ಪುಟ್ಟ ಲಕ್ಷ್ಮೀ ಆಯ್ರಾ ಹಬ್ಬಕ್ಕೆ ಸಹಾಯ ಮಾಡಿದ್ಲು: ರಾಖಿ ಭಾಯ್ ಮನೆಯಲ್ಲಿ ವರ ಮಹಾಲಕ್ಮೀ ಹಬ್ಬದ ಸಂಭ್ರಮ!!

Entertainment Featured-Articles Movies News

ಸ್ಯಾಂಡಲ್ವುಡ್ ನ ಸಿಂಡ್ರೆಲ್ಲಾ‌ ಖ್ಯಾತಿಯ ನಟಿ ರಾಧಿಕಾ ಪಂಡಿತ್ ಕನ್ನಡ ಸಿನಿಮಾ ರಂಗದಲ್ಲಿ ಸ್ಟಾರ್ ನಟಿಯಾಗಿ ಮೆರೆದವರು. ಕಿರುತೆರೆಯಿಂದ ಬೆಳ್ಳಿ ತೆರೆಗೆ ಪಾದಾರ್ಪಣೆ ಮಾಡಿದ ನಟಿ ಕನ್ನಡದ ಸ್ಟಾರ್ ನಟರ ಜೊತೆಗೆ ತೆರೆಯನ್ನು ಹಂಚಿಕೊಂಡು ದೊಡ್ಡ ಸದ್ದನ್ನು ಮಾಡಿದ ನಟಿ. ವೃತ್ತಿ ಜೀವನದಲ್ಲಿ ಸಾಕಷ್ಟು ಬ್ಯುಸಿಯಾಗಿರುವಾಗಲೇ ಅವರು ರಾಕಿಂಗ್ ಸ್ಟಾರ್ ಯಶ್ ಅವರ ಜೊತೆಗೆ ಸಪ್ತಪದಿ ತುಳಿದು ದಾಂಪತ್ಯ ಜೀವನಕ್ಕೆ ಅಡಿಯಿಟ್ಟರು. ಮದುವೆಯ ನಂತರ ಅವರು ಸಿನಿಮಾ ರಂಗದಿಂದ ಅಂತರವನ್ನು ಕಾಯ್ದುಕೊಂಡು ಬಂದಿದ್ದು, ಮನೆ, ಗಂಡ, ಮಕ್ಕಳು ಎಂದು ಕುಟುಂಬದ ಜವಾಬ್ದಾರಿಯನ್ನು ಹೊತ್ತು ಖುಷಿಯಾಗಿದ್ದಾರೆ.

ನಟಿ ರಾಧಿಕಾ ಪಂಡಿತ್ ಅವರು ಸಿನಿಮಾ ರಂಗಕ್ಕೆ ಯಾವಾಗ ಕಮ್ ಬ್ಯಾಕ್ ಮಾಡಲಿದ್ದಾರೆ ಎನ್ನುವ ನಿರೀಕ್ಷೆ ಅವರ ಅಭಿಮಾನಿಗಳಲ್ಲಿ ಸಹಜವಾಗಿಯೇ ಇದೆ. ರಾಧಿಕಾ ಪಂಡಿತ್ ಅವರು ಸಿನಿಮಾ ರಂಗದಿಂದ ದೂರ ಉಳಿದಿದ್ದರೂ ಕೂಡಾ ಅವರ ಅಭಿಮಾನಿಗಳ ಸಂಖ್ಯೆ ಕಡಿಮೆಯಾಗಿಲ್ಲ. ನಟಿ ರಾಧಿಕಾ ಪಂಡಿತ್ ಅವರು ಸಹಾ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿದ್ದು, ಅಲ್ಲಿ ತಮ್ಮ ಅಭಿಮಾನಿಗಳ ಖುಷಿಗಾಗಿ ಆಗಾಗ ತಮ್ಮ ಹಾಗೂ ತಮ್ಮ ಮುದ್ದು ಮಕ್ಕಳ ಫೋಟೋ ಮತ್ತು ವೀಡಿಯೋಗಳನ್ನು ಶೇರ್ ಮಾಡಿಕೊಂಡು ಖುಷಿ ಪಡುತ್ತಾರೆ. ಅವರ ಅಭಿಮಾನಿಗಳು ಸಹಾ ಅಪಾರ ಮೆಚ್ಚುಗೆ ನೀಡುತ್ತಾರೆ.

