ಪುನೀತ್ ಅವರ 11 ನೇ ದಿನದ ಕಾರ್ಯದಂದೇ ವಿನೋದ್ ರಾಜ್ ಅವರು ಏನು ಮಾಡಿದ್ದಾರೆ ನೋಡಿ

Entertainment Featured-Articles News
79 Views

ಕನ್ನಡ ಚಿತ್ರರಂಗದ ಪವರ್ ಸ್ಟಾರ್ ಎಂದು ಹೆಸರನ್ನು ಗಳಿಸಿದ್ದ ನಟ ಪುನೀತ್ ರಾಜಕುಮಾರ್ ಅವರು ಇಹಲೋಕ ವನ್ನು ತೋರಿಸಿ ಇಂದಿಗೆ ಹನ್ನೊಂದನೇ ದಿನ. ಇಂದು ಅವರ ಕುಟುಂಬ ವರ್ಗದವರೆಲ್ಲರೂ ಸೇರಿ ನೋವಿನ ನಡುವೆಯೇ, ಕಂಠೀರವ ಕ್ರೀಡಾಂಗಣದ ಆವರಣದಲ್ಲಿ ಇರುವಂತಹ ಪುನೀತ್ ರಾಜಕುಮಾರ್ ಅವರ ಸಮಾಧಿ ಸ್ಥಳಕ್ಕೆ ಭೇಟಿ ನೀಡಿ 11ನೇ ದಿನದ ಕಾರ್ಯಗಳನ್ನು ನೆರವೇರಿಸಿದ್ದಾರೆ. ಈ ವೇಳೆ ಕನ್ನಡ ಚಿತ್ರರಂಗದ ಹಲವು ಕಲಾವಿದರು ಅವರ ಸಮಾಧಿಗೆ ಭೇಟಿ ನೀಡಿ ತಮ್ಮ ನಮನವನ್ನು ಅರ್ಪಿಸಿದ್ದಾರೆ. ಅಲ್ಲದೇ ಪ್ರತಿದಿನ ಸಮಾಧಿ ಸ್ಥಳಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಭೇಟಿ ನೀಡಿ, ನಮನ ಸಲ್ಲಿಸುತ್ತಿದ್ದಾರೆ.

ಇಂದು ಹನ್ನೊಂದನೇ ದಿನದ ಕಾರ್ಯದ ನಿಮಿತ್ತ ನಟ ವಿನೋದ್ ರಾಜ್ ರವರು ಶ್ರೀರಂಗಪಟ್ಟಣದ ಗಂಜಾಮ್ ನ ಬಳಿ ಇರುವಂತಹ ಸಂಗಮದಲ್ಲಿ ಪುನೀತ್ ರಾಜ್‍ಕುಮಾರ್ ಅವರಿಗಾಗಿ ತಾನು ವೈದಿಕ ಕ್ರಿಯಾ ಅಪರ ಕರ್ಮವನ್ನು ನೆರವೇರಿಸಿದ್ದಾರೆ. ಹೌದು, ವಿನೋದ್ ರಾಜ್ ಅವರ ತಮ್ಮ ತಾಯಿ, ಹಿರಿಯ ನಟಿ ಲೀಲಾವತಿ ಹಾಗೂ ತಮ್ಮ ಸಮೀಪದ ಬಂಧುಗಳ ಜೊತೆಗೆ ಸಂಗಮದ ಕಾವೇರಿ ನದಿ ತೀರಕ್ಕೆ ಆಗಮಿಸಿದ್ದರು. ನದಿ ತೀರದಲ್ಲಿ ಅವರು ಅಗಲಿದ ನಟ ಪುನೀತ್ ರಾಜಕುಮಾರ್ ಗೆ ವೈದಿಕ ಪೂಜಾ ಕೈಂಕರ್ಯವನ್ನು ನೆರವೇರಿಸಿದ್ದಾರೆ.

ಪೂಜಾ ಕೈಂಕರ್ಯವನ್ನು ನಡೆಸಿದ ಕಡೆಯಲ್ಲೇ ಅವರು ನಾರಾಯಣ ಬಲಿ ಪೂಜೆಯನ್ನು ನೆರವೇರಿಸಿ ಕಾವೇರಿ ನದಿಯಲ್ಲಿ ತರ್ಪಣವನ್ನು ಬಿಡುವ ಮೂಲಕ ಪುನೀತ್ ಅವರ ಆತ್ಮಕ್ಕೆ ಶಾಂತಿಯನ್ನು ಕೋರಿದ್ದಾರೆ. ಪುನೀತ್ ಅವರ ಅಗಲಿಕೆಯಿಂದ ಇಡೀ ರಾಜ್ಯ ಹಾಗೂ ವಿಶೇಷವಾಗಿ ಪುನೀತ್ ಅವರ ಅಭಿಮಾನಿಗಳು ಬೇಸರದಲ್ಲಿ ಇದ್ದು, ಈಗಾಗಲೇ 11 ದಿನಗಳು ಕಳೆದರೂ ಕೂಡಾ ಪುನೀತ್ ಅವರು ಇನ್ನಿಲ್ಲ ಎನ್ನುವ ವಾಸ್ತವವನ್ನು ಒಪ್ಪಿಕೊಳ್ಳುವುದು ಅನೇಕರಿಗೆ ಕಷ್ಟವಾಗಿದೆ. ಅವರಿಗಾಗಿ ಅನೇಕರು ಕಂಬನಿಗರೆಯುತ್ತಿದ್ದಾರೆ.

Leave a Reply

Your email address will not be published. Required fields are marked *