ಪ್ಯಾನ್ ಇಂಡಿಯಾ ಅನ್ನೋದೇ ಕಾಮಿಡಿ!! ನಾಲಗೆ ಹರಿ ಬಿಟ್ಟ ನಟ ಸಿದ್ಧಾರ್ಥ್ ಗೆ ಸರಿಯಾದ ಕೌಂಟರ್ ಕೊಟ್ಟ ಹಿರಿಯ ನಟ

Written by Soma Shekar

Published on:

---Join Our Channel---

ಪುಷ್ಪ, ತ್ರಿಬಲ್ ಆರ್ ಮತ್ತು ಕೆಜಿಎಫ್-2 ನಾಲ್ಕು ತಿಂಗಳ ಕಾಲದಲ್ಲಿ ಪ್ಯಾನ್ ಇಂಡಿಯಾ ಸಿನಿಮಾಗಳಾಗಿ ಬೇರೆ ಬೇರೆ ಭಾಷೆಗಳಲ್ಲಿ ಬಿಡುಗಡೆ ಆಗಿ ಸಂಚಲನ ವಿಜಯವನ್ನು ಪಡೆದುಕೊಂಡಿದೆ. ಸಿನಿಮಾ ಇಂಡಸ್ಟ್ರಿ ಯಲ್ಲಿ ಪ್ಯಾನ್ ಇಂಡಿಯಾ ಎನ್ನುವ ಪದ ಈ ಸಿನಿಮಾಗಳು ಬರುವುದಕ್ಕಿಂತ ಮೊದಲೇ ಇತ್ತು. ಇನ್ನೂ ಹಿಂದಿ ಪ್ರಭಾವ ಇರುವ ಪ್ರದೇಶಗಳಲ್ಲೂ ಸಹಾ ದಕ್ಷಿಣದ ಪ್ಯಾನ್ ಇಂಡಿಯಾ ಸಿನಿಮಾಗಳು ಅಬ್ಬರವನ್ನು ಸೃಷ್ಟಿಸಿವೆ. ಹಿಂದಿ ಸಿನಿಮಾಗಳು ಹಿಂದಿಕ್ಕಿ ಕಲೆಕ್ಷನ್ ವಿಚಾರದಲ್ಲೂ ಸಹಾ ಮುಂದೆ ಇದ್ದು, ನಮ್ಮವರು ಇದನ್ನು ಕಂಡು ಸಿಕ್ಕಾಪಟ್ಟೆ ಖುಷಿ ಪಡುತ್ತಿದ್ದಾರೆ.

ಆದರೆ ಈಗ ಎಲ್ಲರೂ ಮೆಚ್ಚುತ್ತಿರುವ ಪ್ಯಾನ್ ಇಂಡಿಯಾ ಸಿನಿಮಾ ಎನ್ನುವ ಪದ ನಟ ಸಿದ್ಧಾರ್ಥ್ ಅವರಿಗೆ ಮಾತ್ರ ಏಕೋ ಇಷ್ಟವಾಗುತ್ತಿಲ್ಲ. ಅವರು ಇಂಡಿಯನ್ ಸಿನಿಮಾ ಎಂದರೆ ಬಾಲಿವುಡ್ ನಿಂದ ಬರುವ ಸಿನಿಮಾ, ಪ್ಯಾನ್ ಇಂಡಿಯಾ ಸಿನಿಮಾ ಎಂದರೆ ದಕ್ಷಿಣ ಭಾರತದಿಂದ ಬರುವ ಸಿನಿಮಾ ಎನ್ನುವ ಭಾವನೆ‌ ಮೂಡುತ್ತಿದೆ. ಅಸಲಿಗೆ ಸಿನಿಮಾ ಯಾವುದೇ ಭಾಷೆಯದ್ದೇ ಆದರೂ ಅದು ಇಂಡಿಯನ್ ಸಿನಿಮಾ ಆಗುತ್ತದೆ ಎಂದು ನಟ ಸ್ಪಷ್ಟನೆಯನ್ನು ನೀಡುವಂತಹ ಪ್ರಯತ್ನವನ್ನು ಮಾಡಿದ್ದಾರೆ.

ನಾನು ಹದಿನೈದು ವರ್ಷಗಳ ಹಿಂದೆ ಸಂದರ್ಶನಗಳನ್ನು ನೀಡುವ ವೇಳೆ ಕ್ರಾಸ್ ಓವರ್ ಎನ್ನುವ ಟಾಪಿಕ್ ಚರ್ಚೆಯಲ್ಲಿ ಇರುತ್ತಿತ್ತು. ಹಾಲಿವುಡ್ ರೇಂಜ್ ಗೆ ಯಾವಾಗ ಸೇರುವಿರಿ? ಎಂದು ಕೇಳುತ್ತಿದ್ದರು ಎನ್ನುವ ಮಾತನ್ನು ಅವರು ಸ್ಮರಿಸಿದ್ದಾರೆ. ಭಾರತೀಯ ಸಿನಿಮಾಗಳನ್ನು ಭಾರತೀಯ ಸಿನಿಮಾಗಳಾಗಿ ಏಕೆ ನೋಡುತ್ತಿಲ್ಲ ಎಂದು ನಟ ಸಿದ್ಧಾರ್ಥ್ ಪ್ರಶ್ನೆಯೊಂದನ್ನು ಸಹಾ ಮಾಡಿದ್ದಾರೆ. ಪ್ಯಾನ್ ಇಂಡಿಯಾ ಎನ್ನುವುದು ಒಂದು ಕಾಮಿಡಿ ಪದ, ಬಹಳ ಅವಮಾನಕರ ಅದು ಎಂದಿದ್ದಾರೆ ಸಿದ್ಧಾರ್ಥ್.

ಇನ್ನು ಇದೇ ವೇಳೆ ತೆಲುಗಿನ ಹಿರಿಯ ನಟ, ತನ್ನದೇ ಆದ ಪ್ರತ್ಯೇಕ ಸ್ಥಾನ ಹಾಗೂ ವರ್ಚಸ್ಸು ಹೊಂದಿರುವ ನಟ ನಾರಾಯಣ ಮೂರ್ತಿ ಅವರು ಇದೇ ಪ್ಯಾನ್ ಇಂಡಿಯಾ ಸಿನಿಮಾ ಬಗ್ಗೆ ಮಾತನಾಡುತ್ತಾ, ಈಗೀಗ ತೆಲುಗು ಸಿನಿಮಾಗಳು ಪ್ಯಾನ್ ಇಂಡಿಯಾ ರೇಂಜ್ ಗೆ ಹೋಗುತ್ತಿದ್ದು, ಹುಚ್ಚು ಹುಚ್ಚು ಹೇಳಿಕೆಗಳನ್ನು ನೀಡುವ ಮೂಲಕ ಅದನ್ನು ಹಾಳು ಮಾಡಬೇಡಿ ಎಂದು ಕೌಂಟರ್ ನೀಡಿದ್ದು, ಸಿನಿಮಾಗಳಿಗೆ ಅಗತ್ಯ ಇರುವುದು ಪ್ರೋತ್ಸಾಹ ಎನ್ನುವ ಮಾತನ್ನು ಆಡಿದ್ದಾರೆ.

Leave a Comment