ಪ್ರಸ್ತುತ ನಟಿ ರಾಧಿಕಾ ಪಂಡಿತ್ ಅವರು ವರಮಹಾಲಕ್ಷ್ಮಿ ಹಬ್ಬದ ಹಿನ್ನೆಲೆಯಲ್ಲಿ ತಮ್ಮ ಇಬ್ಬರು ಮುದ್ದು ಮಕ್ಕಳೊಂದಿಗೆ ಸಾಂಪ್ರದಾಯಿಕ ಉಡುಗೆ ತೊಟ್ಟು ಹಬ್ಬವನ್ನು ಆಚರಣೆ ಮಾಡಿದ ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದು, ಈ ಫೋಟೋಗಳು ಈಗ ವೈರಲ್ ಆಗುತ್ತಾ ಸಾಗಿವೆ. ಅಭಿಮಾನಿಗಳು ರಾಧಿಕಾ ಅವರ ಮಗಳು ಪುಟ್ಟ ಮಹಾಲಕ್ಷ್ಮೀ ಆಯ್ರಾ ಳನ್ನು ನೋಡಿ ಖುಷಿಯಾಗಿದ್ದಾರೆ. ಕಾಮೆಂಟ್ ಗಳನ್ನು ಮಾಡಿ ರಾಧಿಕಾ ಹಾಗೂ ಅವರ ಪುಟಾಣಿಗಳಿಗೆ ಹಬ್ಬದ ಶುಭಾಶಯವನ್ನು ಕೋರಿದ್ದಾರೆ ಹಾಗೆ ಮಕ್ಕಳ ಬಗ್ಗೆ ಪ್ರೀತಿಯಿಂದ ಕಾಮೆಂಟ್ ಗಳನ್ನು ಮಾಡಿದ್ದಾರೆ.

ಪ್ರತಿಯೊಂದು ಹಬ್ಬವನ್ನು ಸಹಾ ಬಹಳ‌ ಖುಷಿಯಿಂದ ಮತ್ತು ಸಂಭ್ರಮದಿಂದ ಆಚರಿಸುತ್ತಾರೆ ರಾಖಿ ಭಾಯ್ ಕುಟುಂಬದವರು. ಅದರಂತೆ ಈ ಬಾರಿಯೂ ರಾಧಿಕಾ ಪಂಡಿತ್ ತಮ್ಮ‌ ಪುಟ್ಟ ಲಕ್ಷ್ಮೀ ಆಯ್ರಾ ಮತ್ತು ಮಗ ಯಥರ್ವನ ಜೊತೆಗೆ ಹಬ್ಬವನ್ನು ಸಂಭ್ರಮಿಸಿದ್ದಾರೆ. ಸಾಂಪ್ರದಾಯಿಕ ಉಡುಗೆಗಳಲ್ಲಿ ತಾಯಿ ಮಕ್ಕಳು ಬಹಳ ಚೆನ್ನಾಗಿ ಕಾಣುತ್ತಿದ್ದು, ಈ ಫೋಟೋಗಳನ್ನು ನೋಡಿ ಅಭಿಮಾನಿಗಳು ಸಿಕ್ಕಾಪಟ್ಟೆ ಖುಷಿ ಪಡುತ್ತಿದ್ದಾರೆ. ರಾಧಿಕಾ ಅವರು ನಮ್ಮ ಮನೆಯ ಪುಟ್ಟ ಲಕ್ಷ್ಮೀ ನನಗೆ ನಿನ್ನೆ ಹಬ್ಬಕ್ಕೆ ಸಹಾಯ ಮಾಡಿದಳು ಎಂದು ಬರೆದುಕೊಂಡು ಖುಷಿಯನ್ನು ಹಂಚಿಕೊಂಡಿದ್ದಾರೆ.

Leave a Reply

Your email address will not be published. Required fields are marked *