ಪೂಜಾ ಹೆಗ್ಡೆ ಚಾಲೆಂಜ್ ಗೆ ಕೌಂಟರ್ ಕೊಟ್ಟ ಸಮಂತಾ: ಲೇಟಾದ್ರೆ ಹೀಗೆ ಎಂದ ಸಮಂತಾ!!

Entertainment Featured-Articles News Viral Video

ಪ್ರಸ್ತುತ ದಿನಗಳಲ್ಲಿ ನಟಿ ಸಮಂತಾ ಫುಲ್ ಜೋಶ್ ನಲ್ಲಿ ಇದ್ದಾರೆ. ತನ್ನ ಲೇಟೆಸ್ಟ್ ಫೋಟೋಗಳು, ಸ್ಪೂರ್ತಿದಾಯಕ ಕೊಟೇಶನ್ ಗಳು, ಹೊಸ ಸಿನಿಮಾಗಳ ಕುರಿತಾದ ಅಪ್ಡೇಟ್ ಗಳನ್ನು ಸೋಶಿಯಲ್ ಮೀಡಿಯಾಗಳ ಮೂಲಕ ಹಂಚಿಕೊಳ್ಳುತ್ತಾ ಅಭಿಮಾನಿಗಳಿಗೆ ಭರ್ಜರಿ ಖುಷಿಯನ್ನು ನೀಡುತ್ತಾ, ಸುದ್ದಿಯಲ್ಲಿ ಇರುತ್ತಾರೆ. ಇನ್ನು ಇತ್ತೀಚಿಗಷ್ಟೇ ನಟಿ ಸಮಂತಾ ತಾನು ವರ್ಕೌಟ್ ಮಾಡುತ್ತಿರುವ ವೀಡಿಯೋ ಶೇರ್ ಮಾಡಿಕೊಂಡು ನೆಟ್ಟಿಗರಿಗೆ ಒಂದು ಚಾಲೆಂಜ್ ನೀಡಿದ್ದರು. ಸಮಂತಾ ಹಾಕಿದ ಚಾಲೆಂಜ್ ಗೆ ಅನೂಹ್ಯ ಎನಿಸುವ ಮಟ್ಟಕ್ಕೆ ಪ್ರತಿಕ್ರಿಯೆಗಳು ಹರಿದು ಬರುತ್ತಿವೆ.

ಈಗ ಸಮಂತಾ ಹಾದಿಯಲ್ಲೇ ನಡೆದ ಟಾಲಿವುಡ್ ನ ಮತ್ತೊಬ್ಬ ಸ್ಟಾರ್ ನಟಿ ಪೂಜಾ ಹೆಗ್ಡೆ ಸಹಾ ತಮ್ಮ ಅಭಿಮಾನಿಗಳಿಗೆ ಒಂದು ಸವಾಲನ್ನು ನೀಡಿದ್ದಾರೆ. ತಮಿಳು ಸ್ಟಾರ್ ನಟ ವಿಜಯ್ ಹಾಗೂ ಪೂಜಾ ಹೆಗ್ಡೆ ಜೋಡಿಯಾಗಿ ನಟಿಸುತ್ತಿರುವ ಲೇಟೆಸ್ಟ್ ಸಿನಿಮಾ ‘ಬೀಸ್ಟ್.’ ಈ ಚಿತ್ರತಂಡದ ಕಡೆಯಿಂದ ವ್ಯಾಲಂಟೈನ್ಸ್ ಡೇ ವಿಶೇಷ ಎನ್ನುವಂತೆ ಅರೇಬಿಕ್ ಕುತು ಎನ್ನುವ ಹಾಡನ್ನು ಬಿಡುಗಡೆ ಮಾಡಲಾಗಿತ್ತು. ಹಾಡು ಬಿಡುಗಡೆಯಾದ ಕೆಲವೇ ಗಂಟೆಗಳನ್ನು ಅದ್ಭುತ ಪ್ರತಿಕ್ರಿಯೆಗಳನ್ನು ಪಡೆದುಕೊಂಡು ಒಂದು ಹೊಸ ದಾಖಲೆಯನ್ನು ಬರೆಯಿತು.

ನಾಯಕ ನಟ ಶಿವಕಾರ್ತಿಕೇಯ ಸಾಹಿತ್ಯ, ಸಂಗೀತ ನಿರ್ದೇಶಕ ಅನಿರುದ್ಧ್ ಸಂಗೀತ ನೀಡಿದ್ದ ಈ ಹಾಡು ಅಭಿಮಾನಿಗಳನ್ನು ಹುಚ್ಚೆದ್ದು ಕುಣಿಸಿದ್ದು, ಬೀಸ್ಟ್ ಸಿನಿಮಾಕ್ಕೆ ಇದು ಈಗ ಹೈಲೈಟ್ ಆಗಿದೆ. ಇನ್ನು ಇಷ್ಟೆಲ್ಲಾ ಸದ್ದು ಮಾಡುತ್ತಿರುವ ಈ ಹಾಡಿಗೆ ನಟಿ ಪೂಜಾ ಹೆಗ್ಡೆ ಇತ್ತೀಚಿಗೆ ಮಾಲ್ಡೀವ್ಸ್ ನಲ್ಲಿ ಭರ್ಜರಿ ಸ್ಟೆಪ್ಪುಗಳನ್ನು ಹಾಕಿ ವೀಡಿಯೋ ಶೇರ್ ಮಾಡಿಕೊಂಡಿರುವುದು ಮಾತ್ರವೇ ಅಲ್ಲದೇ ತಮ್ಮ ಅಭಿಮಾನಿಗಳಿಗೂ ಸಹಾ ತನ್ನಂತೆ ಡಾನ್ಸ್ ಮಾಡಿ ತೋರಿಸಿ ಎನ್ನುವ ಚಾಲೆಂಜ್ ಒಂದನ್ನು ನೀಡಿದ್ದಾರೆ.

ಏರ್ ಪೋರ್ಟ್ ನಲ್ಲಿ ಅರೇಬಿಕ್ ಕುತು ಹಾಡಿಗೆ ನಟಿ ಸಮಂತಾ ಹೆಜ್ಜೆ ಹಾಕಿರುವ ವೀಡಿಯೋವನ್ನು ಶೇರ್ ಮಾಡಿಕೊಂಡಿದ್ದು, ಅರ್ಧ ರಾತ್ರಿಯ ವೇಳೆ ವಿಳಂಬವಾದ ವಿಮಾನ, ಈ ರಾತ್ರಿಗೆ ರಿಥಮ್ ಅರೇಬಿಕ್ ಕುತು ಎಂದು ಬರೆದುಕೊಂಡು ಕ್ಯಾಪ್ಷನ್ ನೀಡಿದ್ದಾರೆ. ಪೂಜಾ ಹೆಗ್ಡೆ ನೀಡಿದ ಚಾಲೆಂಜ್ ಗೆ ಸಮಂತಾ ಈ ರೀತಿ ಕೌಂಟರ್ ಕೊಟ್ಟಿದ್ದು, ಸಮಂತಾ ಶೇರ್ ಮಾಡಿದ ವೀಡಿಯೋ ಈಗ ಭರ್ಜರಿ ವೈರಲ್ ಆಗಿದೆ, ಅಲ್ಲದೇ ನೆಟ್ಟಿಗರು ಹಾಗೂ ಅಭಿಮಾನಿಗಳು ಸಮಂತಾ ವೀಡಿಯೋಗೆ ಮೆಚ್ಚುಗೆಯ ಮಳೆ ಹರಿಸಿದ್ದಾರೆ.

Leave a Reply

Your email address will not be published.