ಪುಟ್ಟಕ್ಕನ ಮಕ್ಕಳು ಸೀರಿಯಲ್ ಪ್ರೇಕ್ಷಕರಿಗೆ ಬಿಗ್ ಶಾಕ್: ಪ್ರಮುಖ ಪಾತ್ರದಿಂದ ಹೊರ ನಡೆದ ನಟ !!

0 9

ಕನ್ನಡ ಕಿರುತೆರೆಯಲ್ಲಿ ಕನ್ನಡ ಚಿತ್ರರಂಗದ ಹಿರಿಯ ನಟಿ ಉಮಾಶ್ರೀಯವರು ಪ್ರಧಾನ ಪಾತ್ರದಲ್ಲಿ ನಟಿಸಿರುವ ಧಾರಾವಾಹಿ ಪುಟ್ಟಕ್ಕನ ಮಕ್ಕಳು ಈಗಾಗಲೇ ದೊಡ್ಡಮಟ್ಟದಲ್ಲಿ ಜನಪ್ರಿಯತೆಯನ್ನು ಪಡೆದುಕೊಂಡಿರುವ ಯಶಸ್ವಿ ಧಾರಾವಾಹಿಯಾಗಿ ಅಸಂಖ್ಯಾತ ಕಿರುತೆರೆಯ ಪ್ರೇಕ್ಷಕರನ್ನು ರಂಜಿಸುತ್ತಿದೆ. ಸ್ವಾಭಿಮಾನಿ ಹೆಣ್ಣು ಪುಟ್ಟಕ್ಕ ಗಂಡನಿಂದ ತಿರಸ್ಕೃತಗೊಂಡರೂ, ತನ್ನ ಮೂರು ಜನ ಹೆಣ್ಣು ಮಕ್ಕಳನ್ನು ದಿಟ್ಟತನದಿಂದ ಸಾಕಿ ಬೆಳೆಸಿ ಊರಿನ ಜನರ ಮುಂದೆ ಮಾದರಿ ಹೆಣ್ಣಾಗಿ ಬದುಕನ್ನು ಕಟ್ಟಿಕೊಂಡಿದ್ದಾಳೆ. ಉಮಾಶ್ರೀ ಅವರು ಪುಟ್ಟಕ್ಕನ ಪಾತ್ರಕ್ಕೆ ಜೀವ ತುಂಬಿದ್ದಾರೆ.

ಪುಟ್ಟಕ್ಕನಾಗಿ ಉಮಾಶ್ರೀ ಅವರು ಕನ್ನಡ ಕಿರುತೆರೆಯ ಪ್ರೇಕ್ಷಕರ ಅಪಾರವಾದ ಮೆಚ್ಚುಗೆ ಹಾಗೂ ಗೌರವವನ್ನು ಪಡೆದುಕೊಂಡಿದ್ದಾರೆ. ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಪ್ರತಿಯೊಂದು ಪಾತ್ರಕ್ಕೂ ಕೂಡಾ ವಿಶೇಷವಾದ ಮಹತ್ವವನ್ನು ನೀಡಲಾಗಿದೆ. ಇದೇ ಧಾರಾವಾಹಿಯಲ್ಲಿ ಕನ್ನಡದ ಮತ್ತೋರ್ವ ಜನಪ್ರಿಯ ನಟಿ ಮಂಜು ಭಾಷಿಣಿಯವರು ಬಹಳ ದಿನಗಳ ನಂತರ ಒಂದು ಗಟ್ಟಿ ಪಾತ್ರದ ಮೂಲಕ ಜನರ ಮುಂದೆ ಬಂದಿದ್ದು, ಬಡ್ಡಿ ಬಂಗಾರಮ್ಮ ನಾಗಿ, ತನ್ನ ಗತ್ತಿನಿಂದ, ಶಿಸ್ತುಬದ್ಧ ಜೀವನದಿಂದ ಪ್ರೇಕ್ಷಕರ ಮನಸ್ಸನ್ನು ಗೆಲ್ಲುತ್ತಾ ಪುಟ್ಟಕ್ಕನಿಗೆ ಸರಿಸಮನಾದ ಪಾತ್ರದಲ್ಲಿ ಮಿಂಚುತ್ತಿದ್ದಾರೆ.

