ಪುಷ್ಪ ಐಟಂ ಸಾಂಗ್ ಹಿಟ್ ಆದ ಬೆನ್ನಲ್ಲೇ ಮತ್ತೊಂದು ಐಟಂ ಹಾಡಿಗೆ ಸಜ್ಜಾದ ಸಮಂತಾ?? ಕುತೂಹಲ ಹುಟ್ಟಿಸಿದ ಸುದ್ದಿ!!

Written by Soma Shekar

Published on:

---Join Our Channel---

ಪುಷ್ಪ ಸಿನಿಮಾ ಬಂದು ದೊಡ್ಡ ಸದ್ದು ಮಾಡಿ, ಇದೀಗ ಓಟಿಟಿಯಲ್ಲಿ ಸಹಾ ಮಿಂಚಿದೆ. ಸಿನಿಮಾ ದೊಡ್ಡ ಹೆಸರು ಮಾಡಿದೆ. ಆದರೆ ಇಲ್ಲಿ ಹೇಳಲೇಬೇಕಾದ ವಿಶೇಷವೊಂದು ಖಂಡಿತ ಇದೆ. ಏನು ಅಂತೀರಾ?? ಅದೇ ನಟಿ ಸಮಂತಾ ಐಟಂ ಸಾಂಗ್. ಹೌದು ಪುಷ್ಪ ಸಿನಿಮಾದಲ್ಲಿ ಅಲ್ಲು ಅರ್ಜುನ್, ನಾಯಕಿ ರಶ್ಮಿಕಾ ಮಂದಣ್ಣ ಗಿಂತಲೂ ಹೆಚ್ಚು ಕ್ರೇಜ್ ಹುಟ್ಟು ಹಾಕಿರೋದು ಮಾತ್ರ ಒಂದೇ ಒಂದು ಹಾಡಿಗೆ ಹೆಜ್ಜೆ ಹಾಕಿದ ನಟಿ ಸಮಂತಾ. ಸಮಂತಾ ತಮ್ಮ ವೃತ್ತಿ ಜೀವನದಲ್ಲಿ ಇದೇ ಮೊದಲ ಬಾರಿಗೆ ಐಟಂ ಹಾಡಿಗೆ ಹೆಜ್ಜೆ ಹಾಕಿದ್ದರು, ಆದ್ರೆ ಮೊದಲನೆಯ ಹಾಡು ದೊಡ್ಡ ಸಂಚಲನವನ್ನು ಹುಟ್ಟು ಹಾಕಿದೆ.

ಪುಷ್ಪ ಸಿನಿಮಾದ ಗೆಲುವು ಒಂದು ಕಡೆ ಆದರೆ ಸಮಂತಾ ಹೆಜ್ಜೆ ಹಾಕಿದ ಹಾಡಿನ ಯಶಸ್ಸು ಇನ್ನೊಂದು ಕಡೆ. ಸಮಂತಾ ಹಾಕಿದ ಮಾದಕ ಹೆಜ್ಜೆಗಳು ಹಾಗೂ ನಟಿ ನೀಡಿದ ಮಾದಕ ನೋಟದ ಹೊಡೆತಕ್ಕೆ ಥಿಯೇಟರ್ ಗಳಲ್ಲಿ ಅಭಿಮಾನಿಗಳು ಹುಚ್ಚೆದ್ದು ಕುಣಿದಿದ್ದರು. ಈ ಹಾಡು ಹಿಟ್ ಆಗಿದ್ದೇ ಆಗಿದ್ದು, ಈಗ ನಟಿ ಸಮಂತಾಗೆ ಸಾಲು ಸಾಲು ಸಿನಿಮಾಗಳಲ್ಲಿ ಐಟಂ ಹಾಡಿಗೆ ಹೆಜ್ಜೆ ಹಾಕಲು ಹೊಸ ಹೊಸ ಅವಕಾಶಗಳು ಅರಸಿಕೊಂಡು ಬರುತ್ತಿದ್ದು, ಇದು ನಟಿಯ ಕ್ರೇಜ್ ಯಾವ ಮಟ್ಟಕ್ಕೆ ಇದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ.

ನಟ ಅಲ್ಲು ಅರ್ಜುನ್ ಮತ್ತು ನಿರ್ದೇಶಕ ಸುಕುಮಾರ್ ಅವರ ಒತ್ತಾಯಕ್ಕೆ ಒಪ್ಪಿ ಸಮಂತಾ ಪುಷ್ಪ ಸಿನಿಮಾದಲ್ಲಿ ಒಂದು ಹಾಡಿಗೆ ಹೆಜ್ಜೆ ಹಾಕಿದ್ದರು. ಇದಾದ ಮೇಲೆ ಮತ್ತೆ ಸಮಂತಾ ಐಟಂ ಹಾಡಿಗೆ ಹೆಜ್ಜೆ ಹಾಕ್ತಾರಾ?? ಅನ್ನೋ ಪ್ರಶ್ನೆ ಸಹಜವಾಗಿಯೇ ಅಭಿಮಾನಿಗಳಿಗೆ ಇತ್ತು. ಈಗ ಈ ಪ್ರಶ್ನೆಗೆ ಉತ್ತರ ಎನ್ನುವಂತಹ ಸುದ್ದಿಯೊಂದು ಟಾಲಿವುಡ್ ಅಂಗಳದಲ್ಲಿ ಹರಿದಾಡಿದೆ. ಹೌದು ನಟಿ ಸಮಂತಾ ತಮ್ಮ ಮೊದಲ ಐಟಂ ಸಾಂಗ್ ನ‌ ಯಶಸ್ಸಿನ ಬೆನ್ನಲ್ಲೇ ಹೊಸ ಸಿನಿಮಾವೊಂದರಲ್ಲಿ ಮತ್ತೊಂದು ಐಟಂ ಸಾಂಗ್ ಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ ಎನ್ನಲಾಗಿದೆ.

