ಪುಷ್ಪ ಹಾಡುಗಳಿಗೆ ಸೆಲೆಬ್ರಿಟಿಗಳು ಪೈಪೋಟಿ ಬಿದ್ದು ಡಾನ್ಸ್ ಮಾಡ್ತಿರೋದ್ಯಾಕೆ? ಅಸಲಿ ಕಾರಣ ಇದೇನಾ?

0
138

ದಕ್ಷಿಣ ಸಿನಿರಂಗದಲ್ಲಿ ಹಾಗೂ ಬಾಲಿವುಡ್ ನಲ್ಲೂ ಸಹಾ ಸದ್ಯಕ್ಕೆ ಸದ್ದು ಮಾಡುತ್ತಿರುವ ಸಿನಿಮಾ ಎಂದರೆ ಅದು ಟಾಲಿವುಡ್ ನ ಐಕಾನ್ ಸ್ಟಾರ್ ಖ್ಯಾತಿಯ ಅಲ್ಲು ಅರ್ಜುನ್ ನಾಯಕನಾಗಿರುವ, ರಶ್ಮಿಕಾ ಮಂದಣ್ಣ ನಾಯಕಿಯಾಗಿ, ಕ್ರಿಯೇಟಿವ್ ನಿರ್ದೇಶಕ ಸುಕುಮಾರ್ ಅವರ ನಿರ್ದೇಶನದಲ್ಲಿ ಮೂಡಿ ಬಂದಿರುವ ಸಿನಿಮಾ ಪುಷ್ಪ. ಬಾಲಿವುಡ್ ಸಿನಿಮಾಗಳಿಗೂ ಸಹಾ ಭರ್ಜರಿ ಟಕ್ಕರ್ ನೀಡಿ, ಅವುಗಳನ್ನು ಸಹಾ ಹಿಂದೆ ಹಾಕುವ ಮೂಲಕ ಪುಷ್ಪ ಬಾಲಿವುಡ್ ಮಂದಿಯ ಕಣ್ಣು ಕುಕ್ಕಿದ್ದು ಸಹಾ ವಾಸ್ತವವಾದ ವಿಷಯವಾಗಿದೆ.

ಪುಷ್ಪ ಸಿನಿಮಾ ಯಶಸ್ಸು ಒಂದು ಕಡೆಯಾದರೆ ಇನ್ನೊಂದು ಕಡೆ ಪುಷ್ಪ ಸಿನಿಮಾದ ಹಾಡುಗಳ ಯಶಸ್ಸು ಇನ್ನೊಂದು ಕಡೆ. ಪುಷ್ಪ ಸಿನಿಮಾದ ಹಾಡುಗಳಿಗೆ ಸಾಮಾನ್ಯರಿಂದ ಹಿಡಿದು ಸೆಲೆಬ್ರಿಟಿಗಳ ವರೆಗೆ ಹಾಗೂ ಕ್ರೀಡಾಪಟುಗಳು ಕೂಡಾ ಹೆಜ್ಜೆ ಹಾಕಿ ಸೋಶಿಯಲ್ ಮೀಡಿಯಾಗಳಲ್ಲಿ ಶೇರ್ ಮಾಡಿಕೊಂಡು ಪುಷ್ಪ ಸಿನಿಮಾದ ಜನಪ್ರಿಯತೆ ಯಾವ ಮಟ್ಟಕ್ಕೆ ಇದೆ ಎನ್ನುವುದನ್ನು ಸಾಬೀತು ಮಾಡುತ್ತಿತ್ತು. ಸೆಲೆಬ್ರಿಟಿಗಳು ಹೀಗೆ ಹೆಜ್ಜೆ ಹಾಕಿದ ವೀಡಿಯೋಗಳು ಭರ್ಜರಿ ವೈರಲ್ ಆಗುತ್ತಿದೆ.

