ಪುನೀತ್ ಗೆ ಅಪಮಾನ: ಅಪಮಾನ ಮಾಡಿದ್ದ ನೀಚನ ಪರಿಸ್ಥಿತಿ ಇಂದು ಏನಾಗಿದೆ ಗೊತ್ತಾ?

Written by Soma Shekar

Published on:

---Join Our Channel---

ಪುನೀತ್ ರಾಜ್‍ಕುಮಾರ್ ಅವರ ನಿಧನದಿಂದ ಕನ್ನಡ ಸಿನಿಮಾ ರಂಗ ಮಾತ್ರವೇ ಅಲ್ಲದೇ ಇಡೀ ರಾಜ್ಯದಲ್ಲಿ ಒಂದು ಶೂನ್ಯ, ನೀರವ ಮೌನ ತುಂಬಿದೆ. ಪುನೀತ್ ಅವರ ಹಠಾತ್ ಸಾವು ಒಂದು ತೀರಲಾರದ ನಷ್ಟವಾಗಿದೆ. ಅಸಂಖ್ಯಾತ ಅಭಿಮಾನಿಗಳ ಪಾಲಿಗೆ ಇದು ಅರಗಿಸಿಕೊಳ್ಳಲಾಗದ ಸತ್ಯ, ಬೇಡ ಎಂದರೂ ಒಪ್ಪಲೇಬೇಕಾದ ವಾಸ್ತವವಾಗಿದೆ. ಪುನೀತ್ ಅವರ ಸಾವಿಗೆ ಇಡೀ ನಾಡು ಕಂಬನಿ ಮಿಡಿದಿದೆ. ಇನ್ನು ಪುನೀತ್ ಅವರ ಸಾವಿನ ಸಮಯದಲ್ಲಿ ಯಾವುದೇ ಅಹಿತಕರ ಘಟನೆ ನಡೆಯಬಾರದೆಂದು ಬೆಂಗಳೂರಿನಲ್ಲಿ ಅಂದು ಮದ್ಯ ನಿಷೇಧವನ್ನು ಮಾಡಲಾಗಿತ್ತು.

ಆದರೆ ಇಂತಹ ನೋವಿನ ಸಂದರ್ಭದಲ್ಲಿ ಸಹಾ ಕೆಲವು ಕಿಡಿಗೇಡಿ ತಮ್ಮ ವಿಕೃತಿ, ನೀಚತನವನ್ನು ಮೆರೆದಿದ್ದಾರೆ. ಸೋಶಿಯಲ್ ಮೀಡಿಯಾಗಳಲ್ಲಿ ಎಗ್ಗಿಲ್ಲದೇ ಏನನ್ನಾದರೂ ಬರೆಯಬಹುದು ಎಂದು ನೀಚತನ ಮೆರೆದವರಿಗೆ ಶಿಕ್ಷೆ ಖಂಡಿತ ಎನ್ನುವುದಕ್ಕೆ, ಅಂತಹವರಿಗೆ ಕಡಿವಾಣ ಹಾಕುವುದು ಅನಿವಾರ್ಯವಾಗಿದೆ. ಹೌದು ಪುನೀತ್ ಅವರು ನಿಧನರಾದ ದಿನ ಮದ್ಯ ನಿಷೇಧವಿದ್ದರೂ, ಹೇಗೋ ಮದ್ಯ ಖರೀದಿ ಮಾಡಿದ ಕಿಡಿಗೋಡಿಯೊಬ್ಬ ಅವಹೇಳನಕಾರಿ ಪೋಸ್ಟ್ ಒಂದು ಬರೆದುಕೊಂಡು ಅದನ್ನು ಶೇರ್ ಮಾಡಿದ್ದನು.

ನಮ್ಮನ್ನು ಯಾರು ತಡೆಯಲು ಸಾಧ್ಯವಿಲ್ಲ. ಅವರನ್ನು ನೀವು ನೆನಪಿನಲ್ಲಿ ಇಟ್ಟುಕೊಳ್ಳಿ, ನಾವು ಮದ್ಯ ಸೇವನೆ ಮಾಡಿ, ಆತನನ್ನು ಸಮಾಧಿ ಮಾಡುತ್ತೇವೆ ಎಂದು ಬರೆದುಕೊಂಡಿದ್ದ. ಈ ಪೋಸ್ಟ್ ವೈರಲ್ ಆಗಿ ಅಭಿಮಾನಿಗಳ ಆ ಕ್ರೋ ಶಕ್ಕೆ ಕಾರಣವಾಗಿತ್ತು. ಅಲ್ಲದೇ ನಟ ಕಿಚ್ಚ ಸುದೀಪ್ ಅವರ ಮಗಳು ಸಾನ್ವಿ ಅವರು ಕೂಡಾ ಈ ವಿಷಯ ಹಂಚಿಕೊಂಡು ತಮ್ಮ ಅಸಮಾಧಾನವನ್ನು ಮತ್ತು ಸಿಟ್ಟನ್ನು ಹೊರಹಾಕಿ, ಮಾನವೀಯತೆ ಇದೆಯೇ? ಇಂತಹವರಿಗೆ ಎಂದು ಪ್ರಶ್ನಿಸಿದ್ದರು.

ಆರೋಪಿಯನ್ನು ಬಂಧಿಸುವಂತೆ ಪೋಲಿಸರಿಗೆ ಸಾಕಷ್ಟು ಒತ್ತಾಯ ಬಂದ ಹಿನ್ನೆಲೆಯಲ್ಲಿ ಪೋಲಿಸರು ಸಾರ್ವಜನಿಕರ ಒತ್ತಡಕ್ಕೆ ಮಣಿದು ಬೆಂಗಳೂರು ಪೋಲಿಸರು ಆರೋಪಿಯನ್ನು ಬಂಧಿಸಿದ್ದಾರೆ. ಈ ವಿಚಾರವನ್ನು ಸ್ವತಃ ಕಮೀಷನರ್ ಕಮಲ್ ಪಂತ್ ಅವರು ತಿಳಿಸಿದ್ದು, ಇನ್ನು ಆರೋಪಿ ಉತ್ತರ ಭಾರತ ಮೂಲಕ ವ್ಯಕ್ತಿ ಎನ್ನಲಾಗಿದ್ದು, ರಿತ್ವಿಕ್ ಹೆಸರಿನ ಸೋಶಿಯಲ್ ಮೀಡಿಯಾ ಪ್ರೊಫೈಲ್ ನಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದ್ದ. ಇಂತಹ ನೀಚ ಕೃತ್ಯ ಮೆರೆಯುವವರಿಗೆ ಖಂಡಿತ ಕಡಿವಾಣ ಹಾಕಬೇಕಿದೆ.

Leave a Comment