ಪುಟ್ನಂಜ ಸಿನಿಮಾ ನಾಯಕಿ, ಬಹುಭಾಷಾ ತಾರೆ ನಟಿ ಮೀನಾಗೆ ಪತಿ ವಿಯೋಗ: ಮೀನಾ ಅವರ ಪತಿ ಅಕಾಲಿಕ ನಿಧನ

Entertainment Featured-Articles Movies News

ದಕ್ಷಿಣ ಸಿನಿಮಾ ರಂಗದಲ್ಲಿ ತೊಂಬತ್ತರ ದಶಕದಲ್ಲಿ ಬಹು ಬೇಡಿಕೆಯ ನಟಿಯಾಗಿ, ಸ್ಟಾರ್ ನಟಿಯಾಗಿ ಮಿಂಚಿದ್ದ ನಟಿ ಮೀನಾ ಬಹು ಭಾಷಾ ನಟಿ ಕೂಡಾ ಹೌದು. ಇಂದಿಗೂ ಸಹಾ ಉತ್ತಮವಾದ ಪಾತ್ರಗಳಿಗೆ ಜೀವ ತುಂಬುತ್ತಾ ಸಿನಿಮಾ ರಂಗದಲ್ಲಿ ಸಕ್ರಿಯವಾಗಿರುವ ನಟಿ ಮೀನಾ ಅವರ ಬದುಕಿನಲ್ಲಿ ಒಂದು ವಿಷಾದ ಎದುರಾಗಿದೆ. ಹೌದು, ನಟಿ ಮೀನಾ ಅವರ ಪತಿ ವಿದ್ಯಾಸಾಗರ್ ಅವರು ನಿಧನರಾಗಿದ್ದಾರೆ. ಮೀನಾ ಅವರ ಪತಿ ವಿದ್ಯಾಸಾಗರ್ ಅವರನ್ನು ಅನಾರೋಗ್ಯದ ಕಾರಣ ಚೆನ್ನೈನ ಖಾಸಗಿ ಆಸ್ಪತ್ರೆಯೊಂದರಲ್ಲಿ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದ ಕಾರಣ ಅವರು ನಿಧನರಾಗಿದ್ದಾರೆ.

ಮೀನಾ ಅವರ ಪತಿ ವಿದ್ಯಾ ಸಾಗರ್ ಅವರಿಗೆ ಕಳೆದ ಕೆಲವು ವರ್ಷಗಳಿಂದಲೂ ಸಹಾ ಶ್ವಾಸಕೋಶದ ಸಮಸ್ಯೆ ಕಾಡುತ್ತಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ. ಕಳೆದ ಜನವರಿಯಲ್ಲಿ ನಟಿಯ ಕುಟುಂಬ ಕೋವಿಡ್ 19 ಪರೀಕ್ಷೆಗೆ ಸಹಾ ಒಳಗಾಗಿತ್ತು. ಆಗಲೇ ಮೀನಾ ಅವರ ಪತಿ ವಿದ್ಯಾಸಾಗರ್ ಅವರಿಗೆ ಕೋವಿಡ್ ಉಲ್ಬಣಗೊಂಡಿತ್ತು ಎನ್ನಲಾಗಿದ್ದು, ಸೂಕ್ತ ಚಿಕಿತ್ಸೆಯ ನಂತರ ಅವರ ಪತಿ ಚೇತರಿಸಿಕೊಂಡು, ಆರೋಗ್ಯದಲ್ಲಿ ಸ್ವಲ್ಪ ಸುಧಾರಣೆ ಕಂಡು ಬಂದಿತ್ತು. ಆದರೆ ಅವರಲ್ಲಿ ಸೋಂಕು ಮತ್ತೆ ಕಾಣಿಸಿಕೊಂಡ ಪರಿಣಾಮ ಅವರನ್ನು ಸೂಕ್ತ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

ಆಸ್ಪತ್ರೆಯಲ್ಲಿ ವೈದ್ಯರು ಕೆಲವು ವಾರಗಳ ಹಿಂದೆಯೇ ಶ್ವಾಸಕೋಶ ಕಸಿ ಮಾಡಿಸಿಕೊಳ್ಳುವ ಸಲಹೆಯನ್ನು ನೀಡಿದ್ದರೆನ್ನಲಾಗಿದ್ದು, ಸೂಕ್ತ ಸಮಯದಲ್ಲಿ ದಾನಿಗಳು ಸಿಕ್ಕಿಲ್ಲ ಎನ್ನಲಾಗಿದೆ. ವೈದ್ಯರು ಔಷಧಿಗಳ ಮೂಲಕವೇ ಅವರ ಆರೋಗ್ಯದಲ್ಲಿ ಸುಧಾರಣೆಯನ್ನು ತರುವ ಪ್ರಯತ್ನವನ್ನು ಮಾಡುತ್ತಲಿದ್ದರು, ಆದರೆ ಅದು ಪರಿಣಾಮಕಾರಿ ಪ್ರಭಾವ ಬೀರದ ಕಾರಣ, ಚಿಕಿತ್ಸೆ ಫಲಕಾರಿಯಾಗದೇ ವಿದ್ಯಾಸಾಗರ್ ಅವರು ಮೃತಪಟ್ಟಿದ್ದಾರೆ. ವಿದ್ಯಾ ಸಾಗರ್ ಅವರ ಅಕಾಲಿಕ ನಿಧನಕ್ಕೆ ಚಿತ್ರರಂಗದ ಗಣ್ಯರು ಹಾಗೂ ನಟಿಯ ಅಭಿಮಾನಿಗಳು ಸಂತಾಪ ಸೂಚಿಸುತ್ತಿದ್ದಾರೆ.

Leave a Reply

Your email address will not be published.