ಪುನೀತ್ ರಾಜ್‍ಕುಮಾರ್ ಸಾವಿನ ಬೆನ್ನಲ್ಲೇ ಮಹತ್ವದ ನಿರ್ಧಾರ ಕೈಗೊಂಡ ಕೇರಳ ಸರ್ಕಾರ

Written by Soma Shekar

Published on:

---Join Our Channel---

ಕನ್ನಡದ ನಟ ಪುನೀತ್ ರಾಜ್‍ಕುಮಾರ್ ಅವರ ಹಠಾತ್ ನಿಧನದ ಬೆನ್ನೆಲ್ಲೇ ಕೇರಳ ಸರ್ಕಾರವು ಮಹತ್ವದ ನಿರ್ಧಾರವೊಂದನ್ನು ಮಾಡಿದೆ. ಹೌದು ಕೇರಳ ಸರ್ಕಾರವು ರಾಜ್ಯದಾದ್ಯಂತ ಇರುವಂತಹ ಎಲ್ಲಾ ಜಿಮ್ನಾಷಿಯಂಗಳು, ಕ್ರೀಡಾಂಗಣಗಳು, ಒಳಾಂಗಣ ಕೋರ್ಟ್ ಗಳಲ್ಲಿ ಮೂಲಭೂತ ಪ್ರಥಮ ಚಿಕಿತ್ಸಾ ಕಿಟ್ ಗಳನ್ನು ಸೇರಿದಂತೆ ಸ್ವಯಂಚಾಲಿತ ಬಾಹ್ಯ ಡಿಫಿಬ್ರಿಲೇಟರ್‌- ಎಇಡಿ-ಆಟೋಮೇಟೆಡ್‌ ಎಕ್ಸ್‌ಟರ್ನಲ್‌ ಡಿಫಿಬ್ರಿಲೇಟರ್‌ಗಳನ್ನು (AED-Automated External Defibrillator) ಬಳಕೆಗೆ ಸಿದ್ಧವಾಗಿಟ್ಟುಕೊಳ್ಳುವ ಅವಶ್ಯಕತೆಗೆ ಪ್ರಾಮುಖ್ಯತೆ ಯನ್ನು ನೀಡಲು ಮುಂದಾಗಿದೆ.

ಶನಿವಾರದಂದು ತಿರುವನಂತಪುರಂ ನಗರದ ರಾಯಲ್ ಬ್ಯಾಡ್ಮಿಂಟನ್ ಕೋರ್ಟ್ ನಲ್ಲಿ ಪ್ರಥಮ ಚಿಕಿತ್ಸಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ರಾಜ್ಯದ ಸಾರಿಗೆ ಸಚಿವ ಆಂಟೋನಿ ರಾಜು, ಕೇರಳದ ಕ್ರೀಡಾ ಸಚಿವರಾದ ಅಬ್ದುಲ್ ರೆಹಮಾನ್ ಅವರೊಡನೆ ಚರ್ಚಿಸಿ ಶೀಘ್ರದಲ್ಲೇ ಇದನ್ನು ಜಾರಿಗೆ ತರುವುದಾಗಿ ಭರವಸೆಯನ್ನು ನೀಡಿದ್ದಾರೆ. ಅವರು ಈ ವೇಳೆ ಕನ್ನಡದ ನಟ ಪುನೀತ್ ರಾಜ್‍ಕುಮಾರ್ ಅವರ ಅಕಾಲಿಕ ನಿಧನದ ಬಗ್ಗೆ ನಮಗೆ ತಿಳಿದು ಬಂದಿದೆ. ಅವರು ಶುಕ್ರವಾರ ಜಿಮ್ ನಲ್ಲಿ ವ್ಯಾಯಾಮ ಮಾಡುವಾಗ ಎದೆ ನೋವು ಕಂಡು ಬಂದಿತ್ತು.

ಒಳಾಂಗಣ ಕೋರ್ಟ್ ಗಳಲ್ಲಿ ಹಾಗೂ ಜಿಮ್ ಗಳಲ್ಲಿ ಪ್ರಾಥಮಿಕ ಚಿಕಿತ್ಸಾ ಉಪಕರಣಗಳು ಸಿದ್ಧವಾಗಿರದ ಕಾರಣ ಅವರ ಪ್ರಾಣವನ್ನು ಉಳಿಸಲಾಗಲಿಲ್ಲ. ನಮ್ಮ ರಾಜ್ಯದಲ್ಲಿ ಯಾವುದೇ ಕ್ರೀಡಾಪಟು ಇಂತಹ ಪರಿಸ್ಥಿತಿ ಎದುರಿಸಿ, ಪ್ರಾಣ ಕಳೆದುಕೊಳ್ಳಬಾರದು. ಆದ್ದರಿಂದ ಈ ನಿಟ್ಟಿನಲ್ಲಿ ಒಳಾಂಗಣ ಕೋರ್ಟ್ ಗಳು ಮತ್ತು ಜಿಮ್ ಗಳಲ್ಲಿ ಪ್ರಾಥಮಿಕ ಚಿಕಿತ್ಸೆಯ ಉಪಕರಣಗಳನ್ನು ಬಳಕೆಗೆ ಸಿದ್ಧವಾಗಿಡಬೇಕು ಮತ್ತು ಇದನ್ನು ಕಡ್ಡಾಯಗೊಳಿಸಬೇಕು. ಇದಕ್ಕೆ ಸಂಬಂಧಪಟ್ಟ ಇಲಾಖೆಗಳು ಈ ನಿಟ್ಟಿನಲ್ಲಿ ತುರ್ತು ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದಿದ್ದಾರೆ ಆಂಟೋನಿ.

Leave a Comment