿಣದ ಪ್ರಖ್ಯಾತ ನಟ ಪ್ರಕಾಶ್ ರೈ(Prakash Rai) ಪಠಾಣ್ ಬಾಯ್ಕಾಟ್ ಎಂದವರಿಗೆ ತಿರುಗೇಟು ನೀಡಿದ್ದಾರೆ.

ಪಠಾಣ್ ಸಿನಿಮಾದ ಬೇಷರಂ ರಂಗ್(Besharam Rang) ಹಾಡಿನ ಬಿಡುಗಡೆ ನಂತರ ಸಿನಿಮಾಕ್ಕೆ ವ್ಯಾಪಕ ವಿ ರೋ ಧ ವ್ಯಕ್ತ ವಾಗಿತ್ತು. ಆ ಹಾಡಿನಲ್ಲಿ ನಾಯಕಿ ದೀಪಿಕಾ ಪಡುಕೋಣೆ(Deepika Padukone) ತೊಟ್ಟಿದ್ದ ಕೇಸರಿ ಬಣ್ಣದ ಬಿ ಕಿ ನಿ (saffron Bikini) ಸೃಷ್ಟಿಸಿದ ಅವಾಂತರ ಅಷ್ಟಿಷ್ಟಲ್ಲ. ಎಲ್ಲೆಲ್ಲೂ ಅದು ದೊಡ್ಡ ಚರ್ಚೆಗೆ ಕಾರಣವಾಗಿತ್ತು‌. ಈ ಒಂದು ಹಾಡಿನ ಕಾರಣದಿಂದಾಗಿ ಹಲವು ಹಿಂದೂ ಸಂಘಟನೆಗಳು(Hindu Organization) ಪಠಾಣ್ ಸಿನಿಮಾವನ್ನು ಬಾಯ್ಕಾಟ್(Boycott Pathan) ಮಾಡಬೇಕೆಂದು ಆಗ್ರಹಿಸಿದ್ದವು. ಇದಕ್ಕೆ ಕೆಲವು ರಾಜಕೀಯ ನಾಯಕರು ಸಹಾ ತಮ್ಮ ದನಿಯನ್ನು ಜೊತೆಗೂಡಿಸಿದ್ದರು.

ಇದನ್ನೂ ಓದಿ: ದಶಕಗಳ ಕಾಲ ಜನರನ್ನು ನಗಿಸಿದ ಈ ನಟಿಯ ಖಾಸಗಿ ಜೀವನ ಕಣ್ಣೀರ ಕಥೆಯಾ? ಸ್ವಂತ ತಂಗಿಯರೇ ಮೋಸ ಮಾಡಿದ್ದು ನಿಜವೇನಾ?

ಇದಾದ ನಂತರ ಸೆನ್ಸಾರ್ ಪಠಾಣ್(Pathan Sensor) ಚಿತ್ರತಂಡಕ್ಕೆ ಕೆಲವು ದೃಶ್ಯಗಳಿಗೆ ಕತ್ತರಿ ಹಾಕುವಂತೆ ಸೂಚನೆಯನ್ನು ಸಹಾ ನೀಡಿತ್ತು. ಈ ಎಲ್ಲಾ ಅಡೆ ತಡೆಗಳನ್ನು ಮೀರಿ ಪಠಾಣ್ ತೆರೆಗೆ ಬಂದು, ಉತ್ತಮ ಪ್ರದರ್ಶನಗಳನ್ನು ಕಾಣುತ್ತಿದೆ. ಪಠಾಣ್(Pathan in Theaters) ಸಿನಿಮಾ ಚಿತ್ರ ಮಂದಿರಗಳಲ್ಲಿ ಉತ್ತಮ ಪ್ರದರ್ಶನವನ್ನು ಕಂಡು ಅಬ್ಬರಿಸುತ್ತಿರುವ ಈ ಸಂದರ್ಭದಲ್ಲಿ ಇದೀಗ ಬಹುಭಾಷಾ ನಟ, ದಕ್ಷಿಣದ ಸುಪ್ರಸಿದ್ಧ ನಟ ಪ್ರಕಾಶ್ ರೈ ಅವರು ಟ್ವೀಟ್(Prakash Raj Tweet) ಒಂದನ್ನು ಮಾಡುವ ಮೂಲಕ ಪಠಾಣ್ ಸಿನಿಮಾವನ್ನು ಹಾಡಿ ಹೊಗಳುತ್ತಿದ್ದಾರೆ ಮಾತ್ರವೇ ಅಲ್ಲದೇ ಬಾಯ್ಕಾಟ್ ಎಂದವರಿಗೆ ಟಾಂಗ್ ನೀಡಿದ್ದಾರೆ.

ನಟ ಪ್ರಕಾಶ್ ರೈ(Prakash Rai) ತಮ್ಮ ಟ್ವೀಟ್ ನಲ್ಲಿ, “ಹೇ, ಬಾಯ್ಕಟ್ ಬಿಗೋಟ್ಸ್, ಶ್!! ಹಲ್ಲಾ ಬೋಲ್, ಕಿಂಗ್ ಖಾನ್ ಎಸ್ ಆರ್ ಕೆ ಈಸ್ ಬ್ಯಾಕ್, ಕೀಪ್ ರಾಕಿಂಗ್ ದೀಪಿಕಾ” ಎಂದು ಬರೆದುಕೊಂಡಿದ್ದಾರೆ. ಅವರು ತಮ್ಮ ಟ್ವೀಟ್ ಅನ್ನು ಶಾರೂಖ್ ಖಾನ್ (Shah Rukh Khan) ಮತ್ತು ದೀಪಿಕಾ ಪಡುಕೋಣೆ (Deepika Padukone) ಅವರನ್ನು ಟ್ಯಾಗ್ ಮಾಡಿದ್ದಾರೆ. ಪ್ರಕಾಶ್ ರೈ ಅವರು ಮಾಡಿದ ಟ್ವೀಟ್ ಈಗ ವೈರಲ್ ಆಗಿದ್ದು, ಇದಕ್ಕೆ ಮಿಶ್ರ ಪ್ರತಿಕ್ರಿಯೆ ಗಳು ಹರಿದು ಬರುತ್ತಿವೆ. ಕೆಲವರು ಪ್ರಕಾಶ್ ರೈ ಅವರಿಗೆ ಸಪೋರ್ಟ್ ಮಾಡಿದರೆ, ಮತ್ತೆ ಕೆಲವರು ನಟನ ಈ ಟ್ವೀಟ್ ಅನ್ನು ಟೀಕಿಸಿ, ನೆಗೆಟಿವ್ ಆಗಿ ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ.

LEAVE A REPLY

Please enter your comment!
Please enter your name here