ಪೂರ್ತಿಯಾಯ್ತು ಬಿಗ್ ಬಾಸ್ ಎಲಿಮಿನೇಷನ್: ಟಾಪ್ 2 ಸ್ಪರ್ಧಿಗಳ ಬಿಟ್ಟು ಹೊರಗೆ ಬಂದ ಮೂವರು ಸ್ಪರ್ಧಿಗಳು ಇವರೇ

Entertainment Featured-Articles News
80 Views

ಬಿಗ್ ಬಾಸ್ ಸೀಸನ್ ಎಂಟು ಕೊನೆಗೂ ಗ್ರಾಂಡ್ ಫಿನಾಲೆ ಗೆ ಬಂದು ತಲುಪಿದೆ. ಇನ್ನು ಫಿನಾಲೆ ಹಂತದ ಬಿಗ್ ಬಾಸ್ ಚಿತ್ರೀಕರಣ ಸಹಾ ಮುಗಿದಾಗಿದೆ ಎನ್ನಲಾಗಿದೆ. ಬಿಗ್ ಬಾಸ್ ಮನೆಯಲ್ಲಿ ಫಿನಾಲೆ ವಾರವನ್ನು ತಲುಪಿದ್ದ ಟಾಪ್ ಐದು ಜನ ಸದಸ್ಯರಲ್ಲಿ ಮನೆಯಿಂದ ಮೂರು ಜನ ಪ್ರಬಲ ಸ್ಪರ್ಧಿಗಳು ಹೊರ ಬಂದಾಗಿದೆ ಎನ್ನಲಾಗಿದ್ದು, ಈಗ ಕೇವಲ ಇಬ್ಬರು ಸದಸ್ಯರು ಮಾತ್ರವೇ ಉಳಿದಿದ್ದು ಅವರಲ್ಲಿ ಈ ಸೀಸನ್ ನ ವಿನ್ನರ್ ಒಬ್ಬರಾಗಿ ಹೊರ ಹೊಮ್ಮಲಿದ್ದಾರೆ. ಬಿಗ್ ಬಾಸ್ ಫಿನಾಲೆ ವಾರ ಪ್ರವೇಶ ಮಾಡಿದಾಗ ಮನೆಯಲ್ಲಿ ಇದ್ದ ಆರು ಜನರಲ್ಲಿ ದಿವ್ಯ ಸುರೇಶ್ ಅವರು ಹೊರಗೆ ಬರುವ ಮೂಲಕ ಮನೆಯಲ್ಲಿ ಉಳಿದ ಐವರು ಅಂದರೆ ಅರವಿಂದ್, ಮಂಜು, ದಿವ್ಯ ಉರುಡಗ, ಪ್ರಶಾಂತ್ ಸಂಬರ್ಗಿ ಮತ್ತು ವೈಷ್ಣವಿ ಮನೆಯ ಟಾಪ್ ಐದು ಜನ ಸದಸ್ಯರಾಗಿ ಹೊರ ಹೊಮ್ಮಿದ್ದರು. ಆದರೆ ಈಗ ಈ ಐವರಲ್ಲಿ ಮೂರು ಜನರು ತಮ್ಮ ಜರ್ನಿಯನ್ನು ಮುಗಿಸಿಕೊಂಡು ಮನೆಯಿಂದ ಹೊರಗೆ ಬಂದಿದ್ದಾರೆ ಎನ್ನಲಾಗಿದೆ.

ಹೌದು ಬಿಗ್ ಬಾಸ್ ಮನೆಯಿಂದ ಹೊರಗೆ ಬಂದ ಆ ಮೂವರು ಸ್ಪರ್ಧಿಗಳು ದಿವ್ಯ ಉರುಡಗ, ಪ್ರಶಾಂತ್ ಸಂಬರ್ಗಿ ಮತ್ತು ವೈಷ್ಣವಿ ಗೌಡ ಆಗಿದ್ದಾರೆ. ಈ ಮೂಲಕ ವೈಷ್ಣವಿ ಅವರು ಈ ಬಾರಿ ಬಿಗ್ ಬಾಸ್ ಸೀಸನ್ ಎಂಟರಲ್ಲಿ ಟಾಪ್ ಮೂರನೇ ಸ್ಪರ್ಧಿ ಎನಿಸಿಕೊಂಡಿದ್ದಾರೆ. ಇನ್ನು ಐದನೇ ಸ್ಥಾನ ಪ್ರಶಾಂತ್ ಹಾಗೂ ನಾಲ್ಕನೇ ಸ್ಥಾನವನ್ನು ದಿವ್ಯ ಉರುಡಗ ತಮ್ಮದಾಗಿಸಿಕೊಂಡು ಮನೆಯಿಂದ ಹೊರಗೆ ಬಂದಿದ್ದಾರೆ. ಇನ್ನು ಉಳಿದ ಇಬ್ಬರು ಸದಸ್ಯರು ಅಂದರೆ ಅರವಿಂದ್ ಕೆ.ಪಿ. ಮತ್ತು ಮಂಜು ಪಾವಗಡ ಸೀಸನ್ ಎಂಟರ ಟಾಪ್ ಟು ಫೈನಲಿಸ್ಟ್ ಗಳಾಗಿ ಹೊರಹೊಮ್ಮಿದ್ದಾರೆ. ಬಹುತೇಕ ಜನರು ಯಾರು ಟಾಪ್ ಟು ಆಗುವರು ಎಂದು ನಿರೀಕ್ಷಿಸಿದ್ದರೋ ಆ ಇಬ್ಬರೂ ಟಾಪ್ ಟು ಆಗಿದ್ದಾರೆ.