ಪುಷ್ಪ ಸಿನಿಮಾದಲ್ಲಿ ಹೂಂ ಅಂತೀಯ ಮಾವ, ಉಹೂಂ ಅಂತೀಯ ಮಾವ ಎನ್ನೋ ಹಾಡಿಗೆ ಹೆಜ್ಜೆ ಹಾಕಲು ಸಮಂತಾ ಸಿಕ್ಕಾಪಟ್ಟೆ ಅಭ್ಯಾಸವನ್ನು ಮಾಡಿದ್ದರು‌. ಅವರ ಅಭ್ಯಾಸದ ವೀಡಿಯೋ ನೋಡಿ ಅಭಿಮಾನಿಗಳು ಖುಷಿ ಪಟ್ಟಿದ್ದರು. ಅವರ ಅಭ್ಯಾಸಕ್ಕೆ ತಕ್ಕ ಅಥವಾ ಶ್ರಮಕ್ಕೆ ತಕ್ಕ ಪ್ರತಿಫಲ ಎನ್ನುವಂತೆ ಈ ಹಾಡು ಸಿನಿಮಾದಲ್ಲಿ ಮಾತ್ರವೇ ಅಲ್ಲದೇ ಸೋಶಿಯಲ್ ಮೀಡಿಯಾಗಳಲ್ಲಿ ದೊಡ್ಡ ಬಿರುಗಾಳಿಯನ್ನೇ ಎಬ್ಬಿಸಿತ್ತು.

ಈಗ ಮೊದಲ ಹಾಡಿನ ಸಕ್ಸಸ್ ನಂತರ ಸಮಂತಾ ಎರಡನೇ ಐಟಂ ಸಾಂಗ್ ಗೆ ಒಪ್ಪಿಗೆಯನ್ನು ನೀಡಿದ್ದಾರೆ ಎನ್ನಲಾಗಿದೆ. ಟಾಲಿವುಡ್ ನ ಸ್ಟಾರ್ ನಟ ವಿಜಯ್ ದೇವರಕೊಂಡ ಅಭಿನಯದ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ಲೈಗರ್ ತನ್ನ ಟೀಸರ್ ಮೂಲಕ ಗಮನ ಸೆಳೆದಿದೆ. ಅಲ್ಲದೇ ಸಿನಿಮಾ ಬಗ್ಗೆ ಒಳ್ಳೆಯ ಪ್ರತಿಕ್ರಿಯೆ ಕೂಡಾ ಬರುತ್ತಿದೆ‌. ಈಗ ಇದೇ ಸಿನಿಮಾದಲ್ಲಿನ ವಿಶೇಷ ಹಾಡಿಗೆ ಸಮಂತಾ ಹೆಜ್ಜೆ ಹಾಕಲಿದ್ದಾರೆ ಎನ್ನಲಾಗಿದೆ.

ಹಾಗಾದ್ರೆ ಸಮಂತಾ ಎರಡನೇ ಐಟಂ ಸಾಂಗ್ ಮತ್ತೊಂದು ಹೊಸ ಸಂಚಲವನ್ನು ಸೃಷ್ಟಿಸುತ್ತಾ?? ಕಾದು ನೋಡಬೇಕಾಗಿದೆ. ಆದ್ರೆ ಸದ್ಯಕ್ಕಂತೂ ಸಮಂತಾ ಮತ್ತೊಂದು ಸಲ ಐಟಂ ಹಾಡಿಗೆ ಹೆಜ್ಜೆಗೆ ಹಾಕುತ್ತಿದ್ದಾರೆ ಎನ್ನುವ ವಿಷಯವು ಸುದ್ದಿಯಾದ ಕೂಡಲೇ ಸಮಂತಾ ಅಭಿಮಾನಿಗಳು ಸಖತ್ ಎಕ್ಸೈಟ್ ಆಗಿದ್ದಾರೆ ಮಾತ್ರವೇ ಅಲ್ಲದೇ ತಮ್ಮ ಖುಷಿಯನ್ನು ಸಹಾ ವ್ಯಕ್ತಪಡಿಸಿದ್ದಾರೆ. ಸದ್ಯಕ್ಕಂತೂ ಎಲ್ಲೆಲ್ಲೂ ಸಮಂತಾ ಸುದ್ದಿಗಳೇ ತುಂಬಿದೆ.

Leave a Comment