HomeEntertainmentಪೇಜಾವರ ಶ್ರೀಗಳ ಬಗ್ಗೆ ಹೇಳಿಕೆ:ವಿಚಾರಣೆಗೆ ಹಾಜರಾಗಿ ಅಧಿಕಾರಿಗಳ ಮುಂದೆ ಕಣ್ಣೀರಿಟ್ಟ ನಾದಬ್ರಹ್ಮ ಹಂಸಲೇಖ

ಪೇಜಾವರ ಶ್ರೀಗಳ ಬಗ್ಗೆ ಹೇಳಿಕೆ:ವಿಚಾರಣೆಗೆ ಹಾಜರಾಗಿ ಅಧಿಕಾರಿಗಳ ಮುಂದೆ ಕಣ್ಣೀರಿಟ್ಟ ನಾದಬ್ರಹ್ಮ ಹಂಸಲೇಖ

ನಾದ ಬ್ರಹ್ಮ, ಮಹಾ ಗುರು ಖ್ಯಾತಿಯ ಹಿರಿಯ ಸಂಗೀತ ನಿರ್ದೇಶಕ ಹಂಸಲೇಖ ಅವರು ಕೆಲವು ದಿನಗಳ ಹಿಂದೆಯಷ್ಟೇ ಸಮಾರಂಭವೊಂದರಲ್ಲಿ ಪೇಜಾವರ ಮಠದ ಶ್ರೀ ಗಳ ಕುರಿತಾಗಿ ನೀಡಿದಂತಹ ಒಂದು ಹೇಳಿಕೆ ರಾಜ್ಯದಾದ್ಯಂತ ದೊಡ್ಡ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿತ್ತು ಹಾಗೂ ಇದೊಂದು ವಿವಾದವನ್ನು ಸಹಾ ಹುಟ್ಟು ಹಾಕಿತ್ತು. ಹಂಸಲೇಖ ಅವರು ಪೇಜಾವರ ಶ್ರೀ ಗಳ ಕುರಿತಾಗಿ ಹೇಳಿದ ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಸಹಾ ಪರ ವಿ ರೋ ಧ ಚರ್ಚೆಗಳನ್ನು ಹುಟ್ಟು ಹಾಕಿತ್ತು. ಪೋಲಿಸ್ ಠಾಣೆಯಲ್ಲಿ ಹಂಸಲೇಖ ಅವರ ಮೇಲೆ ದೂರು ದಾಖಲಾಯಿತು.

ಯಾವಾಗ ಹಂಸಲೇಖ ಅವರ ಮಾತು ಸಿಕ್ಕಾಪಟ್ಟೆ ಚರ್ಚೆಗೆ ಕಾರಣವಾಯಿತೋ ಕೂಡಲೇ ಹಂಸಲೇಖ ಅವರು ಸಹಾ ವೀಡಿಯೋ ಮುಖಾಂತರ ಕ್ಷಮಾಪಣೆಯನ್ನು ಯಾಚಿಸಿದ್ದರು. ಆದರೂ ಈ ವಿಚಾರ ಮಾತ್ರ ತೀ ವ್ರ ತೆಯನ್ನು ಪಡೆದುಕೊಂಡು, ಕೆಲವು ಸಂಘಟನೆಗಳು ಹಂಸಲೇಖ ಅವರ ಮೇಲೆ ಪೋಲಿಸ್ ಠಾಣೆಯಲ್ಲಿ ದೂರುಗಳು ದಾಖಲಾದವು. ದೂರು ದಾಖಲಾದ ಹಿನ್ನೆಲೆಯಲ್ಲಿ ಹಂಸಲೇಖ ಅವರು ತಮ್ಮ ಹೇಳಿಕೆಯನ್ನು ದಾಖಲಿಸುವುದಕ್ಕಾಗಿ ಪೋಲಿಸ್ ಠಾಣೆಗೆ ತೆರಳಿದ್ದರು ಎನ್ನಲಾಗಿದೆ.

ಪೋಲಿಸ್ ಠಾಣೆಯಲ್ಲಿ ಹೇಳಿಕೆಯನ್ನು ದಾಖಲಿಸುವ ವೇಳೆಯಲ್ಲಿ ಹಂಸಲೇಖ ಅವರು ಮಾತನಾಡುವ ಭರದಲ್ಲಿ ಹಾಗೆ ಹೇಳಿ ಬಿಟ್ಟೆ. ನನ್ನ ಹೇಳಿಕೆಗೆ ನನ್ನ ಹೆಂಡತಿಯೇ ಬೇಸರ ವ್ಯಕ್ತಪಡಿಸಿದ್ರು. ನನ್ನ ಎಪ್ಪತ್ತು ವರ್ಷದ ಜೀವನದಲ್ಲಿ ಎಂದೂ ಕೂಡಾ ಹೀಗೆ ಮಾಡಿಕೊಂಡಿರಲಿಲ್ಲ. ನನ್ನ ಹೇಳಿಕೆಯಿಂದ ತಪ್ಪಾಗಿದೆ. ಯಾವುದೇ ಧರ್ಮ, ಜಾತಿಯನ್ನು ನಿಂದಿಸುವ ಉದ್ದೇಶ ಇರಲಿಲ್ಲ ಎಂದು ಹೇಳಿದ್ದಾರೆನ್ನಲಾಗಿದೆ.

ಈ ಘಟನೆಯಿಂದ ನನಗೆ ತುಂಬಾ ನೋವಾಗಿದೆ. ಇದಾದ ನಂತರ ನನ್ನ ಕೆಲಸದಲ್ಲೂ ಕೂಡಾ ಸೆಟ್ ಬ್ಯಾಕ್ ಆಗಿದೆ. ನಾನು ಈ ಘಟನೆಯಿಂದ ತುಂಬಾ ನೋವನ್ನು ಅನುಭವಿಸಿದ್ದೇನೆ ಎಂದು ಅಧಿಕಾರಿಗಳ ಮುಂದೆ ಹೇಳುತ್ತಾ ಹಂಸಲೇಖ ಅವರು ಭಾವುಕರಾಗಿ ಕಣ್ಣೀರು ಹಾಕಿದ್ದಾರೆಂದು ಮಾದ್ಯಮವೊಂದರಲ್ಲಿ ಸುದ್ದಿಯಾಗಿದೆ. ನಂತರ ಕೆಲವು ನಿಮಿಷಗಳ ಕಾಲ ಸುಧಾರಿಸಿಕೊಂಡು ಅಲ್ಲಿಂದ ಹೊರಟಿದ್ದಾರೆ ಎನ್ನಲಾಗಿದೆ.

- Advertisment -