ಹೀಗೆ ಸೆಲೆಬ್ರಿಟಿಗಳು ಶೇರ್ ಮಾಡಿದ ವೀಡಿಯೋಗಳನ್ನು ನೋಡಿ ಪುಷ್ಪ ಸಿನಿಮಾದ ಬಗ್ಗೆ ಗೊತ್ತಿಲ್ಲದ ಮಂದಿ ಕೂಡಾ ಈ ಸೆಲೆಬ್ರಿಟಿಗಳ ವೀಡಿಯೋಗಳನ್ನು ನೋಡಿ ಸಿನಿಮಾ ಕಡೆ ಗಮನ ನೀಡುತ್ತಿದ್ದಾರೆ. ಆದ್ರೆ ಇದೇ ವೇಳೆ ಎಲ್ಲರಲ್ಲೂ ಒಂದು ಅನುಮಾನ ಸಹಜವಾಗಿಯೇ ಮೂಡಿದೆ. ಪುಷ್ಪ ಸಿನಿಮಾದ ಹಾಡುಗಳಿಗೆ ಹೆಜ್ಜೆ ಹಾಕಿ ಹೀಗೆ ಸ್ಪರ್ಧೆಗೆ ಬಿದ್ದವರಂತೆ ಸೆಲೆಬ್ರಿಟಿಗಳು ವೀಡಿಯೋ ಗಳನ್ನು ಶೇರ್ ಆದ್ರೂ ಯಾಕೆ ಮಾಡ್ತಾ ಇದ್ದಾರೆ ಅಂತ ನೆಟ್ಟಿಗರ ಮನಸ್ಸಿನಲ್ಲಿ ಒಂದು ಅನುಮಾನ ಸಹಜವಾಗಿಯೇ ಕಾಡಿದೆ.

ಇಂತಹ ಪ್ರಶ್ನೆಗೆ ಉತ್ತರ ನೀಡುವಂತೆ ಸುದ್ದಿಯೊಂದು ಟಾಲಿವುಡ್ ಅಂಗಳದಲ್ಲಿ ಹರಿದಾಡಿದೆ. ಹೌದು ಸೆಲೆಬ್ರಿಟಿಗಳು ಹೀಗೆ ಪುಷ್ಪ ಸಿನಿಮಾದ ಹಾಡುಗಳಿಗೆ ಹೆಜ್ಜೆ ಹಾರುತ್ತಿರುವುದರ ಹಿಂದೆ ಒಂದು ಆಸಕ್ತಿಕರ ಕಾರಣವೇ ಇದೆ ಎನ್ನಲಾಗುತ್ತಿದೆ. ವಾಸ್ತವದಲ್ಲಿ ಇದು ಪುಷ್ಪ ಸಿನಿಮಾದ ಪ್ರಚಾರಕ್ಕೆ ಬಳಸುತ್ತಿರುವ ಒಂದು ತಂತ್ರ ಎನ್ನುವ ಸುದ್ದಿಯೊಂದು ಹರಿದಾಡಿ ಎಲ್ಲರ ಗಮನವನ್ನು ಸೆಳೆದಿದೆ. ಸೆಲೆಬ್ರಿಟಿಗಳಿಗೆ ಪುಷ್ಪ ಸಿನಿಮಾದ ಹಾಡುಗಳಿಗೆ ಹೆಜ್ಜೆ ಹಾಕಿ, ವೀಡಿಯೋ ಶೇರ್ ಮಾಡಿದರೆ ಅವುಗಳು ಪಡೆಯುವ ಪ್ರಚಾರದ ಆಧಾರದ ಮೇಲೆ ಸಂಭಾವನೆ ನೀಡಲಾಗುತ್ತದೆ ಎನ್ನಲಾಗಿದೆ.

ಸೆಲೆಬ್ರಿಟಿಗಳು ಹೀಗೆ ಸಿನಿಮಾ ಹಾಡಿಗೆ ಹೆಜ್ಜೆ ಹಾಕಿದರೆ ಸಿನಿಮಾ ಬಗ್ಗೆ ಆಸಕ್ತಿ ಹಾಗೂ ಕುತೂಹಲ ಎನ್ನುವುದು ಬಹಳಷ್ಟು ಜನರನ್ನು ತಲುಪುವುದು ಸಾಧ್ಯವಾಗುತ್ತದೆ ಎನ್ನುವುದು ಪುಷ್ಪ ಸಿನಿಮಾ ನಾಯಕನಾಗಿರುವ ಅಲ್ಲು ಅರ್ಜುನ್ ಅವರ ಆಲೋಚನೆಯಾಗಿದೆ, ಆದ್ದರಿಂದಲೇ ಇಂತಹುದೊಂದು ತಂತ್ರವನ್ನು ಬಳಸಲಾಗಿದ್ದು, ಆದ್ದರಿಂದಲೇ ಅಲ್ಲು ಅರ್ಜುನ್ ಮಾರ್ಕೆಟಿಂಗ್ ಕಿಂಗ್ ಎಂದು ಟಾಲಿವುಡ್ ನ ಒಂದು ಜನಪ್ರಿಯ ಸಿನಿಮಾ ಪೇಜ್ ಮಾಹಿತಿಯನ್ನು ಶೇರ್ ಮಾಡಿದೆ.

LEAVE A REPLY

Please enter your comment!
Please enter your name here