ಪುರುಷರ ಒಳ ಉಡುಪು ಜಾಹೀರಾತಲ್ಲಿ ರಶ್ಮಿಕಾ:ಕಾನ್ಸೆಪ್ಟ್ ನೋಡಿ ವ್ಯಂಗ್ಯ, ‌ಸಿಟ್ಟು ಹೊರಹಾಕಿದ ನೆಟ್ಟಿಗರು

Written by Soma Shekar

Published on:

---Join Our Channel---

ಸದಾ ಒಂದಲ್ಲಾ ಒಂದು ವಿಷಯದಿಂದ ಸದ್ದು ಮಾಡುವ ನಟಿ ರಶ್ಮಿಕಾ ಮಂದಣ್ಣ‌‌ ಅತ್ತ ಬಾಲಿವುಡ್ ಮತ್ತು ಇತ್ತ ದಕ್ಷಿಣದ ಸಿನಿಮಾಗಳಲ್ಲಿ ಕೂಡಾ ಸಖತ್ ಬ್ಯುಸಿಯಾಗಿರುವ ವಿಷಯ ಎಲ್ಲರಿಗೂ ತಿಳಿದೇ ಇದೆ. ಆದರೆ ಇದೀಗ ರಶ್ಮಿಕಾ ನಟಿಸಿರುವ ಒಂದು ಜಾಹೀರಾತು ಈಗ ಸಖತ್ ಸುದ್ದಿಯಾಗಿದೆ‌. ಹೌದು ನಟಿ ರಶ್ಮಿಕಾ ಮಂದಣ್ಣ ಪುರುಷರ ಒಳ ಉಡುಪುಗಳ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದು, ಈಗ ಈ ಜಾಹೀರಾತು ಎಲ್ಲೆಡೆ ಸದ್ದು ಮಾಡುತ್ತಲೇ, ಒಂದು ಚರ್ಚೆಗೆ ಕೂಡಾ‌ ಕಾರಣವಾಗಿದೆ. ಇಷ್ಟಕ್ಕೂ ಈ ಜಾಹೀರಾತು ಏನೆಂದು ತಿಳಿಯೋಣ ಬನ್ನಿ.

ಬಾಲಿವುಡ್ ನಟ ವಿಕ್ಕಿ ಕೌಶಲ್ ಮತ್ತು ರಶ್ಮಿಕಾ ಮಂದಣ್ಣ ಈ ಪುರುಷರ ಒಳ ಉಡುಪಿನ ( underwear ) ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ. ಜಾಹೀರಾತಿನ ಕಾನ್ಸೆಪ್ಟ್ ಬಗ್ಗೆ ಹೇಳುವುದಾದರೆ ಇದರಲ್ಲಿ ರಶ್ಮಿಕಾ ಒಬ್ಬ ಯೋಗ ಟೀಚರ್ ಆಗಿದ್ದು, ಯೋಗ ಕ್ಲಾಸ್ ನಲ್ಲಿ ಯೋಗ ಹೇಳಿ ಕೊಡುವಾಗ, ವಿಕ್ಕಿ ಕೌಶಲ್ ಒಂದು ಯೋಗ ಭಂಗಿಯಲ್ಲಿ ಎರಡು ಕೈಗಳನ್ನು ಮೇಲೆ ಎತ್ತಿರುವಾಗ ಅವರ ಸೊಂಟದ ಭಾಗದಲ್ಲಿ ಒಳ ಉಡುಪಿನ ಪಟ್ಟಿಯು ಸ್ಪಷ್ಟವಾಗಿ ಕಾಣುತ್ತದೆ.

