ಪುನೀತ್ ಸರ್ ತನ್ನ ಜೀವನದಲ್ಲಿ ಎಷ್ಟು ಮುಖ್ಯ ಎಂದು ಅರ್ಥ ಪೂರ್ಣ ವಿಚಾರ ಹಂಚಿಕೊಂಡ ಶೈನ್ ಶೆಟ್ಟಿ

0 4

ಕನ್ನಡ ಚಿತ್ರರಂಗದ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರು ನೆನಪು ಎನ್ನುವುದನ್ನು ಒಪ್ಪಿಕೊಳ್ಳುವುದಕ್ಕೆ ಅವರನ್ನು ಅಭಿಮಾನಿಸುವ ಯಾರೊಬ್ಬರಿಗೂ ಕೂಡಾ ಇನ್ನೂ ಸಾಧ್ಯವಾಗಿಲ್ಲ. ಆದರೆ ಅಪ್ಪು ಅವರ ನಿಧನದ ನಂತರ ಅವರ ಬಗೆಗಿನ ಅನೇಕ ಗೊತ್ತಿಲ್ಲದ ವಿಚಾರಗಳು, ಮಾನವೀಯ ಕಾರ್ಯಗಳು ಹೊರ ಬಂದು ಪುನೀತ್ ಅವರ ಮೇಲಿನ ಗೌರವ ದುಪ್ಪಟ್ಟಾಗುತ್ತಿದೆ. ಹಲವು ಸಿನಿಮಾ ಸೆಲೆಬ್ರಿಟಿಗಳು ಪುನೀತ್ ಅವರ ಬಗ್ಗೆ ಅನೇಕ ವಿಚಾರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಮೂಲಕ ತಮ್ಮ ಮನಸ್ಸಿನ ಮಾತುಗಳನ್ನು ವ್ಯಕ್ತಪಡಿಸುತ್ತಿದ್ದಾರೆ.

ಈಗ ಬಿಗ್ ಬಾಸ್ ಸೀಸನ್ ಏಳರ ವಿನ್ನರ್ ಶೈನ್ ಶೆಟ್ಟಿಯವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪುನೀತ್ ಅವರ ಬಗ್ಗೆ ಒಂದು ದೀರ್ಘವಾದ ಪೋಸ್ಟ್ ಬರೆದುಕೊಂಡು ತಮ್ಮ‌ ಮನಸ್ಸಿನ ಮಾತುಗಳನ್ನು ಹಂಚಿಕೊಂಡಿದ್ದಾರೆ. ಶೈನ್ ಶೆಟ್ಟಿ ತಮ್ಮ ಪೋಸ್ಟ್ ನಲ್ಲಿ, ಬದುಕು ಒಂದು ಸಿನಿಮಾ ಅನ್ನುವುದು ಎಷ್ಟು ನಿಜ ! ಆ ಸಿನಿಮಾದ ಚಿತ್ರಕಥೆಯಲ್ಲಿ 3 ಭಾಗ, ಹಾಗೆಯೆ ಪುನೀತ್ ರಾಜಕುಮಾರ್ ಸರ್ ನನ್ನ ಜೀವನದಲ್ಲಿ ಕೂಡ 3 ಪ್ರಮುಖ ಪಾತ್ರ ವಹಿಸಿದ್ದಾರೆ !

