ಅಬ್ಬಾ!! ಪುಷ್ಪ ಬಿಡುಗಡೆಗೂ ಮುನ್ನವೇ ಪುಷ್ಪರಾಜ್ ಗೆ ರಶ್ಮಿಕಾ ಮಂದಣ್ಣ ಕೊಟ್ರು ಸೂಪರ್ ಸರ್ಪ್ರೈಸ್ ಗಿಫ್ಟ್

Written by Soma Shekar

Published on:

---Join Our Channel---

ಟಾಲಿವುಡ್ ನ ಸ್ಟೈಲಿಷ್ ಸ್ಟಾರ್ ಅಲ್ಲು ಅರ್ಜುನ್ ಸದ್ಯಕ್ಕೆ ಬಹುನಿರೀಕ್ಷಿತ ಸಿನಿಮಾ ಪುಷ್ಪ ಸಿನಿಮಾದ ಕೆಲಸಗಳಲ್ಲಿ ತುಂಬಾ ಬ್ಯುಸಿಯಾಗಿದ್ದಾರೆ. ಕ್ರಿಯೇಟಿವ್ ಡೈರಕ್ಟರ್ ಸುಕುಮಾರ್ ‌ನಿರ್ದೇಶನದಲ್ಲಿ ತೆರೆಗೆ ಬರಲಿರುವ ಈ ಸಿ‌ನಿಮಾದಲ್ಲಿ ಮೊದಲ ಬಾರಿಗೆ ಬನ್ನಿ ( ಅಲ್ಲು ಅರ್ಜುನ್ ) ಪಕ್ಕದಲ್ಲಿ ನಾಯಕಿಯಾಗಿ ಕನ್ನಡದ ಹುಡುಗಿ, ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ತೆರೆಯನ್ನು ಹಂಚಿಕೊಳ್ಳುತ್ತಿದ್ದು, ರಶ್ಮಿಕಾ ರ ಸಾಮಿ ಸಾಮಿ ಹಾಡು ಈಗಾಗಲೇ ಸಖತ್ ಟ್ರೆಂಡ್ ಅನ್ನು ಹುಟ್ಟು ಹಾಕಿದ್ದು, ಎಲ್ಲೆಲ್ಲೂ ಈ ಹಾಡು ಗುಯ್ ಗುಟ್ಟುತ್ತಿದೆ.

ಅಭಿಮಾನಿಗಳು ಕಾಯುತ್ತಿರುವ ಈ ಸಿನಿಮಾ, ಡಿಸೆಂಬರ್ 17 ರಂದು ಪುಷ್ಪ ದಿ ರೈಜ್ ಎನ್ನುವ ಟೈಟಲ್ ನೊಂದಿಗೆ ತೆರೆಗೆ ಬರಲು ಸಜ್ಜಾಗುತ್ತಿದೆ. ‌ಈ ಹಿನ್ನೆಲೆಯಲ್ಲಿ ಪುಷ್ಪ ಸಿನಿಮಾದ ಪ್ರಮೋಷನ್ ಕಾರ್ಯಗಳು ಬಹಳ ಜೋರಾಗಿ ನಡೆದಿದೆ. ಅಲ್ಲದೇ ಚಿತ್ರ ತಂಡ ಆಗಾಗ ಹೊಸ ಹೊಸ ಅಪ್ಡೇಟ್ ಗಳನ್ನು ನೀಡುವ ಮೂಲಕ ಸಿನಿಮಾದ ಬಗ್ಗೆ ಇನ್ನಷ್ಟು, ಮತ್ತಷ್ಟು ಕ್ರೇಜ್ ಮತ್ತು ಕುತೂಹಲವನ್ನು ಹುಟ್ಟು ಹಾಕುತ್ತಿದೆ.‌

ಸಿನಿಮಾ ಬಿಡುಗಡೆ ಹತ್ತಿರವಾದಂತೆ ರಶ್ಮಿಕಾ ಕಡೆಯಿಂದ ಬನ್ನಿ ಗೆ ವಿಶೇಷ ಉಡುಗೊರೆ ಸಿಕ್ಕಿದೆ. ರಶ್ಮಿಕಾ, ಮೂವಿ ಬೇಗ ರಿಲೀಸ್ ಆಗ್ತಿದೆ ಅಲ್ವಾ ಸರ್, ಸ್ಪೆಷಲ್ ಆಗಿ ಏನಾದರೂ ಕಳುಹಿಸಬೇಕೆನಿಸಿತು. ಅದಕ್ಕೆ ನಿಮಗೆ ಸ್ಪೆಷಲ್ ಗಿಫ್ಟ್ ಎಂದು ಬರೆದ ರಶ್ಮಿಕಾ ಕೆಲವೊಂದು ವಸ್ತುಗಳನ್ನು ಬಾಕ್ಸ್ ನಲ್ಲಿಟ್ಟು ಬನ್ನಿಗೆ ಸರ್ಪ್ರೈಸ್ ನೀಡಿದ್ದಾರೆ ರಶ್ಮಿಕಾ. ಈ ವಿಶೇಷ ಉಡುಗೊರೆಯ ಬಗ್ಗೆ ನಟ ಅಲ್ಲು ಅರ್ಜುನ್ ಅವರು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡು, ವಿಶೇಷ ಉಡುಗೊರೆಯನ್ನು ನೀಡಿದ ರಶ್ಮಿಕಾ ಮಂದಣ್ಣಾಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.

ಪುಷ್ಪ ಸಿನಿಮಾ ರಶ್ಮಿಕಾ ಅಭಿನಯದ ಮೊದಲ‌ ಪ್ಯಾನ್ ಇಂಡಿಯಾ ಸಿನಿಮಾ ಕೂಡಾ ಆಗಿದೆ. ಮೈತ್ರಿ ಮೂವೀಸ್ ಮೇಕರ್ಸ್ ಬ್ಯಾನರ್ , ಮುತ್ತಮ್ ಶೆಟ್ಟಿ ಮೀಡಿಯಾ ಬ್ಯಾನರ್ ಗಳಲ್ಲಿ ಜಂಟಿಯಾಗಿ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ರಕ್ತ ಚಂದನದ ಕಳ್ಳ ಸಾಗಾಣಿಕೆ ಕುರಿತಾದ ಕಥಾ ಹಂದರವನ್ನು ಹೊಂದಿರುವ ಸಿನಿಮಾ ಇದಾಗಿದ್ದು, ತೆಲುಗಿನ ಕೆಲವು ಕಲಾವಿದರು ಇದೇ ಮೊದಲ ಬಾರಿಗೆ ವಿಶೇಷ ಗೆಟಪ್ ಗಳಲ್ಲಿ ಕಾಣಿಸಿಕೊಂಡಿದ್ದಾರೆ.

Leave a Comment