ಪುಷ್ಪ ಸಿನಿಮಾ ಸೂಪರ್ ಹಿಟ್ ಆದ ಕೂಡಲೇ ವರಸೆ ಬದಲಿಸಿದ ರಶ್ಮಿಕಾ!! ನಟಿಯ ಹೊಸ ಬೇಡಿಕೆ ಹೇಗಿದೆ ನೋಡಿ

Written by Soma Shekar

Published on:

---Join Our Channel---

ಒಂದು ಸಿನಿಮಾ ಹಿಟ್ ಆದರೆ ಸಾಕು ಆ ಸಿನಿಮಾದಲ್ಲಿ ನಟಿಸಿರುವ ಕಲಾವಿದರು ತಮ್ಮ ಸಂಭಾವನೆಯನ್ನು ಏರಿಸಿಕೊಳ್ಳುವುದು ತೀರಾ ಸಾಮಾನ್ಯವಾದ ವಿಷಯವಾಗಿದೆ. ಪ್ರಸ್ತುತ ದಕ್ಷಿಣ ಸಿನಿ ರಂಗದಲ್ಲಿ ನಟಿ ರಶ್ಮಿಕಾ ಮಂದಣ್ಣ ಪಡೆದಿರುವಷ್ಟು ಕ್ರೇಜ್ ಹಾಗೂ ಜನಪ್ರಿಯತೆ ಬೇರೆ ಇನ್ನಾವು ನಟಿಗೂ ಸಹಾ ಇಲ್ಲ ಎನ್ನಬಹುದಾಗಿದೆ. ರಶ್ಮಿಕಾ ನಾಯಕಿಯಾದ ಸಿನಿಮಾಗಳೆಲ್ಲಾ ಸೂಪರ್ ಹಿಟ್ ಆಗುವ ಕಾರಣದಿಂದ ನಿರ್ಮಾಪಕರು, ನಿರ್ದೇಶಕರು ರಶ್ಮಿಕಾರನ್ನು ನಾಯಕಿಯಾಗಿ ತಮ್ಮ ಸಿನಿಮಾಕ್ಕೆ ನಾಯಕಿಯನ್ನಾಗಿ ಮಾಡಲು ಹಾತೊರೆಯುತ್ತಿದ್ದಾರೆ.

ಈಗ ಪುಷ್ಪ ಸಿನಿಮಾ ಕೂಡಾ ಹಿಟ್ ಆಗುವ ಮೂಲಕ ರಶ್ಮಿಕಾ ಖಾತೆಯಲ್ಲಿ ಮತ್ತೊಂದು ಹಿಟ್ ಸಿನಿಮಾದ ಹೆಸರು ಸೇರಿಕೊಂಡಿದೆ.‌ ಸಿನಿಮಾ ಹಿಟ್ ಆದ ಬೆನ್ನಲ್ಲೇ ನಟಿ ರಶ್ಮಿಕಾ ತಮ್ಮ ಸಂಭಾವನೆಯನ್ನು ಹೆಚ್ಚಿಸಿಕೊಂಡಿದ್ದಾರೆ ಎನ್ನುವ ಸುದ್ದಿಯೊಂದು ಟಾಲಿವುಡ್ ಅಂಗಳದಲ್ಲಿ ಹರಿದಾಡಿದೆ. ನಟಿ ರಶ್ಮಿಕಾ ಮಾತ್ರವೇ ಅಲ್ಲ ಈ ಸಿನಿಮಾದ ನಾಯಕ ನಟ ಅಲ್ಲು ಅರ್ಜುನ್ ಅವರು ಸಹಾ ತಮ್ಮ ಸಂಭಾವನೆಯನ್ನು ಏರಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ.‌

ಪುಷ್ಪ ಸಿನಿಮಾದ ಎರಡನೇ ಪಾರ್ಟ್ ಶೀಘ್ರದಲ್ಲೇ ಚಿತ್ರೀಕರಣವನ್ನು ಪ್ರಾರಂಭಿಸುವ ವಿಷಯ ಈಗಾಗಲೇ ಸುದ್ದಿಯಾಗಿದೆ. ಈ ಸಿನಿಮಾ ಕೆಲಸಗಳನ್ನು ಬೇಗ ಆರಂಭಿಸಲು ನಟ ಅಲ್ಲು ಅರ್ಜುನ್ ಕೂಡಾ ಆಸಕ್ತಿಯನ್ನು ತೋರಿದ್ದಾರೆ ಎನ್ನಲಾಗಿದೆ. ಎರಡನೇ ಪಾರ್ಟ್ ನಲ್ಲೂ ಸಹಾ ನಟಿ ರಶ್ಮಿಕಾ ನಾಯಕಿಯಾಗಲಿದ್ದಾರೆ. ಪುಷ್ಪ ಸಿನಿಮಾಕ್ಕೆ ರಶ್ಮಿಕಾ ಎರಡು ಕೋಟಿ ಸಂಭಾವನೆ ಪಡೆದುಕೊಂಡಿದ್ದರು. ಈಗ ಎರಡನೇ ಪಾರ್ಟ್ ಗೆ ರಶ್ಮಿಕಾ ಮೂರು ಕೋಟಿ ಸಂಭಾವನೆ ಬೇಡಿಕೆಯನ್ನು ಇಟ್ಟಿದ್ದಾರೆನ್ನಲಾಗಿದೆ.

ಹೌದು ರಶ್ಮಿಕಾ ಮಂದಣ್ಣ ತಮ್ಮ ಸಂಭಾವನೆಯನ್ನು 59% ರಷ್ಟು ಹೆಚ್ಚಿಸಿಕೊಂಡಿದ್ದಾರೆ. ಸದ್ಯಕ್ಕಂತೂ ರಶ್ಮಿಕಾ ಮುಟ್ಟಿದ್ದೆಲ್ಲಾ ಚಿನ್ನ ಎನ್ನುವ ಹಾಗೆ ರಶ್ಕಿಕಾ ಸಿನಿಮಾ, ಜಾಹೀರಾತು ಎಂದು ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ.‌ ಈಗಾಗಲೇ ಬಾಲಿವುಡ್ ನ ಎರಡು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆ ಸಿನಿಮಾಗಳು ಬಿಡುಗಡೆ ಆಗಬೇಕಿದೆ. ಅವು ಹಿಟ್ ಆದರೆ ಮುಂದೆ ಬಾಲಿವುಡ್ ನಲ್ಲಿ ಕೂಡಾ ನಟಿ ಬ್ಯುಸಿಯಾದರೆ ಅಚ್ಚರಿಯೇನಿಲ್ಲ.

Leave a Comment