ಪುಟ್ಟಕ್ಕನ ಮಕ್ಕಳು ಸೀರಿಯಲ್ ನ ಪ್ರಮುಖ ಪಾತ್ರದಿಂದ ಹೊರಬಂದ ನಟಿ? ಅಭಿಮಾನಿಗಳು ಶಾಕ್!!

Entertainment Featured-Articles Movies News

ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿ ಮಾತ್ರವೇ ಅಲ್ಲದೇ ಟಾಪ್ ಸೀರಿಯಲ್ ಗಳಲ್ಲಿ ಬಹಳ ಕಡಿಮೆ ಅವಧಿಯಲ್ಲಿ ಸ್ಥಾನವನ್ನು ಗಳಿಸಿಕೊಂಡು, ಅಪಾರವಾದ ಜನಮೆಚ್ಚುಗೆಯನ್ನು ತನ್ನದಾಗಿಸಿಕೊಂಡು ಮುಂದೆ ಸಾಗುತ್ತಿರುವ ಧಾರಾವಾಹಿ ಪುಟ್ಟಕ್ಕನ ಮಕ್ಕಳು. ಈ ಧಾರಾವಾಹಿಯ ಮೂಲಕ ಕನ್ನಡ ಸಿನಿಮಾರಂಗದ ಪ್ರತಿಭಾವಂತ ನಟಿ, ಹಿರಿಯ ನಟಿ ಉಮಾಶ್ರೀ ಅವರು ಕಿರುತೆರೆಗೆ ಮತ್ತೊಮ್ಮೆ ಎಂಟ್ರಿ ನೀಡಿದ್ದಾರೆ. ಪುಟ್ಟಕ್ಕನ ಪಾತ್ರದಲ್ಲಿ ಇಂದು ಅವರು ನಾಡಿನ ಮನೆ ಮನೆಮಾತಾಗಿದ್ದಾರೆ.
ಪುಟ್ಟಕ್ಕನ ಪಾತ್ರಕ್ಕೆ ಉಮಾಶ್ರೀ ಅವರು ಜೀವ ತುಂಬಿದ್ದಾರೆ.

ಮೂರು ಜನ ಹೆಣ್ಣು ಮಕ್ಕಳನ್ನು ಗಂಡನ ಯಾವುದೇ ನೆರವಿಲ್ಲದೇ ತಾನೇ ಕಷ್ಟು ಪಟ್ಟು ಸಾಕಿ ಬೆಳೆಸಿರುವ, ಗಂಡ ಹಾಗೂ ಆತನ ಎರಡನೇ ಹೆಂಡತಿಯಿಂದ ನೋವುಗಳನ್ನು ಸಹಿಸಿಕೊಂಡು ಸ್ವಾಭಿಮಾನಿ ಬದುಕನ್ನು ಕಟ್ಟಿಕೊಂಡ ದಿಟ್ಟ ಹೆಣ್ಣಾಗಿ ಪುಟ್ಟಕ್ಕನ ಪಾತ್ರದಲ್ಲಿ ಉಮಾಶ್ರೀ ಅವರು ಮಿಂಚುತ್ತಿದ್ದು, ಅವರ ಪಾತ್ರಕ್ಕೆ ಜನರಿಂದ ವಿಶೇಷವಾದ ಗೌರವ, ಆದರಗಳು ಹರಿದು ಬರುತ್ತಿದ್ದು, ದಿನದಿಂದ ದಿನಕ್ಕೆ ಸೀರಿಯಲ್ ಇನ್ನಷ್ಟು ಯಶಸ್ಸನ್ನು ಪಡೆದುಕೊಳ್ಳುತ್ತಿದೆ.‌ ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ನಟಿ ಉಮಾಶ್ರೀ ಅವರಷ್ಟೇ ಪ್ರಧಾನವಾದ ಪಾತ್ರ ಬಡ್ಡಿ ಬಂಗಾರಮ್ಮನ ಪಾತ್ರ.

ಬಡ್ಡಿ ಬಂಗಾರಮ್ಮನ ಪಾತ್ರವನ್ನು ಮತ್ತೊಬ್ಬ ಕನ್ನಡದ ಜನಪ್ರಿಯ ನಟಿ ಮಂಜುಭಾಷಿಣಿ ಅವರು ಪೋಷಿಸುತ್ತಿದ್ದು, ಅವರು ಬಡ್ಡಿ ಬಂಗಾರಮ್ಮ ನ ಪಾತ್ರಕ್ಕೆ ಜೀವ ತುಂಬಿದ್ದಾರೆ. ಇನ್ನು ಈ ಧಾರಾವಾಹಿಯಲ್ಲಿ ಪ್ರತಿಯೊಂದು ಪಾತ್ರಕ್ಕೂ ಕೂಡಾ ಅದರದ್ದೇ ಆದ ಮಹತ್ವ ಮತ್ತು ವಿಶೇಷತೆ ಇದ್ದು, ಹಲವು ಪಾತ್ರಗಳು ಕಿರುತೆರೆಯ ಪ್ರೇಕ್ಷಕರ ಅಭಿಮಾನದ ಪಾತ್ರಗಳಾಗಿ ಬದಲಾಗಿವೆ. ಈ ಸೀರಿಯಲ್ ನ ಪಾತ್ರಧಾರಿ ಕಲಾವಿದರನ್ನು ಅವರ ಸೀರಿಯಲ್ ಪಾತ್ರದ ಹೆಸರಿನ ಮೂಲಕವೇ ಜನ ಗುರುತಿಸುವಷ್ಟು ಜನಪ್ರಿಯತೆ ಪಡೆದುಕೊಂಡಿವೆ.

