ಪುನರುಜ್ಜೀವನದ ಆಧ್ಯಾತ್ಮಿಕ ಪಯಣ: ವಾರಣಾಸಿಯ ಬಗ್ಗೆ ಬ್ಯಾಸ್ಕೆಟ್ ಬಾಲ್ ಸ್ಟಾರ್ ಮಾತುಗಳು!!

Entertainment Featured-Articles News

ಬ್ಯಾಸ್ಕೆಟ್ ಬಾಲ್ ನ ಸ್ಟಾರ್ ಆಟಗಾರ ಎನಿಸಿಕೊಂಡಿರುವ ಡ್ವಿಟ್ ಹೊವಾರ್ಡ್ ಅವರು ಭಾರತದ ಪ್ರಮುಖ ಧಾರ್ಮಿಕ ಕ್ಷೇತ್ರವಾದ ವಾರಣಾಸಿಗೆ ಭೇಟಿ ನೀಡಿದ ನಂತರ, ಈ ಪವಿತ್ರ ‌ನಗರದಲ್ಲಿ ತಂದಿರುವ ಸುಧಾರಣೆಗಳನ್ನು ಕಂಡು, ಪ್ರಧಾನಿ ನರೇಂದ್ರ ಮೋದಿಯವರನ್ನು ಹೊಗಳುವ ಮೂಲಕ ಎಲ್ಲರ ಗಮನವನ್ನು ಸೆಳೆದಿದ್ದಾರೆ. ಅವರು ಶೇರ್ ಮಾಡಿದ ಪೋಸ್ಟ್ ಒಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅನೇಕರು ಡ್ವಿಟ್ ಅವರ ಪೋಸ್ಟ್ ನೋಡಿ ಖುಷಿಗೊಂಡಿದ್ದಾರೆ. ಅವರ ಪೋಸ್ಟ್ ಗೆ ತಮ್ಮ ಕಡೆಯಿಂದ ಮೆಚ್ಚುಗೆಗಳನ್ನು ಸಹಾ ನೀಡುತ್ತಿದ್ದಾರೆ.

ಡ್ವಿಟ್ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ತಮ್ಮ ಪೋಸ್ಟ್ ನಲ್ಲಿ, ನಾನು ವಾರಣಾಸಿಗೆ ಭೇಟಿ ನೀಡಿದ ಬಳಿಕ ನನ್ನಲ್ಲಿ ಒಂದು ಶಾಂತಿ ನೆಲೆಸಿದೆ. ಆತ್ಮವನ್ನು ಪುನರುಜ್ಜೀವನಗೊಳಿಸಿದ ಆಧ್ಯಾತ್ಮಿಕ ಯಾತ್ರೆ ಇದಾಗಿದ್ದು, ಈ ಪವಿತ್ರವಾದ ನಗರವನ್ನು ಇಷ್ಟೊಂದು ಸುಧಾರಿಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಅಭಿನಂದನೆಗಳು. ವಾರಣಾಸಿಯು ಅನೇಕ ದಂತಕಥೆಗಳಿಗೆ ಸ್ಪೂರ್ತಿಯನ್ನು ನೀಡಿರುವ ತಾಣವಾಗಿದ್ದು, ನಾನು ವಾರಣಾಸಿಗೆ ಕೃತಜ್ಞನಾಗಿದ್ದೇನೆ.

ಈ ಪರಮ ಪವಿತ್ರವಾದ ನಗರದ ಪುನರ್ಜನ್ಮವು ಇನ್ನೂ ಅನೇಕರಿಗೆ ಪ್ರೇರಣೆಗನ್ನು ನೀಡುತ್ತದೆ ಎನ್ನುವ ಬಗ್ಗೆ ನನಗೆ ನಂಬಿಕೆಯಿದೆ ಎನ್ನುವ ಸಾಲುಗಳನ್ನು ಬರೆದುಕೊಂಡಿದ್ದಾರೆ.‌ ಇನ್ನು ಉತ್ತರ ಪ್ರದೇಶದ ಪ್ರವಾಸೋದ್ಯಮ ಇಲಾಖೆಯು ಸಹಾ ಬ್ಯಾಸ್ಕೆಟ್ ಬಾಲ್ ಆಟಗಾರ ಡ್ವಿಟ್ ಹೊವಾರ್ಡ್ ಅವರ ವಾರಣಾಸಿಯ ಭೇಟಿಯ ವಿಷಯವನ್ನು ಸಹ ಖಚಿತ ಪಡಿಸಿದೆ. ನಿನ್ನೆ ಡ್ವಿಟ್ ಅವರು ಗಂಗಾ ಆರತಿಯಲ್ಲೂ ಭಾಗವಹಿಸಿದ್ದರು ಎನ್ನಲಾಗಿದೆ.

ಆಧ್ಯಾತ್ಮಿಕ ಹಾಗೂ ಸಾಂಸ್ಕೃತಿಕತೆಯ ಪ್ರಾಚೀನ ನಗರವಾದ ವಾರಣಾಸಿಗೆ ಭೇಟಿ ನೀಡಿದ ತಮ್ಮ ಅನುಭವವನ್ನು ಡ್ವಿಟ್ ಹಂಚಿಕೊಂಡಿದ್ದಾರೆ ಎನ್ನುವ ವಿಷಯವನ್ನು ಉತ್ತರ ಪ್ರದೇಶದ ಪ್ರವಾಸೋದ್ಯಮ ಇಲಾಖೆಯು ಸಹಾ ಟ್ವೀಟ್ ಮಾಡಿ ತಿಳಿಸಿದೆ. ಡ್ವಿಟ್ ಅವರ ಪೋಸ್ಟ್ ವೈರಲ್ ಆದ ಮೇಲೆ ಅನೇಕರು ವಾರಣಾಸಿ ಬಗ್ಗೆ ಅವರಾಡಿದ ಮಾತುಗಳಿಗೆ ಮೆಚ್ಚುಗೆ ಸೂಚಿಸಿದ್ದಾರೆ.

Leave a Reply

Your email address will not be published.