ಪುಷ್ಪ 2: ಅಲ್ಲು ಅರ್ಜುನ್ ಮತ್ತು ಸುಕುಮಾರ್ ಕೇಳಿದ ಸಂಭಾವನೆಗೆ ನಿರ್ಮಾಪಕರೇ ಶಾಕ್!!

Entertainment Featured-Articles Movies News

ಪುಷ್ಪ ಟಾಲಿವುಡ್ ನಟ ಅಲ್ಲು ಅರ್ಜುನ್ ಅಭಿನಯದ ಮೊದಲ ಪ್ಯಾನ್ ಇಂಡಿಯಾ ಸಿನಿಮಾ. ಸುಕುಮಾರ್ ನಿರ್ದೇಶನದ ಈ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಪುಷ್ಪ ಸಿನಿಮಾ ಪಕ್ಕಾ ಮಾಸ್ ಸಿನಿಮಾ ಆಗಿ ಪ್ರೇಕ್ಷಕರ ಮುಂದೆ ಬಂದು, ಎಲ್ಲರ ಮೆಚ್ಚುಗೆ ಗಳಿಸಿತ್ತು. ತ್ರಿಬಲ್ ಆರ್ ಮತ್ತು ಕೆಜಿಎಫ್-2 ಸಿನಿಮಾಗಳಿಗೂ ಮೊದಲು ಬಂದ ಈ ಸಿನಿಮಾ ಕಲೆಕ್ಷನ್ ವಿಚಾರದಲ್ಲಿ ದಾಖಲೆಯನ್ನು ಸಹಾ ಬರೆದಿತ್ತು. ನಟಿ ರಶ್ಮಿಕಾ ಮತ್ತು ಅಲ್ಲು ಅರ್ಜುನ್ ಇಬ್ಬರಿಗೂ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಜನಪ್ರಿಯತೆ ಪಡೆದರೆ, ರಶ್ಮಿಕಾ ಪುಷ್ಪ ಸಿನಿಮಾದ ನಂತರ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ದಕ್ಷಿಣ ಸಿನಿಮಾ ರಂಗದಿಂದ ಬಾಲಿವುಡ್ ವರೆಗೆ ರಶ್ಮಿಕಾ ಬೇಡಿಕೆ ಹೆಚ್ಚಾಗಿದೆ.

ಪುಷ್ಪ ಗಳಿಸಿದ ವಿಜಯದ ನಂತರ ಸಹಜವಾಗಿಯೇ ಈಗ ಎಲ್ಲರ ಗಮನ ಪುಷ್ಪ 2 ಸಿನಿಮಾದ ಕಡೆಗೆ ಹೊರಳಿದೆ. ಆಗಸ್ಟ್ ಕೊನೆಯ ವಾರದಿಂದ ಸಿನಿಮಾ ಚಿತ್ರೀಕರಣ ಸಹಾ ಆರಂಭವಾಗಲಿದೆ ಎನ್ನುವ ಸುದ್ದಿಗಳು ಹರಡಿದೆ. ಅಲ್ಲದೇ ನಿರ್ದೇಶಕ ಸುಕುಮಾರ್ ಅವರ ಮೇಲೆ ಸಹಾ ಅಭಿಮಾನಿಗಳ ಒತ್ತಡ ಹೆಚ್ಚಿದ್ದು ಪುಷ್ಪ ಸಿನಿಮಾಕ್ಕಿಂತ ಪುಷ್ಪ 2 ಸಿನಿಮಾವನ್ನು ಇನ್ನೂ ಹೆಚ್ಚು ಅದ್ದೂರಿಯಾಗಿ ನಿರ್ಮಾಣ ಮಾಡುವ ಕಡೆಗೆ ಗಮನ ನೀಡಿದ್ದು, ಕಥೆಯಲ್ಲಿ ಸಹಾ ಕೆಲವೊಂದು ಬದಲಾವಣೆಗಳನ್ನು ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಪುಷ್ಪ 2 ಸಿನಿಮಾ ಈಗಾಗಲೇ ಸಾಕಷ್ಟು ಕ್ರೇಜ್ ಸೃಷ್ಟಿ ಮಾಡಿದ್ದು, ಬಹಳಷ್ಟು ನಿರೀಕ್ಷೆಗಳನ್ನು ಹುಟ್ಟು ಹಾಕಿದೆ.‌

ಈಗ ಇವೆಲ್ಲವುಗಳ ನಡುವೆ ಹೊಸದೊಂದು ಸುದ್ದಿ ಟಾಲಿವುಡ್ ಅಂಗಳದಲ್ಲಿ ಹರಿದಾಡಿದೆ. ಪುಷ್ಪ ಸಿನಿಮಾ ನಂತರ ನಟ ಅಲ್ಲು ಅರ್ಜುನ್ ಮತ್ತು ನಿರ್ದೇಶಕ ಸುಕುಮಾರ್ ಇಬ್ಬರ ಬೇಡಿಕೆ ಸಹಾ ಹೆಚ್ಚಿದೆ. ಇನ್ನು ಈಗ ಪುಷ್ಪ 2 ಸಿನಿಮಾಕ್ಕಾಗಿ ನಾಯಕ ನಟ ಮತ್ತು ನಿರ್ದೇಶಕ ಇಬ್ಬರೂ ಸಹಾ ಬಾರಿ ಮೊತ್ತದ ಸಂಭಾವನೆಯ ಬೇಡಿಕೆಯನ್ನು ಇಟ್ಟಿದ್ದಾರೆ ಎನ್ನಲಾಗಿದ್ದು, ಇವರ ಸಂಭಾವನೆಯ ವಿಚಾರ ಈಗ ಸಖತ್ ಸುದ್ದಿಯಾಗಿದ್ದು, ಅಲ್ಲು ಅರ್ಜುನ್ ಸಹಾ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರ ಸಾಲಿಗೆ ಸೇರ್ಪಡೆಯಾಗಲು ಸಜ್ಜಾಗಿದ್ದಾರೆ.

ಹೌದು, ಪುಷ್ಪ ಸಿನಿಮಾಕ್ಕಾಗಿ 18 ಕೋಟಿ ಸಂಭಾವನೆ ಪಡೆದಿದ್ದ ನಿರ್ದೇಶಕ ಸುಕುಮಾರ್ ಈಗ ಪುಷ್ಪ 2 ಸಿನಿಮಾಕ್ಕೆ ಬರೋಬ್ಬರಿ 40 ಕೋಟಿ ರೂ.ಗಳ ಸಂಭಾವನೆಯ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ. ಇದೇ ವೇಳೆ ಸಿನಿಮಾದ ನಾಯಕ ನಟ, ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಅವರು ಬರೋಬ್ಬರಿ 100 ಕೋಟಿಗಳ ಸಂಭಾವನೆಯನ್ನು ಈ ಸಿನಿಮಾಕ್ಕಾಗಿ ಪಡೆಯುತ್ತಿದ್ದಾರೆ ಎನ್ನುವ ಟಾಕ್ ಹರಿದಾಡಿದ್ದು, ಈ ಮೂಲಕ ನಾಯಕ ನಟ ಮತ್ತು ನಿರ್ದೆಶಕ ಇಬ್ಬರ ಸಂಭಾವನೆಯ ವಿಚಾರವು ಎಲ್ಲರ ಗಮನವನ್ನು ಸೆಳೆದು, ಅಚ್ಚರಿಯನ್ನು ಸಹಾ ಮೂಡಿಸಿದೆ.

Leave a Reply

Your email address will not be published.