ಪುಷ್ಪ ಸಿನಿಮಾ ಹಾಡಿನಿಂದ ಸಮಂತಾ ವಿಶ್ವದಲ್ಲೇ ನಂ.1 ಆಗಿದ್ದಾದ್ರು ಹೇಗೆ?? ಖುಷಿ ಹಂಚಿಕೊಂಡ ಸಮಂತಾ..

Written by Soma Shekar

Published on:

---Join Our Channel---

ಇತ್ತೀಚಿಗೆ ದಿನಗಳು ಕಳೆದ ಹಾಗೆ ಜನಪ್ರಿಯ ನಟಿ ಸಮಂತಾ ಚಾರ್ಮ್ ಮತ್ತು ಫೇಮ್ ದುಪ್ಪಟ್ಟಾಗುತ್ತಿದೆ. ಈ ನಟಿಯು ಸಾಲು ಸಾಲು ಸಿನಿಮಾಗಳಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಒಂದರ್ಥದಲ್ಲಿ ಸಮಂತ ಮುಟ್ಟಿದ್ದೆಲ್ಲ ಚಿನ್ನ ಎನ್ನುವಂತೆ ಜನಪ್ರಿಯತೆಯನ್ನು ಪಡೆದುಕೊಂಡು ಮುಂದೆ ಮುಂದೆ ಹೆಜ್ಜೆ ಇಡುತ್ತಿದ್ದಾರೆ. ಸಮಂತಾ ವಿಚಾರವಾಗಿ ಸಾಕಷ್ಟು ಹೊಸ ಹೊಸ ಸಿನಿಮಾ ಸುದ್ದಿಗಳು ಹೊರಬರುತ್ತಿವೆ. ಇನ್ನು ಸಮಂತಾ ಮೊದಲ ಬಾರಿಗೆ ಪುಷ್ಪ ಸಿನಿಮಾದಲ್ಲಿ ಐಟಂ ಹಾಡಿಗೆ ಹೆಜ್ಜೆ ಹಾಕಿದ್ದು ಎಲ್ಲರಿಗೂ ತಿಳಿದೇ ಇದೆ.

ಈ ಸಿನಿಮಾ ಬಿಡುಗಡೆಗೆ ಮೊದಲು ಹಾಗೂ ಬಿಡುಗಡೆಯ ನಂತರ ಸಮಂತಾ ಸ್ಟೆಪ್ ಹಾಕಿರುವ ಈ ಹಾಡು ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಸಮಂತಾ ಹೆಜ್ಜೆ ಹಾಕಿರುವ ಐಟಂ ಹಾಡು ಇದೀಗ ಯೂಟ್ಯೂಬ್ ನಲ್ಲಿ ಹೊಸ ದಾಖಲೆಯನ್ನು ಬರೆದಿದೆ. ಪುಷ್ಪ ಸಿನಿಮಾದ ಯಶಸ್ಸು ಒಂದು ಕಡೆಯಾದರೆ ಈ ಸಿನಿಮಾದಲ್ಲಿ ಸಮಂತಾ ಐಟಂ‌ ಸಾಂಗ್ ಸಹಾ ಬಹಳ ಮಹತ್ವ ಎನಿಸಿಕೊಂಡಿದೆ. ಸಿನಿಮಾದಲ್ಲಿ ನಾಯಕ ಅಲ್ಲು ಅರ್ಜುನ್ ಹಾಗೂ ಹಾಗೂ ನಾಯಕಿ ರಶ್ಮಿಕಾ ಗಿಂತಲೂ ಹೆಚ್ಚು ಮಿಂಚುತ್ತಿದ್ದಾರೆ ನಟಿ ಸಮಂತಾ.

ಸಮಂತಾ ಡಾನ್ಸ್ ಇರುವ ಊ ಅಂಟಾವಾ ಮಾವ ಎನ್ನುವ ಒಂದು ಹಾಡು ಬಹಳಷ್ಟು ಅಬ್ಬರವನ್ನು ಸೃಷ್ಟಿಸಿದೆ. 2021ರಲ್ಲಿ ಸದ್ದು ಮಾಡುತ್ತಿರುವ ಟಾಪ್ 100 ಹಾಡುಗಳಲ್ಲಿ ಸಮಂತಾ ಹೆಜ್ಜೆ ಹಾಕಿರುವ ಈ ಹಾಡು ನಂಬರ್ ಒನ್ ಸ್ಥಾನವನ್ನು ತನ್ನದಾಗಿಸಿಕೊಂಡಿದೆ. ಹಾಡು ಬಿಡುಗಡೆಯಾಗಿ ಕೆಲವೇ ದಿನಗಳಾದರೂ ಅಭಿಮಾನಿಗಳು ಹಾಗೂ ನೆಟ್ಟಿಗರು ಮುಗಿಬಿದ್ದು ಈ ಹಾಡನ್ನು ನೋಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡಮಟ್ಟದಲ್ಲಿ ವೈರಲ್ ಆಗಿದೆ.

ಕಡಿಮೆ ಸಮಯದಲ್ಲಿ ಹೆಚ್ಚು ವೀಕ್ಷಣೆ ಪಡೆದ ದಾಖಲೆಯನ್ನು ಸೃಷ್ಟಿಸಿದೆ ಈ ಹಾಡು. ಈ‌‌ ಹಾಡಿನ ತೆಲುಗು ವರ್ಷದಲ್ಲಿ ಇದುವರೆಗೂ 9.3 ಕೋಟಿಗಿಂತಲೂ ಅಧಿಕ ವೀಕ್ಷಣೆಗಳನ್ನು ತನ್ನದಾಗಿಸಿಕೊಂಡಿದೆ. ಹೆಚ್ಚು ಜನರ ಆಯ್ಕೆ ಮತ್ತು ಯೂ ಟ್ಯೂಬ್ ಟ್ರೆಂಡ್ ನ ಆಧಾರದಲ್ಲಿ ಹಾಡು ನಂಬರ್ ಒನ್ ಪಟ್ಟವನ್ನು ತನ್ನದಾಗಿಸಿಕೊಂಡಿದೆ. ಈ ಸಂತೋಷದ ವಿಚಾರವನ್ನು ನಟಿ ಸಮಂತಾ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿಕೊಂಡು ಖುಷಿಪಟ್ಟಿದ್ದಾರೆ.

ನಾಗಚೈತನ್ಯ ಜೊತೆಗೆ ವಿಚ್ಛೇದನದ ನಂತರ ಸಮಂತಾ ಹಿಂದೆಂದಿಗಿಂತಲೂ ಹೆಚ್ಚು ಸಿನಿಮಾಗಳಲ್ಲಿ ತೊಡಗಿಕೊಂಡಿದ್ದಾರೆ. ಟಾಲಿವುಡ್ ಮಾತ್ರವೇ ಅಲ್ಲದೇ ಬಾಲಿವುಡ್ ನಲ್ಲಿ ಅವಕಾಶಗಳನ್ನು ಪಡೆದಿರುವ ಸಮಂತಾ, ಇದೀಗ ಹಾಲಿವುಡ್ ಪ್ರವೇಶ ನೀಡುತ್ತಿದ್ದಾರೆ ಎನ್ನಲಾಗಿದೆ. ಬಾಲಿವುಡ್ ನಟ ವರುಣ್ ಧವನ್ ಜೊತೆಗೆ ಹೊಸ ವೆಬ್ ಸಿರೀಸ್ ಆರಂಭವಾಗಲಿದೆ ಎನ್ನುವು ಸುದ್ದಿ ಹೊರ ಬಂದಿದೆ.

Leave a Comment