ಪೆನ್ಷನ್ ಪಡೆಯಲು ಬ್ಯಾಂಕ್ ಗೆ ಹೋದ ವೃದ್ಧನಿಗೆ ಕಾದಿತ್ತು ಶಾಕ್: ಬ್ಯಾಂಕ್ ಬ್ಯಾಲೆನ್ಸ್ ನೋಡಿ ದಿಗ್ಭ್ರಮೆಗೊಂಡ ವೃದ್ಧ
ಆತನೊಬ್ಬ ವಯೋವೃದ್ಧ ಅಲ್ಲದೇ ಬಡವ ಕೂಡಾ. ಆತನ ಜೀವನ ನಿರ್ವಹಣೆಗೆ ಆಧಾರವಾಗಿರುವುದು ಸರ್ಕಾರ ಆತನಿಗೆ ನೀಡುವ ಪಿಂಚಣಿ ಅಥವಾ ಪೆನ್ಷನ್ ನಿಂದ. ಇದು ಬಿಟ್ಟು ಆತನಿಗೆ ಬೇರೆ ಯಾವುದೇ ಮೂಲದಿಂದಲೂ ಸಹಾ ಆದಾಯವಾಗಲೀ ಇಲ್ಲ. ಆತನ ಜೀವನಕ್ಕೆ ಇರುವ ಒಂದೇ ಒಂದು ಜೀವನಾಧಾರದ ಮೂಲ ಎಂದರೆ ಅದು ಪಿಂಚಣಿಯಾಗಿದೆ. ಇತ್ತೀಚಿಗೆ ಆತ ಎಂದಿನ ಹಾಗೆ ತನ್ನ ಬ್ಯಾಂಕ್ ಖಾತೆಯಿಂದ ಪಿಂಚಣಿ ಹಣವನ್ನು ಪಡೆದುಕೊಳ್ಳಲು ಬ್ಯಾಂಕ್ ಗೆ ಹೋಗಿದ್ದಾರೆ. ಈ ವೇಳೆ ಅವರಿಗೆ ಒಂದು ದೊಡ್ಡ ಅಚ್ಚರಿ ಕಾದಿತ್ತು.
ಇದು ಅವರಿಗೆ ಕೇವಲ ಅಚ್ಚರಿ ಮಾತ್ರವೇ ಅಲ್ಲ ಒಂದರ್ಥದಲ್ಲಿ ಅದೊಂದು ಶಾ ಕ್ ಕೂಡಾ ಆಗಿತ್ತು ಎನ್ನಬಹುದು. ಹೌದು ವೃದ್ಧ ವ್ಯಕ್ತಿ ಬ್ಯಾಂಕ್ ನಲ್ಲಿ ತಮ್ಮ ಖಾತೆಯಲ್ಲಿ ಎಷ್ಟು ಹಣವಿದೆ ಎನ್ನುವುದನ್ನು ತಿಳಿಯಲು ಪ್ರಯತ್ನಿಸಿದಾಗ, ಅವರ ಖಾತೆಯಲ್ಲಿ ಇದ್ದ ಹಣ ಅ ವ್ಯಕ್ತಿಗೆ ಮಾತ್ರವೇ ಅಲ್ಲದೇ ಬ್ಯಾಂಕ್ ಅಧಿಕಾರಿಗಳಿಗೂ ಕೂಡಾ ಶಾ ಕ್ ನೀಡಿದೆ. ಏಕೆಂದರೆ ವೃದ್ಧನ ಖಾತೆಯಲ್ಲಿ ಬರೋಬ್ಬರಿ 75 ಕೋಟಿ ರೂ. ಗಳಿಗಿಂತ ಅಧಿಕ ಮೊತ್ತದ ಹಣ ಜಮೆಯಾಗಿದ್ದು ಈ ಅಚ್ಚರಿಗೆ ಕಾರಣವಾಗಿದೆ.
ವಿವರಗಳಿಗೆ ಹೋದರೆ ಜಾರ್ಖಂಡ್ ನ ದುಮ್ಕಾ ಜಿಲ್ಲೆ, ಜಾರ್ಮುಂಡಿ ಮಂಡಲದ ಸಾಗರ್ ಗ್ರಾಮದಲ್ಲಿ ತನ ಹೆಂಡತಿ ಮತ್ತು ಮಗನ ಜೊತೆಯಲ್ಲಿ ವಾಸಿಸುತ್ತಿದ್ದಾರೆ ಫೂಲೋರಾಯ್ ಎನ್ನುವ ವ್ಯಕ್ತಿ. ಇವರು ಒಂದು ಚಿಕ್ಕ ಗುಡಿಸಲಿನಲ್ಲಿ ವಾಸಿಸುತ್ತಿದ್ದಾರೆ. ಈ ವೃದ್ಧನಿಗೆ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಬ್ರಾಂಚ್ ನಲ್ಲಿ ತಮ್ಮ ಪಿಂಚಣಿಯ ಖಾತೆಯನ್ನು ಹೊಂದಿದ್ದಾರೆ. ಇತ್ತೀಚಿಗೆ ಯಾವುದೋ ವಿಷಯಕ್ಕೆ ಹಣ ಬೇಕಾಗಿದ್ದರಿಂದ ಅವರು ಹತ್ತಿರದ ಸರ್ವೀಸ್ ಸೆಂಟರ್ ಗೆ ಹೋಗಿದ್ದಾರೆ.
ಅವರು ಅಲ್ಲಿ ಹತ್ತು ಸಾವಿರ ಡ್ರಾ ಮಾಡಿಕೊಂಡಿದ್ದಾರೆ. ಕೆಲಸದಲ್ಲಿ ಕೆಲಸ ಎಂದು ಒಮ್ಮೆ ಅಕೌಂಟ್ ನಲ್ಲಿ ಉಳಿದಿರುವ ಹಣ ಎಷ್ಟು ಎಂದು ತಿಳಿಸುವಂತೆ ಅಧಿಕಾರಿಗಳನ್ನು ಕೇಳಿದ್ದಾರೆ. ಆಗ ಅಧಿಕಾರಿಯು ಅವರ ಖಾತೆಯಲ್ಲಿ 75.28 ಕೋಟಿ ರೂ ಇದೆಯೆಂದು ಹೇಳಿದ್ದು ಕೇಳಿ ವೃದ್ಧ ಅವಕ್ಕಾಗಿದ್ದಾರೆ. ಇನ್ನು ಬ್ಯಾಂಕ್ ಈ ವಿಚಾರವಾಗಿ ಇದೊಂದು ತಾಂತ್ರಿಕ ಸಮಸ್ಯೆ ಇರಬಹುದು, ಆಗಾಗ ಹೀಗೆ ಆಗುತ್ತೆ, ಇದರ ಬಗ್ಗೆ ಸೂಕ್ತ ಗಮನ ನೀಡಲಾಗುತ್ತದೆ ಎನ್ನುವ ಪ್ರತಿಕ್ರಿಯೆ ನೀಡಿದೆ.