ಪೇಜಾವರ ಶ್ರೀಗಳು ಕೋಳಿ ತಿಂತಾರಾ? ಎಂದು ಪ್ರಶ್ನಿಸಿದ್ದ ಹಂಸಲೇಖ ಇಂದು ಕ್ಷಮೆ ಕೇಳುತ್ತಾ ಹೇಳಿದ್ದೇನು??

Written by Soma Shekar

Published on:

---Join Our Channel---

ಕನ್ನಡ ನಾಡಿನ ಜನರು ನಾದ ಬ್ರಹ್ಮ ಎಂದು ಕರೆದ ಗೌರವಿಸುವ ಹಿರಿಯ ಹಾಗೂ ಚಂದನವನದ ಜನಪ್ರಿಯ ಸಂಗೀತ ನಿರ್ದೇಶಕ ಹಂಸಲೇಖ ಅವರು ಆಡಿದ ಮಾತುಗಳು ನಿನ್ನೆಯಿಂದ ಸಾಕಷ್ಟು ಚರ್ಚೆಗಳನ್ನು ಹುಟ್ಟು ಹಾಕಿವೆ. ಸಮಾನತೆ ಹಾಗೂ ಅಸ್ಪೃಶ್ಯತೆ ಕುರಿತಾಗಿ ಮಾತನಾಡುವ ವೇಳೆ ಹಂಸಲೇಖ ಅವರು ಆಡಿದ ಮಾತುಗಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ಪರ ವಿ ರೋ ಧ ಅಭಿಪ್ರಾಯಗಳು ಹರಿದು ಬರುತ್ತಿವೆ. ನೆಟ್ಟಿಗರ ನಡುವೆ ಈ ವಿಚಾರವಾಗಿ ವಾ ಗ್ಯು ದ್ಧ ಗಳೇ ನಡೆಯುತ್ತಿದ್ದು, ಮಾದ್ಯಮಗಳ ತುಂಬೆಲ್ಲಾ ಈ ವಿಷಯ ಸಖತ್ ಸದ್ದು ಮಾಡುತ್ತಿದೆ.

ಇತ್ತೀಚೆಗೆ ಮೈಸೂರಿನಲ್ಲಿ ಒಂದು ಪ್ರಶಸ್ತಿ ಪ್ರಧಾನ ಸಮಾರಂಭ ನಡೆದಿತ್ತು. ಈ ಸಮಾರಂಭದಲ್ಲಿ ಹಂಸಲೇಖ ಅವರು ಸಹಾ ಭಾಗಿಯಾಗಿದ್ದರು. ಈ ವೇಳೆ ಸಮಾರಂಭದಲ್ಲಿ ಅವರು ಸಮಾನತೆ ಹಾಗೂ ಅಸ್ಪೃಶ್ಯತೆಯ ವಿಚಾರವಾಗಿ ಒಂದು ಸಂದೇಶವನ್ನು ನೀಡುವ ಸಮಯದಲ್ಲಿ ಪೇಜಾವರ ಶ್ರೀಗಳ ವಿಷಯವನ್ನು ಪ್ರಸ್ತಾಪ ಮಾಡಿದ್ದಾರೆ. ಅವರು ಪೇಜಾವರ ಶ್ರೀಗಳ ಕುರಿತು ಹೇಳಿದ ಮಾತು ಬಹಳಷ್ಟು ಜನರ ಅಸಮಾಧಾನಕ್ಕೆ ಕಾರಣವಾಗಿದೆ. ಈ ಮಾತುಗಳು ತರವಲ್ಲ ಎನ್ನುವುದು ಅನೇಕರ ಅಭಿಪ್ರಾಯವೂ ಆಗಿದೆ.

ಹಂಸಲೇಖ ಅವರಾಡಿದ ಈ ಮಾತುಗಳು ದೊಡ್ಡ ಚರ್ಚೆಗೆ ಕಾರಣವಾಗಿ ಹೋಗಿದೆ. ಸಮಾರಂಭದಲ್ಲಿ ಹಂಸಲೇಖ ಅವರು ಮಾತನಾಡುತ್ತಾ, ಪೇಜಾವರ ಶ್ರೀಗಳು ದಲಿತರ ಮನೆಗೆ ಹೋಗಿದ್ದರೆನ್ನುವ ವಿಷಯ ಸುದ್ದಿಯಾಗಿತ್ತು. ಅವರು ದಲಿತರ ಮನೆಗೆ ಹೋಗಿ ಅಲ್ಲಿ ಕುಳಿತಿದ್ದರಷ್ಟೇ. ಅವರು ಕೋಳಿ ಕೊಟ್ಟರೆ ತಿನ್ನೋಕೆ ಆಗುತ್ತದೆಯೇ? ಕೋಳಿ ಬೇಡ, ಕುರಿ ರಕ್ತದ ಫ್ರೈ ಮಾಡಿಕೊಟ್ಟರೆ ತಿಂತಾರಾ? ಲಿವರ್ ಫ್ರೈ ತಿಂತಾರಾ, ಆಗತ್ತಾ? ಅಂದರೆ, ದಲಿತರ ಮನೆಗೆ  ಹೋಗೋದು ಏನ್ ದೊಡ್ಡ ವಿಷ್ಯಾ ಅಂತ ನಂಗ್ ಅನ್ನಿಸ್ತು ಅಂತ ಹೇಳಿಕೆ ನೀಡಿದ್ದರು.