ಪುಟ್ಟಕ್ಕನ ಮೂರು ಜನ ಹೆಣ್ಣು ಮಕ್ಕಳ ಪಾತ್ರಗಳು, ಪುಟ್ಟಕ್ಕನ ಗಂಡ ಹಾಗೂ ಆತನ ಎರಡನೆ ಹೆಂಡತಿ ಗಯ್ಯಾಳಿ ರಾಜೇಶ್ವರಿಯ ಪಾತ್ರ, ಬಡ್ಡಿ ಬಂಗಾರಮ್ಮನ ಮಗ ಕಂಠಿ ಹಾಗೂ ಸ್ನೇಹನ ನಡುವಿನ ಒಡನಾಟ ಇವೆಲ್ಲವೂ ಕೂಡಾ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ಸನ್ನು ಪಡೆದುಕೊಂಡಿದ್ದು, ಪುಟ್ಟಕ್ಕನ ಮಕ್ಕಳು ಟಾಪ್ ಸೀರಿಯಲ್ ಗಳಲ್ಲಿ ಒಂದಾಗಿದೆ. ಇನ್ನು ಕಂಠಿ ಪಾತ್ರದಲ್ಲಿ ನಟಿಸಿರುವ ಧನುಷ್ ಅವರು ಈ ಸೀರಿಯಲ್ ಮೂಲಕ ಒಬ್ಬ ಸಿನಿಮಾ ನಟನಷ್ಟೇ ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ.

ಈಗ ಇಷ್ಟೆಲ್ಲಾ ಜನಪ್ರಿಯತೆಯನ್ನು ಪಡೆದಿರುವ ಸೀರಿಯಲ್ ನಲ್ಲಿ ಒಂದು ಪ್ರಮುಖ ಪಾತ್ರದಿಂದ, ಕಲಾವಿದರೊಬ್ಬರು ಹೊರನಡೆದಿದ್ದಾರೆ ಎಂದು ತಿಳಿದುಬಂದಿದೆ. ಹೌದು, ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಬಡ್ಡಿ ಬಂಗಾರಮ್ಮನ ಮಗಳ ಗಂಡನಾಗಿ, ಆಕೆಯ ಅಳಿಯನಾಗಿ, ಸ್ನೇಹಾಳ ಅಣ್ಣಯ್ಯನಾಗಿ ವಕೀಲನ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಕಿರುತೆರೆಯ ಜನಪ್ರಿಯ ನಟ ಕಾರ್ತಿಕ್ ಮಹೇಶ್ ಅವರು ಧಾರಾವಾಹಿಯಿಂದ ಹೊರಬಂದಿದ್ದಾರೆ.

ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಚಂದ್ರು ಪಾತ್ರದ ಮೂಲಕ ಜನರ ಗಮನವನ್ನು ಸೆಳೆದಿದ್ದ ಕಾರ್ತಿಕ್ ಅವರು ಈ ಹಿಂದೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಇಂತಿ ನಿಮ್ಮ ಆಶಾ ಧಾರವಾಹಿಯಲ್ಲಿ ಆಶಾ ಮಗನ ಪಾತ್ರವನ್ನು ಪೋಷಿಸಿದ್ದರು. ಅದಾದನಂತರ ಪುಟ್ಟಕ್ಕನ ಮಕ್ಕಳು ಧಾರವಾಹಿಯಲ್ಲಿ ಚಂದ್ರು ಪಾತ್ರದ ಮೂಲಕ ಇನ್ನಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿದ್ದರು. ಆದರೆ ಇವೆಲ್ಲವುಗಳ ನಡುವೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಕಾರ್ತಿಕ್ ಮಹೇಶ್ ಅವರು ನಾಯಕನಾಗಿ ಕಾಣಿಸಿಕೊಂಡಿರುವ ಹೊಸ ಧಾರಾವಾಹಿ ರಾಜಿ ಆರಂಭವಾಗಿದೆ.

ಕಾರ್ತಿಕ್ ಅವರು ನಾಯಕನಾಗಿರುವ ಹೊಸ ಧಾರಾವಾಹಿ ಪ್ರಸಾರವನ್ನು ಆರಂಭಿಸಿದ ನಂತರ ಎರಡು ಧಾರಾವಾಹಿಗಳಲ್ಲಿ ನಟಿಸಲು ಡೇಟ್ ಗಳು ಹೊಂದಾಣಿಕೆ ಆಗದ ಕಾರಣ ಕಾರ್ತಿಕ್ ಅವರು ಪುಟ್ಟಕ್ಕನ ಮಕ್ಕಳು ಧಾರಾವಾಹಿ ಇಂದ ಹೊರನಡೆದಿದ್ದಾರೆ. ಅವರ ಪಾತ್ರಕ್ಕೆ ಗಿಣಿರಾಮ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳುತ್ತಿದ್ದ ನಂದೀಶ್ ಅವರು ಎನ್ನಲಾಗಿದ್ದು, ಅವರು ಪುಟ್ಟಕ್ಕನ ಮಕ್ಕಳು ತಂಡಕ್ಕೆ ಸೇರಿದ್ದಾರೆ ಎನ್ನಲಾಗಿದೆ.

Leave A Reply

Your email address will not be published.