ಆ ಒಳ ಉಡುಪಿನ ಪಟ್ಟಿ ನೋಡಿದ ರಶ್ಮಿಕಾ ಮೈಮರೆತು ಬಿಡುತ್ತಾರೆ. ಒಳ ಉಡುಪಿನ ಪಟ್ಟಿ ಅವರನ್ನು ಆ ಯುವಕನ ಕಡೆಗೆ ಸೆಳೆದು ಬಿಡುತ್ತದೆ. ಮರು ದಿನ ಕೂಡಾ ಆತ ಯೋಗ ತರಗತಿಗೆ ಬಂದಾಗ ಆತನ ಒಳ ಉಡುಪು ನೋಡಲು ಯೋಗ ಮ್ಯಾಟ್ ಗಳನ್ನು‌‌ ಮೇಲೆ ಇಟ್ಟಿರುತ್ತಾರೆ ಯೋಗ ಟೀಚರ್. ಆಗಲೂ ವಿಕ್ಕಿ ಕೈ ಮೇಲೆ ಎತ್ತಿ ಮ್ಯಾಟ್ ಎತ್ತಿ ಕೊಳ್ಳುವಾಗ ಯೋಗ ಟೀಚರ್ ಮತ್ತೆ ಒಳ ಉಡುಪಿನ ಪಟ್ಟಿ ನೋಡಿ ಖುಷಿ ಪಡುತ್ತಾರೆ.

ಪ್ರಸ್ತುತ ಯೂಟ್ಯೂಬ್ ನಲ್ಲಿ ಪ್ರಸಾರ ಆಗುತ್ತಿರುವ ಈ ಜಾಹೀರಾತಿನ ವೀಡಿಯೋ ಭರ್ಜರಿಯಾಗಿ ವೈರಲ್ ಆಗುತ್ತಿದೆ. ವೀಡಿಯೋ ನೋಡಿದ ನೆಟ್ಟಿಗರು ಸಹಾ ಕಾಮೆಂಟ್ ಗಳನ್ನು ಮಾಡಲು ಆರಂಭಿಸಿ ಬಿಟ್ಟಿದ್ದಾರೆ. ಕೆಲವರು ಇಲ್ಲಿ ಪಾತ್ರಗಳನ್ನು ರಿವರ್ಸ್ ಮಾಡಿ ಎಂದರೆ, ನೆಟ್ಟಿಗರೊಬ್ಬರು ರಶ್ಮಿಕಾ ಮಂಗಣ್ಣ ಎಂದು ಬರೆದು ವ್ಯಂಗ್ಯ ಮಾಡಿದ್ದಾರೆ. ಇನ್ನು ಕೆಲವರು ಜಾಹೀರಾತಿನ ಕಾನ್ಸೆಪ್ಟ್ ಅನ್ನು ತೀವ್ರವಾಗಿ ನಿಂದನೆ ಮಾಡುತ್ತಿದ್ದಾರೆ.

ಪುರುಷರ ಒಳ ಉಡುಪು ನೋಡಿ ಮಹಿಳೆ ಆಕರ್ಷಿತಳಾಗುತ್ತಾಳಾ? ಇದೆಂತ ಕಾನ್ಸೆಪ್ಟ್, ಈ ಜಾಹೀರಾತಿನಲ್ಲಿ ಹೆಣ್ಣು ಮಕ್ಕಳ ಮನಸ್ಥಿತಿಯನ್ನು ಕೆಟ್ಟದಾಗಿ ಬಿಂಬಿಸಲಾಗಿದೆ ಎಂದು ಕೆಲವರು ಕಾಮೆಂಟ್ ಮಾಡಿ ಸಿಟ್ಟನ್ನು ಹೊರ ಹಾಕಿದರೆ, ಸ್ಟಾರ್ ನಟರು ಜಾಹೀರಾತು ಮಾಡುವ ಮುನ್ನ ಕಾನ್ಸೆಪ್ಟ್ ಗಳ ಬಗ್ಗೆ ಏಕೆ ಎಚ್ಚರ ವಹಿಸುವುದಿಲ್ಲ ಎಂದು ಕೂಡಾ ಕೆಲವರು ತಮ್ಮ ಅಸಮಾಧಾನವನ್ನು ಹೊರಹಾಕುತ್ತಾ ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ.

Leave a Comment