ಇಷ್ಟೇ ಅಲ್ಲದೆ ದಲಿತರನ್ನು ಬಲಿತರು ತಮ್ಮ ಮನೆಗಳಿಗೆ ಕರೆದುಕೊಂಡು ಹೋಗಬೇಕು. ಅವರ ಮನೆಯಲ್ಲಿ ಊಟ ಹಾಕಬೇಕು, ದಲಿತರ ಮುಟ್ಟಿದ ಲೋಟಗಳನ್ನು ನಾವು ತೊಳೆಯುತ್ತೀವಿ ಎಂದು ಬಲಿತರು ಹೇಳಬೇಕು ಎಂದಿದ್ದರು. ಹಂಸಲೇಖ ಅವರು ಪೇಜಾವರ ಶ್ರೀಗಳ ಬಗ್ಗೆ ಆಡಿದ ಮಾತುಗಳು ವೈರಲ್ ಆದ ಬೆನ್ನಲ್ಲೇ ಅವರ ಈ ಮಾತುಗಳ ಕುರಿತಾಗಿ ಸಾಮಾಜಿಕ ಜಾಲತಾಣಗಳಲ್ಲಿ ವಿ ರೋ ಧ ವ್ಯಕ್ತವಾಗುತ್ತಿರುವುದನ್ನು ಕಂಡು ನಾದಬ್ರಹ್ಮ ಹಂಸಲೇಖ ಅವರು ಬಹಿರಂಗವಾಗಿ ಕ್ಷಮೆಯಾಚಿಸಿದ್ದಾರೆ.

ಹಂಸಲೇಖ ಅವರು, ನನಗೆ ಗೊತ್ತಿದೆ ಎಲ್ಲಾ ಮಾತುಗಳು ವೇದಿಕೆಗೆ ಅಲ್ಲ ಎನ್ನುವುದು. ಅದು ಪ್ರಶಸ್ತಿ ಪುರಸ್ಕಾರ ಸಭೆಯಾಗಿತ್ತು. ಅಲ್ಲಿ ನುಡಿದರೆ ಮುತ್ತಿನ ಹಾರದಂತಿರಬೇಕಿತ್ತು. ನಾನು ಹಾಗೆಯೇ ಅಲಂಕರಿಸಬೇಕಿತ್ತು. ಅದು ತಪ್ಪು” ಎಂದು ಹೇಳುತ್ತಾ ಸಮಸ್ತ ಕರ್ನಾಟಕದ ಜನರಲ್ಲಿ ಅವರು ಕ್ಷಮೆ ಯಾಚಿಸಿದ್ದಾರೆ. ಅಸ್ಪೃಶ್ಯತೆಯು ನಮ್ಮ ದೇಶಕ್ಕೆ ಅಂಟಿದ ಶಾಪ, ಆದರೆ ಇದು ನನ್ನ ಮಾತಲ್ಲ ಜಿಡ್ಡು ಕೃಷ್ಣಮೂರ್ತಿಯವರ ಹೇಳಿಕೆ ಎಂದಿದ್ದಾರೆ ಹಂಸಲೇಖ.

ಇಂತಹ ಅನಿಷ್ಟಗಳನ್ನು ತೊಡೆದುಹಾಕುವುದಕ್ಕಾಗಿ ಪೇಜಾವರರಂತಹ ಎಲ್ಲಾ ಗುರು ಹಿರಿಯರು ಸಂಧಾನಗಳನ್ನು, ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ನನಗೆ ಈ ಎಲ್ಲಾ ಸಂಧಾನ ಪ್ರಯತ್ನಗಳ ಕುರಿತಾಗಿ ಅಪಾರವಾದ ಗೌರವವಿದೆ. ದಶಕಗಳ ಕೆಳಗೆ ನಮ್ಮ ಕಲಾರಂಗದಲ್ಲಿ ಕೂಡಾ ಇಂತಹದೊಂದು ಅಸ್ಪೃಶ್ಯತೆ ದಟ್ಟವಾಗಿತ್ತು. ಆದರೆ ಮನುಷ್ಯವಶಾತ್ ಅಲ್ಲಿ ಇಂದು ಅದು ಮಾಯವಾಗಿದೆ. ಭಾರತದಲ್ಲಿ ಅದು ಮಾಯವಾಗುವ ದಿನವಿದೆ. ಅದು ನಿಧಾನವಾಗಿ ಸಂಭವಿಸುತ್ತಿದ್ದು, ಶೀಘ್ರದಲ್ಲೇ ಅದು ಆಗಲಿ ಎಂದು ನಾನು ಹಾರೈಸುವುದಾಗಿ ಹೇಳಿದ್ದಾರೆ.

Leave a Comment