ಕೆಲವೇ ದಿನಗಳ ಹಿಂದೆಯಷ್ಟೇ ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಬಡ್ಡಿ ಬಂಗಾರಮ್ಮ ನ ಅಳಿಯನ ಪಾತ್ರವಾದ ವಕೀಲ ಚಂದ್ರು ಪಾತ್ರದಲ್ಲಿ ನಟಿಸುತ್ತಿದ್ದ ಕಿರುತೆರೆಯ ಜನಪ್ರಿಯ ನಟ ಈ ಸೀರಿಯಲ್ ನ ತಮ್ಮ ಪಾತ್ರದಿಂದ ಹೊರ ಬಂದಿದ್ದರು. ಅನಂತರ ಆ ಪಾತ್ರಕ್ಕೆ ಬೇರೊಬ್ಬ ನಟನ ಎಂಟ್ರಿ ಕೂಡಾ ಆಗಿದೆ. ಈ ಬದಲಾವಣೆ ಪ್ರೇಕ್ಷಕರಿಗೆ ಅಚ್ಚರಿಯನ್ನು ಮೂಡಿಸಿತ್ತು. ಈಗ ಇದರ ಬೆನ್ನಲ್ಲೇ ಇದೇ ಧಾರಾವಾಹಿಯಿಂದ ಮತ್ತೊಬ್ಬ ನಟಿ ಹೊರಗೆ ಬಂದಿದ್ದಾರೆ ಎನ್ನುವ ಅನುಮಾನವೊಂದು ಪ್ರೇಕ್ಷಕರನ್ನು ಕಾಡುತ್ತಿದೆ.

ಹೌದು, ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ನಾಯಕ ಕಂಠಿಯನ್ನು ಇಷ್ಟಪಡುವ ಹುಡುಗಿಯಾಗಿ, ಬಂಗಾರಮ್ಮ ತನ್ನ ಸೊಸೆಯನ್ನಾಗಿ ಮಾಡಿಕೊಳ್ಳಲು ಬಯಸಿರುವ ಪೂರ್ವಿ ಪಾತ್ರ ಈಗಾಗಲೇ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದೆ. ಕಂಠಿಗೆ ಪೂರ್ವಿ ಇಷ್ಟ ಇಲ್ಲ ಆದರೆ ತಾಯಿಗೆ ಅದನ್ನು ಹೇಳಲು ಸಾಧ್ಯ ಇಲ್ಲ. ಪೂರ್ವಿ ಕಂಠಿಯನ್ನು ಇರಿಟೇಟ್ ಮಾಡುವ ಪಾತ್ರ. ಇಂತಹುದೊಂದು ಪಾತ್ರದಲ್ಲಿ ನಟಿ ಚಂದನ ಮಹಾಲಿಂಗಯ್ಯ ಅವರು ನಟಿಸುತ್ತಿದ್ದು, ಪೂರ್ವಿ ಪಾತ್ರದ ಮೂಲಕ ಪ್ರೇಕ್ಷಕರಿಗೆ ಮನರಂಜನೆಯನ್ನು ನೀಡುತ್ತಿದ್ದಾರೆ.

ಆದರೆ ಕಳೆದ ಕೆಲವು ದಿನಗಳಿಂದಲೂ ಈ ಪಾತ್ರ ಅಷ್ಟಾಗಿ ಕಾಣಿಸಿಕೊಳ್ಳುತ್ತಿಲ್ಲ. ಅಲ್ಲದೇ ನಟಿ ಚಂದನ ಮಹಾಲಿಂಗಯ್ಯ ಅವರು ತೆಲುಗಿನ ಒಂದು ಧಾರಾವಾಹಿಯಲ್ಲಿ ನಟಿಸುತ್ತಿರುವ ಕಾರಣ ಅವರು ಪುಟ್ಟಕ್ಕನ ಮಕ್ಕಳು ಧಾರಾವಾಹಿಯ ತಮ್ಮ ಪಾತ್ರದಿಂದ ಹೊರಗೆ ಬಂದಿರಬಹುದು ಎನ್ನುವ ಅನುಮಾನವೊಂದು ವೀಕ್ಷಕರಲ್ಲಿ ಮೂಡಿದೆ. ಅದೇನಾದರೂ ನಿಜವೇ ಆದಲ್ಲಿ ಪೂರ್ವಿ ಪಾತ್ರಕ್ಕೆ ಯಾವ ಹೊಸ ನಟಿಯ ಆಗಮನವಾಗಲಿದೆ ಎನ್ನುವುದು ಕೂಡಾ ಪ್ರೇಕ್ಷಕರ ಕುತೂಹಲಕ್ಕೆ ಕಾರಣವಾಗಿದೆ. ಆದರೆ ಈ ಕುರಿತಾಗಿ ಯಾವುದೇ ಅಧಿಕೃತ ಮಾಹಿತಿ ಇನ್ನೂ ಹೊರಬಂದಿಲ್ಲ.

Leave a Reply

Your email address will not be published.