ಪುನೀತ್ ಮೇಲಿನ ಅಕ್ಕರೆಯಿಂದ ಪ್ರಮುಖ ನಿರ್ಧಾರವೊಂದನ್ನು ಮಾಡಿದ್ದಾರೆ ನವರಸ ನಾಯಕ ಜಗ್ಗೇಶ್

Entertainment Featured-Articles News

ಪುನೀತ್ ರಾಜಕುಮಾರ್ ಅವರ ಅಗಲಿಕೆ ಎನ್ನುವುದು ಕನ್ನಡ ಚಿತ್ರರಂಗದಲ್ಲಿ ಮಾತ್ರವೇ ಅಲ್ಲದೆ ಅವರ ಅಭಿಮಾನಿಗಳು ಹಾಗೂ ಕನ್ನಡ ನಾಡಿನ ಜನರ ಮನಸಿನಲ್ಲಿ ಕೂಡಾ ಒಂದು ನೋವಿನ ಛಾಯೆಯಂತೆ ಉಳಿದು ಹೋಗಿದೆ. ಪುನೀತ್ ರಾಜಕುಮಾರ್ ಅವರ ನಿಧನಾನಂತರ ಕನ್ನಡ ಚಿತ್ರರಂಗದಲ್ಲಿ ಒಂದು ರೀತಿಯ ಮೌನ ಆವರಿಸಿದೆ. ದೊಡ್ಡ ಸಂಭ್ರಮಾಚರಣೆ ಗಳಿಗೆ ಬ್ರೇಕ್ ಬಿದ್ದಿದೆ. ಸಿನಿಮಾ ಸಮಾರಂಭಗಳಲ್ಲಿ ಪುನೀತ್ ರಾಜಕುಮಾರ್ ಅವರ ಬಗ್ಗೆ ಮಾತನಾಡುವ ಮೂಲಕ ಬಹಳಷ್ಟು ಜನ ತಾರೆಯರು ಅವರನ್ನು ಸ್ಮರಿಸುತ್ತಲೇ ಇರುತ್ತಾರೆ. ಅಭಿಮಾನಿಗಳು ಹಾಗೂ ಸಾಮಾನ್ಯ ಜನರು ದೊಡ್ಡ ಸಂಖ್ಯೆಯಲ್ಲಿ ಪುನೀತ್ ಅವರ ಸಮಾಧಿ ಸ್ಥಳಕ್ಕೆ ಭೇಟಿ ನೀಡುತ್ತಲೇ ಇದ್ದಾರೆ.

ಪುನೀತ್ ಅವರ ಅಗಲಿಕೆಯ ನೋವಿನ ಕಾರಣದಿಂದ ಅದೇ ಬೇಸರದಲ್ಲಿ ಕನ್ನಡದ ಸಿನಿಮಾ ಸೆಲೆಬ್ರಿಟಿಗಳು ತಮ್ಮ ಜನ್ಮದಿನದ ಸಂಭ್ರಮ ಆಚರಣೆಗೆ ಸಹ ಬ್ರೇಕ್ ಹಾಕಿದ್ದಾರೆ. ಇದೀಗ ಕನ್ನಡದ ಹಿರಿಯ ನಟ, ನವರಸನಾಯಕ ಖ್ಯಾತಿಯ ನಟ ಜಗ್ಗೇಶ್ ಅವರು ಈ ಬಾರಿ ತಮ್ಮ ಹುಟ್ಟುಹಬ್ಬದ ಆಚರಣೆ ಮಾಡಿಕೊಳ್ಳುತ್ತಿಲ್ಲ. ಪ್ರತಿ ಬಾರಿ ಅಭಿಮಾನಿಗಳೊಂದಿಗೆ ಅದ್ದೂರಿಯಾಗಿ ಜನ್ಮ ದಿನದ ಸಂಭ್ರಮವನ್ನು ಹಂಚಿಕೊಳ್ಳುತ್ತಿದ್ದ ಜಗ್ಗೇಶ್ ಅವರು ಈ ಬಾರಿ ಪುನೀತ್ ರಾಜಕುಮಾರ್ ಅವರ ಅಗಲಿಕೆಯ ನೋವಿನ ಹಿನ್ನೆಲೆಯಲ್ಲಿ ಜನ್ಮದಿನದ ಆಚರಣೆಯನ್ನು ಮಾಡಿಕೊಳ್ಳುತ್ತಿಲ್ಲ.

ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸಕ್ರಿಯವಾಗಿರುವ ನಟ ಜಗ್ಗೇಶ್ ಅವರು ತಾನು ಈ ಬಾರಿ ಜನ್ಮದಿನದ ಆಚರಣೆಯನ್ನು ಮಾಡಿಕೊಳ್ಳುತ್ತಿಲ್ಲ ಎನ್ನುವ ವಿಚಾರವನ್ನು ಸ್ವತಃ ತಾವೇ ಸ್ಪಷ್ಟಪಡಿಸಿದ್ದು, ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಈ ಕುರಿತಾಗಿ ಪೋಸ್ಟ್ ಒಂದನ್ನು ಹಂಚಿಕೊಂಡು ತಮ್ಮ ಮನದ ಮಾತುಗಳನ್ನು ಹಂಚಿಕೊಂಡಿದ್ದಾರೆ. ಮಾರ್ಚ್ 17ಕ್ಕೆ ಪುನೀತ್ ರಾಜಕುಮಾರ್ ಅವರ ಜನ್ಮದಿನ ಅದೇ ದಿನ ನವರಸನಾಯಕ ಜಗ್ಗೇಶ್ ಅವರ ಜನ್ಮದಿನ ಕೂಡ ಆಗಿದೆ.

ಪ್ರತಿವರ್ಷ ಪುನೀತ್ ರಾಜಕುಮಾರ್ ಅವರು ನಟ ಜಗ್ಗೇಶ್ ಅವರಿಗೆ ಕರೆ ಮಾಡಿ ಜನ್ಮದಿನದ ಶುಭಾಶಯ ವನ್ನು ಕೋರುತ್ತಿದ್ದರು. ಆದರೆ ಈ ಬಾರಿ ಅಂತಹುದೊಂದು ವಿಶೇಷವಾದ ಶುಭಾಶಯವನ್ನು ಕೇಳುವುದಕ್ಕೆ ಸಾಧ್ಯವಿಲ್ಲ ಎನ್ನುವ ಬೇಸರ ಹಾಗೂ ನೋವನ್ನು ವ್ಯಕ್ತಪಡಿಸುತ್ತಾ, ಜಗ್ಗೇಶ್ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಒಂದನ್ನು ಹಂಚಿಕೊಳ್ಳುವ ಮೂಲಕ ಕೆಲವು ಭಾವುಕ ಸಾಲುಗಳನ್ನು ಬರೆದುಕೊಂಡಿದ್ದಾರೆ.

https://twitter.com/Jaggesh2/status/1501396964919083008?s=19

ಜಗ್ಗೇಶ್ ಅವರು ತಮ್ಮ ಪೋಸ್ಟ್ ನಲ್ಲಿ, “ಈ ಬಾರಿ ನನ್ನ 59ನೆ ಹುಟ್ಟುಹಬ್ಬ ಆಚರಿಸುವುದಿಲ್ಲಾ! ಹಾಗು ಮನಸ್ಸು ಇಲ್ಲಾ!ಕಾರಣ ಪ್ರತಿ ಮಾರ್ಚ್ 17 ಕ್ಕೆ ತಪ್ಪದೆ ಬರುತ್ತಿದ್ದ #ಪುನೀತ ಕರೆ ಅಣ್ಣ happy birthday ಎಂದು, ಮತ್ತೆ ಎಂದು ಬರದಂತಾಯಿತು. ಪುನೀತನ ಜೊತೆ ಕೊನೆಯ ಚಿತ್ರ” ಎಂದು ಬರೆದುಕೊಂಡಿದ್ದು, ತಮ್ಮ ಜನ್ಮದಿನದಂದು ಈ ಬಾರಿ ಅಪ್ಪು ಅವರ ಕಡೆಯಿಂದ ಬರುತ್ತಿದ್ದ ಶುಭಾಶಯದ ಕರೆ ಇನ್ನಿಲ್ಲ ಎನ್ನುತ್ತಾ ಅವರೊಂದಿಗೆ ತೆಗೆಸಿಕೊಂಡ ಕೊನೆಯ ಫೋಟೋವನ್ನು ಶೇರ್ ಮಾಡಿದ್ದಾರೆ.

Leave a Reply

Your email address will not be published.