ಪುನೀತ್ ಅವರ ಆ ಜವಾಬ್ದಾರಿ ಇನ್ಮುಂದೆ ನನ್ನದು: ಸಂಚಲನ ನಿರ್ಣಯ ಘೋಷಣೆ ಮಾಡಿದ ತಮಿಳು ನಟ ವಿಶಾಲ್

Written by Soma Shekar

Published on:

---Join Our Channel---

ಅಗಲಿದ ನಟ ಪುನೀತ್ ರಾಜ್‍ಕುಮಾರ್ ಅವರ ಸಾವಿನ ನೋವು ಅಷ್ಟು ಸುಲಭವಾಗಿ ಮಾಸುವುದಿಲ್ಲ. ಪುನೀತ್ ರಾಜ್‍ಕುಮಾರ್ ಅವರು ಪ್ರಚಾರ ಪ್ರಿಯ ಎಂದಿಗೂ ಅಲ್ಲ. ಅವರು ಪ್ರಚಾರ ಬಯಸದೇ ಮಾಡುತ್ತಿದ್ದ ಸಾಮಾಜಿಕ ಕಾರ್ಯಗಳು ಅದೆಷ್ಟೋ. ಅಂತಹ ಕಾರ್ಯಗಳಲ್ಲಿ ಒಂದು ಶಿಕ್ಷಣ. ಹೌದು ಪುನೀತ್ ಅವರು ಸಾವಿರಾರು ಮಕ್ಕಳ ಶಿಕ್ಷಣದ ಜವಾಬ್ದಾರಿಯನ್ನು ತನ್ನದೆಂದು ನಿಭಾಯಿಸುತ್ತಿದ್ದರು. ಈಗ ಪುನೀತ್ ಅವರ ಅಗಲಿಕೆಯ ನಂತರ ಅವರ ಈ ಜವಾಬ್ದಾರಿಯನ್ನು ನಾನು ನಿಭಾಯಿಸುವೆ ಎಂದು ಮುಂದೆ ಬಂದಿದ್ದಾರೆ ತಮಿಳು ನಟ ವಿಶಾಲ್.

ಭಾನುವಾರ ರಾತ್ರಿ ನಡೆದಂತಹ ಶ್ರದ್ಧಾಂಜಲಿ ಸಭೆಯಲ್ಲಿ ಮಾತ‌ನಾಡಿದ ನಟ ವಿಶಾಲ್ ಅವರು ಬಹಳ ಸಹೃದಯವಂತಿಕೆಯನ್ನು ಮೆರೆಯುತ್ತಾ, ಅಷ್ಟೇ ವಿನಮ್ರತೆಯಿಂದ, ಪುನೀತ್ ರಾಜ್ ಕುಮಾರ್ ಅವರು ಓದಿಸುತ್ತಿದ್ದ 1800 ಮಕ್ಕಳ ಶಿಕ್ಷಣದ ಜವಾಬ್ದಾರಿ ನಾನು ಹೊರುವೆ ಎನ್ನುವ ಘೋಷಣೆಯನ್ನು ಮಾಡಿದ್ದಾರೆ. ಮುಂದಿನ ವರ್ಷದಿಂದ ಆ 1800 ಮಕ್ಕಳ ಹೊಣೆ ನನ್ನದು ಎಂದು ವಿಶಾಲ್ ಹೇಳುವ ಮೂಲಕ ಎಲ್ಲರ ಮನಸ್ಸನ್ನು ಗೆದಿದ್ದಾರೆ. ಅವರು ಆಡಿದ ಈ ಮಾತಿನ ವೀಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಪುನೀತ್ ರಾಜ್‍ಕುಮಾರ್ ಅವರು ಸಹಾಯ ನೀಡುತ್ತಿದ್ದ ಸಾವಿರಾರು ಮಕ್ಕಳ ಶಿಕ್ಷಣದ ಜವಾಬ್ದಾರಿ ತಾನು ಹೊರುತ್ತೇನೆ ಎಂದು ವಿಶಾಲ್ ಘೋಷಣೆ ಮಾಡಿದ ಬೆನ್ನಲ್ಲೇ ಅವರಿಗೆ ಅಪಾರವಾದ ಮೆಚ್ಚುಗೆಗಳು, ಶ್ಲಾಘನೆಗಳು ಹರಿದು ಬರುತ್ತಿವೆ. ಇನ್ನೊಂದು ಕಡೆ ಅಪ್ಪು ಅವರ ನಿಧನಾನಂತರ ಅವರು ಪ್ರಚಾರ ಬಯಸದೇ ಮಾಡುತ್ತಿದ್ದ ಸಮಾಜಮುಖಿ ಕಾರ್ಯಗಳ ವಿಷಯ ಒಂದೊಂದಾಗಿ ಹೊರ ಬರುತ್ತಿದ್ದು, ಅವರ ಮೇಲಿನ ಗೌರವ ಇನ್ನೂ ಹೆಚ್ಚಾಗುತ್ತಿದೆ. ಪುನೀತ್ ಅವರ ಮಾನವೀಯ ಕಾರ್ಯ ಕಂಡು ಜನ ಅಚ್ಚರಿ ಪಡುತ್ತಿದ್ದಾರೆ.

Leave a Comment