ಅಂದಕ್ಕಾಗಿ ಸರ್ಜರಿ ಮೊರೆ ಹೋದ್ರಾ ವಿಶ್ವಸುಂದರಿ? ಟ್ರೇಲರ್ ಬಿಡುಗಡೆ ವೇಳೆ ನಟಿಯ ನೋಡಿ ಜನ ಹೀಗೆಲ್ಲಾ ಅನ್ನೋದಾ?

Featured-Articles Entertainment Movies News

ಮಣಿರತ್ನಂ ನಿರ್ದೇಶನದ ಬಹು ನಿರೀಕ್ಷಿತ ಹಾಗೂ ಬಹು ತಾರಾಗಣದ ಸಿನಿಮಾ ಪೊನ್ನಿಯನ್ ಸೆಲ್ವನ್ ಸಿನಿಮದ ಟ್ರೇಲರ್ ಕೆಲವೇ ದಿನಗಳ ಹಿಂದೆಯಷ್ಟೇ ಬಿಡುಗಡೆ ಆಗಿತ್ತು. ತಡರಾತ್ರಿ ಟ್ರೇಲರ್ ಬಿಡುಗಡೆ ಆದ ಕಾರಣ ಮರು ದಿನ ಸಿನಿ ಅಭಿಮಾನಿಗಳಿಗೆ ಈ ವಿಚಾರ ತಿಳಿಯಿತು. ಟ್ರೇಲರ್ ಬಿಡುಗಡೆಯ ಕಾರ್ಯಕ್ರಮದಲ್ಲಿ ನಟಿ ಐಶ್ವರ್ಯ ರೈ ಸಹಾ ಭಾಗಿಯಾಗಿದ್ದರು. ವರ್ಷಗಳ ವಿರಾಮದ ನಂತರ ನಟಿ ಐಶ್ವರ್ಯ ರೈ ಅವರು ಮಣಿರತ್ನಂ ಅಭಿನಯದ ಪೊನ್ನಿಯನ್ ಸೆಲ್ವನ್ ಸಿನಿಮಾದಲ್ಲಿ ರಾಜ ಮನೆತನದ ಹೆಣ್ಣು ನಂದಿನಿ ಎಂಬ ಪವರ್ ಫುಲ್ ಪಾತ್ರದ ಮೂಲಕ ಬೆಳ್ಳಿತೆರೆಗೆ ಕಮ್ ಬ್ಯಾಕ್ ಮಾಡುತ್ತಿದ್ದಾರೆ. ಇದು ಅವರ ಅಭಿಮಾನಿಗಳಿಗೆ ಸಹಜವಾಗಿಯೇ ಕುತೂಹಲ ಮೂಡಿಸಿದೆ.

ಪೊನ್ನಿಯನ್ ಸೆಲ್ವನ್ ಸಿನಿಮಾದ ಟ್ರೇಲರ್ ಬಿಡುಗಡೆ ಚೆನ್ನೆನಲ್ಲಿ ನಡೆದಿತ್ತು. ಈ ವೇಳೆ ನಟಿ ಐಶ್ವರ್ಯ ರೈ ಅವರ ಲುಕ್ ವೈರಲ್ ಆದ ಮೇಲೆ ಅನೇಕರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಅಲ್ಲದೇ ನಟಿಯ ಲುಕ್ ನೋಡಿ ಇದೀಗ ಟ್ರೋಲರ್ಸ್ ನಟಿಯನ್ನು ಟ್ರೋಲ್ ಮಾಡುತ್ತಿದ್ದಾರೆ. ಹೌದು ನಟಿಯನ್ನು ಅವರ ಲುಕ್ ನಿಂದಾಗಿಯೇ ಈಗ ಟ್ರೋಲ್ ಮಾಡಲಾಗುತ್ತಿದೆ. ನಟಿ ಐಶ್ವರ್ಯ ರೈ ಅವರು ಕಪ್ಪು ಬಣ್ಣದ ಸೂಟ್ ಧರಿಸಿ ಬಹಳ ಸುಂದರವಾಗಿ ಕಾಣುತ್ತಿದ್ದರು. ಆದರೆ ಈ ಫೋಟೋಗಳು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆದ ಮೇಲೆ ಅದನ್ನು ನೋಡಿದ ನೆಟ್ಟಿಗರು ನಟಿಯ ತುಟಿ ಮತ್ತು ಮುಖದ ಗಾತ್ರ ನೋಡಿ ಟ್ರೋಲ್ ಮಾಡುತ್ತಿದ್ದಾರೆ.

