ಪುಷ್ಪ ಸಿನಿಮಾದ ಆ ಒಂದು ದೃಶ್ಯಕ್ಕೆ ಕತ್ತರಿ ಬೀಳಲು ಕಾರಣವಾದ್ರ ಅಲ್ಲು ಅರ್ಜುನ್ ಪತ್ನಿ?? ಆ ದೃಶ್ಯ ಯಾವುದು ಗೊತ್ತಾ??

Written by Soma Shekar

Published on:

---Join Our Channel---

ಟಾಲಿವುಡ್ ನ ಸಿನಿಮಾ ಪುಷ್ಪ ಪ್ಯಾನ್ ಇಂಡಿಯಾ ಸಿನಿಮಾ ಆಗಿ ಬಿಡುಗಡೆ ಆಗಿದೆ. ಸಿನಿಮಾ ಬಿಡುಗಡೆ ವೇಳೆ ಕರ್ನಾಟಕದಲ್ಲಿ ಸಿನಿಮಾವನ್ನು ಬಹಿಷ್ಕರಿಸಿ ಎನ್ನುವ ಹ್ಯಾಷ್ ಟ್ಯಾಗ್ ಟ್ರೆಂಡ್ ಆಯಿತು, ಸಿನಿಮಾದಲ್ಲಿದ್ದ ಸಮಂತಾ ಐಟಂ ಹಾಡಿನ ಸಾಹಿತ್ಯದ ವಿಚಾರವಾಗಿ ಪುರುಷರ ಸಂಘಟನೆ ಒಂದು ಕೋರ್ಟ್ ಮೆಟ್ಟಿಲನ್ನು ಏರಿತು. ಎಲ್ಲವುಗಳ ನಡುವೆಯೇ ಬಿಡುಗಡೆ ಆದ ಸಿನಿಮಾಕ್ಕೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದೆ, ಆದರೆ ಅದರ ನಡುವೆಯೂ ಕಲೆಕ್ಷನ್ ವಿಚಾರದಲ್ಲಿ ಮಾತ್ರ ಸಿನಿಮಾ ಹಿಂದೆ ಬಿದ್ದಿಲ್ಲ ಎನ್ನಲಾಗಿದೆ.

ಸಿನಿಮಾ ಬಿಡುಗಡೆ ನಂತರ ಈ ಸಿನಿಮಾದ ಬಗ್ಗೆ ಕೆಲವು ಹೊಸ ಹೊಸ ವಿಷಯಗಳು ಕೂಡಾ ಹೊರ ಬರಲು ಪ್ರಾರಂಭಿಸಿತು. ಅದರಲ್ಲಿ ಬಹಳ ಮುಖ್ಯವಾಗಿದ್ದು ಸಿನಿಮಾದಲ್ಲಿನ ಕೆಲವು ಸನ್ನಿವೇಶಗಳಿಗೆ ಕತ್ತರಿ ಯನ್ನು ಹಾಕಿದ್ದು ಒಂದಾಗಿದೆ. ಹೌದು ಪುಷ್ಪ ಸಿನಿಮಾದ ಒಟ್ಟು ಅವಧಿ ಮೂರು ಗಂಟೆಗಳು ಇತ್ತು ಎನ್ನಲಾಗಿದೆ. ಆದರೆ ಸುಮ್ಮನೆ ಎಳೆದಂತೆ ಆಗುತ್ತದೆ ಎನ್ನುವ ಕಾರಣದಿಂದ ಅನಾವಶ್ಯಕ ಎನಿಸಿದ ದೃಶ್ಯಗಳಿಗೆ ಕತ್ತರಿ ಹಾಕಿ ಎರಡೂವರೆ ಗಂಟೆಗಳಿಗೆ ಇಳಿಸಲಾಯಿತು ಎನ್ನಲಾಗಿದೆ.

ಆದರೆ ಇಲ್ಲಿ ಕುತೂಹಲ ಹುಟ್ಟಿಸಿರುವ ವಿಷಯ ಏನೆಂದರೆ ಸಿನಿಮಾದಲ್ಲಿ ಹಾಟ್ ಇಂಟಿಮೇಟ್ ದೃಶ್ಯಗಳು ಇತ್ತಾ?? ಎನ್ನುವ ಪ್ರಶ್ನೆಯೊಂದು ಸದ್ದು ಮಾಡಿದೆ. ಆ ದೃಶ್ಯಗಳಿಗೆ ಕತ್ತರಿ ಬಿದ್ದಿದೆ ಎನ್ನಲಾಗಿದೆ. ಅಲ್ಲದೇ ಸಿನಿಮಾದಲ್ಲಿ ನಾಯಕ ಅಲ್ಲು ಅರ್ಜುನ್ ನಾಯಕಿ ರಶ್ಮಿಕಾ ಎದೆಗೆ ಕೈ ಹಾಕುವ ಒಂದು ದೃಶ್ಯ ಕೂಡಾ ಇತ್ತು ಎನ್ನಲಾಗುತ್ತಿದೆ. ಆದರೆ ಆ ದೃಶ್ಯಕ್ಕೂ ಕೂಡಾ ಕತ್ತರಿ ಬಿದ್ದಿದೆ. ಸಿನಿಮಾದಲ್ಲಿ ಅದರ ಅಗತ್ಯ ಇಲ್ಲ ಎನಿಸಿತ್ತು ಎನ್ನುವ ಕಾರಣ ನೀಡಲಾಗಿದೆಯಂತೆ.

ವಾಸ್ತವವಾಗಿ ಈ ದೃಶ್ಯಕ್ಕೆ ಕತ್ತರಿ ಹಾಕಲು ಮುಖ್ಯ ಕಾರಣ ಬೇರೆಯೇ ಇದೆ ಎನ್ನುವ ಸುದ್ದಿಯೊಂದು ಹರಿದಾಡಿದೆ. ಹೌದು ನಟ ಅಲ್ಲು ಅರ್ಜುನ್ ಪತ್ನಿ ಅವರು ನೀಡಿದ ಸೂಚನೆಯ ಮೇರೆಗೆ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ನಡುವಿನ ಆ ದೃಶ್ಯಕ್ಕೆ ಕತ್ತರಿ ಬಿತ್ತು ಅನ್ನೋ ಮಾತುಗಳು ಕೂಡಾ ಕೇಳಿ ಬಂದಿದೆ. ಒಟ್ನಲ್ಲಿ ಪುಷ್ಪ ಸಿನಿಮಾ ಹಲವು ವಿಷಯಗಳಿಂದ ಸದ್ದು ಮಾಡಿದೆ.

Leave a Comment