ಪ್ಯಾಡ್ ಒಳಗಿತ್ತು ಡ್ರ ಗ್ಸ್, ಶಾರುಖ್ ಖಾನ್ ಡ್ರೈವರ್ ವಿಚಾರಣೆ: ಆರ್ಯನ್ ಖಾನ್ ಪ್ರಕರಣ

Written by Soma Shekar

Published on:

---Join Our Channel---

ಮುಂಬೈ ನಿಂದ ಗೋವಾಕ್ಕೆ ತೆರಳುತ್ತಿದ್ದ ಐಶಾರಾಮೀ ಹಡಗಿನಲ್ಲಿ ರೇವ್ ಪಾರ್ಟಿ ನಡೆಯುತ್ತಿದೆ ಎನ್ನುವ ಖಚಿತ ಮಾಹಿತಿಯ ಮೇರೆಗೆ ಎನ್ ಸಿ ಬಿ ಕಳೆದ ಶನಿವಾರ ರಾತ್ರಿ ನಡೆಸಿದ ಧಾ ಳಿ ಯಲ್ಲಿ ಬಾಲಿವುಡ್ ನಟ ಶಾರೂಖ್ ಖಾನ್ ಪುತ್ರ ಹಾಗೂ ಆತನ ಸ್ನೇಹಿತರನ್ನು ಎನ್ ಸಿ ಬಿ ತನ್ನ ವಶಕ್ಕೆ ಪಡೆದುಕೊಂಡಿದ್ದು, ಅವರ ನ್ಯಾಯಾಂಗ ಬಂಧನದ ಅವಧಿಯನ್ನು ವಿಸ್ತರಣೆ ಮಾಡಿದೆ. ಆರ್ಯನ್ ಖಾನ್ ಬಂ ಧ ನ ದ ನಂತರ ಈ ವಿಚಾರ ಸಿಕ್ಕಾಪಟ್ಟೆ ಚರ್ಚೆಗೆ ಕಾರಣವಾಗಿದೆ. ಎನ್ ಸಿ ಬಿ ರೈಡ್ ನಡೆಸಿದ ವೀಡಿಯೋಗಳು ಸಹಾ ಅಧಿಕಾರಿಗಳಿಗೆ ಲಭ್ಯವಾಗಿದೆ ಎನ್ನಲಾಗಿದೆ.

ಈಗ ಲಭ್ಯವಾಗಿರುವ ಮಾಹಿತಿಗಳಿಂದಾಗಿ ಹೊಸ ವಿಚಾರವೊಂದು ಬಹಿರಂಗವಾಗಿದೆ. ದಕ್ಕಿರುವ ಮಾಹಿತಿಗಳ ಅನ್ವಯ ಡ್ರ ಗ್ಸ್ ಅನ್ನು ಸ್ಯಾನಿಟರಿ ಪ್ಯಾಡ್ ಗಳಲ್ಲಿ ಅಡಗಿಸಲಾಗಿತ್ತು ಎನ್ನಲಾಗಿದೆ. ಅದೇ ರೀತಿ ಶಾರುಖ್ ಖಾನ್ ಚಾಲಕನ ವಿಚಾರಣೆಯನ್ನು ಸಹಾ ಎನ್ ಸಿ ಬಿ ನಡೆಸಿದೆ. ಸಾಕ್ಷಿಗಳನ್ನು ನಾಶ ಮಾಡಬಹುದು ಎನ್ನುವ ಕಾರಣದಿಂದ ಕೋರ್ಟ್ ಆರ್ಯನ್ ಖಾನ್ ಗೆ ಜಾಮೀನು ನೀಡುವುದಕ್ಕೆ ನಿರಾಕರಿಸಿದೆ. ಆದ ಕಾರಣ ಆರ್ಯನ್ ಖಾನ್ ನ ಕಸ್ಟಡಿಯನ್ನು ಮುಂದುವರೆಸಿದೆ.

ಎನ್ ಸಿ ಬಿ ಗೆ ದೊರಕಿರುವ ವೀಡಿಯೋ ಪ್ರಕಾರ ಸ್ಯಾನಿಟರಿ ಪ್ಯಾಡ್ ನಿಂದ ಪ್ಯಾಕೇಜ್ ಮಾಡಿದ ವಸ್ತುಗಳನ್ನು ತೆಗೆಯುವ ದೃಶ್ಯ ಕಂಡಿದೆ ಎನ್ನಲಾಗಿದೆ. ಆರ್ಯನ್ ಡ್ರ ಗ್ ಸೇವನೆ ಮಾಡಿದ್ದ ಎನ್ನುವ ವಿಚಾರವಾಗಿ ಎನ್ ಸಿ ಬಿ ದಾಳಿಯ ಸಾಕ್ಷಿಯನ್ನು ಬಿಡುಗಡೆ ಮಾಡಿದ್ದು, ಅರ್ಬಾಜ್ ಮರ್ಚೆಂಟ್ ಬಳಿ ಆರು ಗ್ರಾಂ ಚರಸ್ ಇತ್ತು ಎನ್ನಲಾಗಿದೆ. ಆತ ತನ್ನ ಶೂ ಕೆಳಗೆ ಡ್ರ ಗ್ಸ್ ಅಡಗಿಸಿ ಇಟ್ಟಿದ್ದ ಎನ್ನಲಾಗಿದೆ. ಶಾರೂಖ್ ಖಾನ್ ಚಾಲಕನ ವಿಚಾರಣೆ ನಂತರ ಇನ್ನಷ್ಟು ಮಾಹಿತಿಗಳು ಹೊರ ಬರಬಹುದು ಎನ್ನುವ ನಿರೀಕ್ಷೆ ಇದೆ ಎನ್ನಲಾಗಿದೆ.

ಒಟ್ಟಾರೆ ಡ್ರ ಗ್ಸ್ ಪ್ರಕರಣ ಸಾಕಷ್ಟು ಸಂಚಲನ ಮೂಡಿಸಿದ್ದು, ಇದಕ್ಕೆ ಪರ, ವಿರೋಧ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದೆ. ಬಾಲಿವುಡ್ ನ ಸೆಲೆಬ್ರಿಟಿಗಳು ಶಾರುಖ್ ಖಾನ್ ಗೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ. ಆರ್ಯನ್ ಖಾನ್ ಬಂ ಧನ ಪ್ರಸ್ತುತ ದೇಶದಲ್ಲಿ ಬಹಳ ಪ್ರಮುಖವಾದ ಸುದ್ದಿಯಾಗಿದ್ದು, ಈ ಪ್ರಕರಣದ ಬೆಳವಣಿಗೆಗಳ ಕಡೆಗೆ ಬಹಳಷ್ಟು ಜನರು ಗಮನವನ್ನು ಹರಿಸಿದ್ದಾರೆ.

Leave a Comment