ಫಿನಾಲೇ ಸಂಚಿಕೆಯ ಕುರಿತಾಗಿ ಈಗಾಗಲೇ ಸಾಕಷ್ಟು ಕುತೂಹಲ ಮೂಡಿದೆ. ಜನರು ಯಾರು ಗೆಲ್ಲುವರು ಈ ಸೀಸನ್ ಎನ್ನುವುದನ್ನು ತಿಳಿಯಲು ಬಹಳ‌ ಕಾತರರಾಗಿರುವಾಗಲೇ, ಫಿನಾಲೆ ಎಪಿಸೋಡ್ ಗಳ ಚಿತ್ರೀಕರಣ ಮುಂದುವರೆದು ಮೂರು ಜನ ಸದಸ್ಯರು ಮನೆಯಿಂದ ಹೊರ ಬಂದಾಗಿದೆ. ಇನ್ನು ಈಗ ಟಾಪ್ ಟು ಆಗಿರುವ ಅರವಿಂದ್ ಮತ್ತು ಮಂಜು ಪಾವಗಡ ಈ ಇಬ್ಬರಲ್ಲಿ ಗೆಲ್ಲುವವರು ಯಾರು ಎನ್ನುವುದು ಸಹಾ ಬಹಳ ಬೇಗ ತಿಳಿಯಲಿದೆ. ಒಂದು ವೇಳೆ ಈ ಬಾರಿ ಅರವಿಂದ್ ಗೆದ್ದರೆ ಬಿಗ್ ಬಾಸ್ ಮನೆಯಲ್ಲಿ ಇದು ಕೂಡಾ ಒಂದು ವಿಶೇಷ ವೇ ಎನಿಸುವುದು ಕೂಡಾ ವಾಸ್ತವ.

ಹೌದು ಈ ಬಾರಿ ಅರವಿಂದ್ ಕೆ.ಪಿ. ಅಥವಾ ಮಂಜು ಪಾವಗಡ ಈ ಇಬ್ಬರಲ್ಲಿ ಒಬ್ಬರು ಬಿಗ್ ಬಾಸ್ ಟ್ರೋಫಿ ಗೆಲ್ಲುವರು ಎನ್ನುವುದು ಅನೇಕ ಪ್ರೇಕ್ಷಕರ ಅಭಿಪ್ರಾಯ ಆಗಿತ್ತು. ಒಂದು ವೇಳೆ ಅರವಿಂದ್ ಅವರು ಗೆದ್ದರೆ ಈ ಬಾರಿ ಬಿಗ್ ಬಾಸ್ ನ ಈ ಎಂಟು ಸೀಸನ್ ಗಳಲ್ಲಿ ಮೊದಲ ಬಾರಿಗೆ ಕಲಾವಿದರನ್ನು ಹೊರತು ಪಡಿಸಿ, ಕ್ರೀಡಾ ಕ್ಷೇತ್ರದ ವ್ಯಕ್ತಿಯೊಬ್ಬರು ಬಿಗ್ ಬಾಸ್ ಟ್ರೋಫಿ ಗೆದ್ದಂತೆ ಆಗುವುದು. ಈ ಮೂಲಕ ವಿಶೇಷವಾಗಿ ಆರಂಭವಾದ ಬಿಗ್ ಬಾಸ್ ನ ಈ ಎಂಟನೇ ಸೀಸನ್ ನಲ್ಲಿ ಇದು ಕೂಡ ಒಂದು ವಿಶೇಷವೇ ಆಗುವುದು. ಆದರೆ ಮಂಜು ಪಾವಗಡ ಅವರು ಕೂಡಾ ಗೆಲ್ಲುವ ಸಾಧ್ಯತೆಗಳನ್ನು ದಟ್ಟವಾಗಿದ್ದು ಈ ಇಬ್ಬರಲ್ಲಿ ಗೆಲ್ಲುವವರಾರು?? ತಿಳಿಯಲಿದೆ ಶೀಘ್ರದಲ್ಲೇ..

Leave a Reply

Your email address will not be published. Required fields are marked *