ಮೊದಮೊದಲು ನನ್ನ ಈ ಕಲಾ ಪ್ರವಾಸ ಶುರುವಾದಾಗ, ಪುನೀತ್ ಸರ್ ರವರನ್ನು ಕನ್ನಡ ಚಿತ್ರರಂಗದ power star ಆಗಿ ಎದುರು ನೋಡುತಿದ್ದೆ, ಬೆಳ್ಳಿ ಪರದೆಯ ಮೇಲೆ ಅವರು ಮೂಡಿಸಿದ ಜಾದೂಗೆ ಬೆರಗಾಗಿದ್ದೆ . ಅವರ ಜೊತೆ ನಟಿಸಲು ಹಾಗು ಹಲವಾರು ಬಾರಿ ರಂಗಮಂಚಿಕೆ ಹಂಚಿಕೊಳ್ಲಲು ಅವಕಾಶ ದೊರೆತಾಗ ಒಂದು ಪುಟ್ಟ ಗೆಳೆತನ ಚಿಗುರೊಡೆಯಿತು. ನನ್ನ ಆಸೆ , ಪ್ರತಿಭೆಗಳನ್ನು ಹೊಗಳಿದಲ್ಲದ್ದೆ, ಅವರ ಅತ್ಯಮೂಲ್ಯವಾದ ಮಾರ್ಗದರ್ಶನ ನೀಡಿ ನನ್ನ ಗುರಿಯನ್ನು ತಲುಪಲು ಪ್ರೇರಿಸಿದರು.

ಈ ಸಿನೆಮಾ field ನಲ್ಲಿ ಉಳಿಯೋದಕ್ಕೆ/ಬೆಳೆಯೋದಕ್ಕೆ ಅಪ್ಪು ಸರ್ ರವರ ಪ್ರೋತ್ಸಾಹ. ಒಂದು ಕಾರಣ ಎಂದು ಹೇಳಿದರೆ ತಪ್ಪಾಗಲಾರದು . ಆ ಸ್ನೇಹ ಭ್ರಾತೃತ್ವದ ರೂಪ ಪಡೆಯಲು ಬಹಳ ಸಮಯ ಬೇಕಾಗಿರಲಿಲ್ಲ . ಪುನೀತ್ ಸರ್ ರವರನ್ನು ಅಷ್ಟು ಕೊಂಡಾಡಲು ಅವರ ಸುತ್ತ ಮುತ್ತ ಇದ್ದ ಜನರನ್ನು ವೃತಿಯಲ್ಲಷ್ಟೇ ಅಲ್ಲ ವೈಯಕ್ತಿಕ ವಿಚಾರದಲ್ಲಿಯೂ ಹುರಿದುಂಬಿಸುತ್ತಿದ್ದರೆಂಬುದೇ ಸಾಕ್ಷಿ ! ಗಲ್ಲಿ ಕಿಚನ್ ಶುರುವಾದಾಗ , ತಮ್ಮ ಬೆಂಬಲದ ಜೊತೆಗೆ ಉತ್ತಮ ಉದ್ಯಮಿಯಾಗುವ ಹಲವಾರು ಆಲೋಚನೆಗಳನ್ನೂ ವ್ಯಕ್ತಪಡಿಸಿದರು .

ಬೆಳಿತಾ ಬೆಳಿತಾ ಆ ಮಿನುಗು ತಾರೆ, ಕಷ್ಟ ಪಡ್ತಾ ಆ ಸಲಹೆಗಾರ, ಕಾಲ ಕ್ರಮೇಣ ಪ್ರೀತಿಯ ಸಹೋದರನಾಗಿ ಬದಲಾಗಿ ನನ್ನ ಜೀವನದ ಮೇಲೆ ಗಾಢವಾದ ಪ್ರಭಾವ ಬೀರಿದ್ದಾರೆ ! ನೀವು ಕಲಿಸಿದ ಪಾಠ ,ಮೌಲ್ಯಗಳನ್ನು ಎಂದಿಗೂ ಜೀವಂತವಾಗಿ ಇರಿಸಿಕೊಳುತ್ತಾ……ಹೋಗ್ಬನ್ನಿ ಪುನೀತ್ ಸರ್ ಎಂದು ಬರೆದುಕೊಂಡು ಶೈನ್ ಶೆಟ್ಟಿಯವರು ತಮ್ಮ ಜೀವನದಲ್ಲಿ ಪುನೀತ್ ಅವರ ಪಾತ್ರ ಏನೆಂಬುದನ್ನು ವಿವರಿಸಿದ್ದಾರೆ.

Leave A Reply

Your email address will not be published.