ಸೋಶಿಯಲ್ ಮೀಡಿಯಾಗಳಲ್ಲಿ ನಟಿ ತಮ್ಮ ಮುಖಕ್ಕೆ ಹೊಂದಾಣಿಕೆಯಾಗದಂತಹ ಬೊಟಾಕ್ಸ್ ಮಾಡಿಸಿಕೊಂಡಿದ್ದಾರೆ ಎಂದು ಕಾಮೆಂಟ್ ಗಳು ಹರಿದು ಬರುತ್ತಿವೆ. ಅವರು ಮಾಡಿಸಿರುವ ಬೊಟಾಕ್ಸ್ ಸರಿಯಾಗಿ ಹೊಂದಾಣಿಕೆಯಾಗದ ಕಾರಣ ನಟಿಯ ಮುಖ ತುಂಬಾ ಬದಲಾಗಿದೆ ಎಂದು ಕೆಲವರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ನೆಟ್ಟಿಗರೊಬ್ಬರು ಕಾನೆಂಟ್ ಮಾಡಿ, ಬೊಟಾಕ್ಸ್ ಹೆಚ್ಚಾಗಿದೆ ಎಂದರೆ, ಮತ್ತೊಬ್ಬರು, ಎಷ್ಟೊಂದು ಪ್ಲಾಸ್ಟಿಕ್ ಎಂದಿದ್ದಾರೆ. ಇನ್ನೊಬ್ಬರು ನಟಿಯು ತಮ್ಮ ಕೆನ್ನೆಗಳಿಗೆ ಏನೋ ಮಾಡಿಸಿದಂತೆ‌ ಕಾಣಿಸುತ್ತಿದೆ ಎಂದು ಸಹಾ ಹೇಳಿದ್ದಾರೆ.‌

ಆದರೆ ಇದೇ ವೇಳೆ ಇನ್ನೊಂದೆಡೆ ನಟಿಯ ಅಭಿಮಾನಿಗಳ ಕಡೆಯಿಂದ ಮಾತ್ರ ನಟಿಯ ವೈರಲ್ ಫೋಟೋಗಳಿಗೆ ದೊಡ್ಡ ಮಟ್ಟದಲ್ಲಿ ಮೆಚ್ಚುಗೆ ಗಳು ಹರಿದು ಬರುತ್ತಿದೆ. ನಟಿಯ ಅಭಿಮಾನಿಗಳು ನಟಿಯ ಅಂದವನ್ನು ಹಾಡಿ ಹೊಗಳುತ್ತಿದ್ದಾರೆ. ಐಶ್ವರ್ಯ ರೈ ಅವರ ಅಭಿನಯದ ಪೊನ್ನಿಯನ್ ಸೆಲ್ವನ್ ಸಿನಿಮಾ ಇದೇ ಸೆಪ್ಟೆಂಬರ್‌ 30 ಕ್ಕೆ ಬಿಡುಗಡೆಗೆ ಸಜ್ಜಾಗಿದೆ. ಭಾರತ ಸಿನಿ ರಂಗದ ಅಧ್ಬುತ ನಿರ್ದೇಶಕರಲ್ಲಿ ಒಬ್ಬರು ಎನಿಸಿಕೊಂಡಿರುವ ಮಣಿರತ್ನಂ ನಿರ್ದೇಶನದ ಈ ಸಿನಿಮಾ ಬಗ್ಗೆ ಕಳೆದ ಕೆಲವು ತಿಂಗಳುಗಳಿಂದಲೂ ಸಹಾ ಸಾಕಷ್ಟು ಚರ್ಚೆಯನ್ನು ಹುಟ್ಟು ಹಾಕಿದೆ.

Leave a Reply

Your email address will not be published.