ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರ ಅಗಲಿಕೆ ಅಭಿಮಾನಿಗಳ ಪಾಲಿಗೆ ಇನ್ನೂ ಕೂಡಾ ಅರಗಿಸಿಕೊಳ್ಳಲಾಗದ ಕಹಿ ಸತ್ಯವಾಗಿಯೇ ಉಳಿದಿದೆ. ಇನ್ನೊಂದು ಕಡೆ ಪುನೀತ್ ಅವರ ಈ ಅಕಾಲಿಕ ಸಾವು ಸಂಭವಿಸಲು ಪ್ರಮುಖವಾದ ಕಾರಣ ಡಾ. ರಮಣರಾವ್ ಅವರು ತೋರಿದ ನಿರ್ಲಕ್ಷ್ಯ ಎಂದು ಬೆಂಗಳೂರಿನಲ್ಲಿ ಈಗಾಗಲೇ ಒಂದು ದೂರು ದಾಖಲಾಗಿದೆ. ಇದರ ಮಧ್ಯೆ ಶಿವರಾಜ್ ಕುಮಾರ್ ಅವರ ಅಭಿಮಾನಿಗಳು ಸಹಾ ಡಾ.ರಮಣರಾವ್ ಅವರು ಒಂದು ಸುದ್ದಿ ಗೋಷ್ಠಿಯನ್ನು ನಡೆಸಿ ಎಲ್ಲಾ ಗೊಂದಲಗಳಿಗೂ ಸಹಾ ಸರಿಯಾದ ಉತ್ತರ ನೀಡುವ ಮೂಲಕ ಎಲ್ಲಾ ಪರಿಹರಿಸಬೇಕು ಎಂದು ಹೇಳಿದ್ದಾರೆ.
ಸದಾಶಿವ ನಗರದ ಠಾಣೆಯೊಂದರಲ್ಲಿ ವ್ಯಕ್ತಿಯೊಬ್ಬರು ಪುನೀತ್ ಅವರ ಅಕಾಲಿಕ ಸಾವಿಗೆ ಕಾರಣ ಡಾ.ರಮಣರಾವ್ ಅವರ ನಿರ್ಲಕ್ಷ್ಯವೇ ಕಾರಣ ಎಂದು ದೂರನ್ನು ದಾಖಲಿಸಿದ್ದಾರೆ. ಕುರುಬರ ಹಳ್ಳಿಯ ಅರುಣ್ ಪರಮೇಶ್ವರ್ ಎನ್ನುವವರೇ ದೂರನ್ನು ದಾಖಲಿಸಿರುವ ವ್ಯಕ್ತಿಯಾಗಿದ್ದಾರೆ. ತಜ್ಞರ ಅಭಿಪ್ರಾಯವನ್ನು ಪಡೆದ ನಂತರ ಮುಂದಿನ ಕ್ರಮವನ್ನು ಜರುಗಿಸಲಾಗುವುದು ಎಂದು ಪೋಲಿಸರು ತಿಳಿಸಿದ್ದಾರೆ ಎನ್ನಲಾಗಿದೆ. ಫೇಸ್ ಬುಕ್ ನಲ್ಲಿ ಆಲ್ ಇಂಡಿಯಾ ಡಾ ಶಿವರಾಜ್ ಕುಮಾರ್ಸ್ ಬಿಗ್ಗೆಸ್ಟ್ ಫ್ಯಾನ್ಸ್ ಕ್ಲಬ್ ಎನ್ನುವ ಪೇಜ್ ನಲ್ಲಿ ಸಹಾ ಅಭಿಮಾನಿಗಳು ಇಂತಹ ಅನುಮಾನ ಹೊರ ಹಾಕಿದ್ದಾರೆ.
ಡಾ.ರಮಣರಾವ್ ಅವರು ತಪ್ಪ ಮಾಡಿದ್ದಾರೋ, ಇಲ್ಲವೋ ಅದು ನಂತರದ ವಿಷಯ ಆದರೆ ಅದಕ್ಕಿಂತ ಮೊದಲು ಪುನೀತ್ ಅವರ ಸಾವಿನ ವಿಚಾರವಾಗಿ ಒಂದು ಪತ್ರಿಕಾಗೋಷ್ಠಿಯನ್ನು ನಡೆಸಿ ನೋವಿನಲ್ಲಿರುವ ಅಭಿಮಾನಿಗಳಿಗೆ ಹಾಗೂ ಸಮಸ್ತ ಕನ್ನಡಿಗರ ಮನಸ್ಸಿನಲ್ಲಿ ಎದ್ದಿರುವ ಅನುಮಾನಗಳು ಹಾಗೂ ಗೊಂದಲವನ್ನು ನಿವಾರಿಸಬೇಕಿದೆ. ಅದನ್ನು ಪೋಲಿಸರು ವಿಚಾರಿಸುತ್ತಾರೋ ಇಲ್ಲವೋ ಗೊತ್ತಿಲ್ಲ ಆದರೆ ಅಭಿಮಾನಿಗಳು ಅವರನ್ನು ವಿಚಾರಿಸಿಕೊಳ್ಳದೇ ಬಿಡುವುದಿಲ್ಲ ಎನ್ನುವ ಮಾತನ್ನು ಹೇಳಿದ್ದಾರೆ. ಪುನೀತ್ ಅವರ ಸಾವು ಅಭಿಮಾನಿಗಳನ್ನು ಖಂಡಿತ ಭಾವುಕರನ್ನಾಗಿಸಿದೆ.