ಪುಟಿನ್ ಇಡೀ ಜಗತ್ತನ್ನೇ ಆಳುತ್ತಾರೆ, ಬಾಬಾ ವೆಂಗಾ ನುಡಿದ ದೊಡ್ಡ ಭವಿಷ್ಯವಾಣಿ ಸತ್ಯವಾಗಲಿದೆಯಾ??

Entertainment Featured-Articles News

ನ್ಯಾಟೋದಲ್ಲಿ ಸೇರುವ ವಿಚಾರಕ್ಕೆ ಸಂಬಂಧಿಸಿದ ಹಾಗೆ ಉಕ್ರೇನ್ ಮತ್ತು ರಷ್ಯಾ ನಡುವೆ ದೊಡ್ಡ ಯು ದ್ಧ ವೇ ನಡೆಯುತ್ತಿದ್ದು, ಜಾಗತಿಕ ಮಟ್ಟದಲ್ಲಿ ಈ ವಿಚಾರ ಈಗ ದೊಡ್ಡ ಸುದ್ದಿಯಾಗಿದೆ‌. ರಷ್ಯಾ ಈಗಾಗಲೇ ಉಕ್ರೇನ್ ಮೇಲೆ ನಡೆಸಿರುವ ದಾ ಳಿ ಯಿಂದ ಸಾಕಷ್ಟು ಸಾ ವು, ನೋ ವು ಗಳು ಸಂಭವಿಸಿದೆ. ಅಮೆರಿಕಾ ಅಥವಾ ನ್ಯಾಟೋ ದೇಶಗಳ ಎಚ್ಚರಿಕೆಯ ಕಡೆಗೆ ಕಿಂಚಿತ್ತೂ ಗಮನ ನೀಡದ ರಷ್ಯಾ ಉಕ್ರೇನ್ ಮೇಲೆ ನಡೆಸಿರುವ ಈ ದಾ ಳಿ ಯು ಈಗ ರಷ್ಯಾದ ವರ್ತನೆಯನ್ನು ವಿಶ್ವ ರಾಷ್ಟ್ರಗಳು ಸಹಾ ನೋಡುವಂತಾಗಿದೆ. ರಷ್ಯಾ ನಿಲುವಿನ ಬಗ್ಗೆ ಮಿಶ್ರ ಪ್ರತಿಕ್ರಿಯೆಗಳು ಸಹಾ ಹರಿದು ಬರುತ್ತಿವೆ.

ಈಗ ರಷ್ಯಾ ಉಕ್ರೇನ್ ಮೇಲೆ ನಡೆಸಿರುವ ದಾ ಳಿ ಯ ಬೆನ್ನಲ್ಲೇ ಬಾಬಾ ವೇಂಗಾ ನುಡಿದಿದ್ದರೆನ್ನಲಾದ ಭವಿಷ್ಯ ವಾಣಿಯ ವಿಷಯ ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿದ್ದು, ಮತ್ತೊಮ್ಮೆ ಆ ಭವಿಷ್ಯವಾಣಿಗಳು ಮುನ್ನೆಲೆಗೆ ಬಂದಿದೆ. ಹೌದು ವೇಂಗಾ ಬಾಬಾ ನುಡಿದಿರುವ ಭವಿಷ್ಯವಾಣಿಯ ಪ್ರಕಾರ ಉಕ್ರೇನ್ ಮೇಲಿನ ಯು ದ್ಧ ದ ನಂತರ ಪುಟಿನ್ ವಿಶ್ವದಲ್ಲೇ ಅಗ್ರ ನಾಯಕನಾಗಿ ಹೊರಹೊಮ್ಮಲಿದ್ದಾರೆ ಎನ್ನುವ ಭವಿಷ್ಯವಾಣಿಯು ಈಗ ಮತ್ತೊಮ್ಮೆ ಸದ್ದು ಮಾಡುತ್ತಿದೆ. ಹಾಗಾದರೆ ಬಾಬಾ ವೇಂಗಾ ನುಡಿದಿದ್ದ ಭವಿಷ್ಯವಾಣಿ ಏನು ? ತಿಳಿಯೋಣ ಬನ್ನಿ.

ಬಾಬಾ ವೇಂಗಾ ತನ್ನ ಭವಿಷ್ಯವಾಣಿಯಲ್ಲಿ ರಷ್ಯಾ ವಿಶ್ವದ ಅಗ್ರನಾಯಕನಾಗಲಿದೆ ಮತ್ತು ಯೂರೋಪ್ ಬಂಜರು ಭೂಮಿಯಾಗಲಿದೆ ಎಂದಿದ್ದರು. ಆಕೆ, “ಮಂಜಿನ ಹಾಗೆ ಎಲ್ಲವೂ ಕರಗಿ ಹೋಗುವುದು, ಆದರೆ ಒಂದು ವಸ್ತುವಿಗೆ ಮಾತ್ರ ಯಾರೂ ಕೈ ಇಡಲು ಸಹಾ ಸಾಧ್ಯವಾಗುವುದಿಲ್ಲ. ವ್ಲಾಡಿಮಿರ್ ನ ವೈಭವ, ರಷ್ಯಾದ ವೈಭವವನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ರಷ್ಯಾ ತನ್ನ ಹಾದಿಯಿಂದ ಎಲ್ಲರನ್ನೂ ಪಕ್ಕಕ್ಕೆ ಸರಿಸಿ, ಜಗತ್ತಿನ ಮೇಲೆ ಆಳ್ವಿಕೆ ನಡೆಸುತ್ತದೆ” ಎಂದು ಭವಿಷ್ಯ ವಾಣಿ ನುಡಿದಿದ್ದರು.

ಬಾಬಾ ವೇಂಗಾ ಯಾರು? ಎನ್ನುವ ಪ್ರಶ್ನೆ ನಿಮಗೆ ಮೂಡಬಹುದು. ಬನ್ನಿ ಅದು ಸಹಾ ತಿಳಿಯೋಣ. ಇವರ ನಿಜವಾದ ಹೆಸರು ವೆಂಗೇಲಿಯಾ ಪಾಂಡೇವಾ ಗುಶ್ತೆರೋವಾ ಆಗಿತ್ತು. ಆಕೆಯ ಹನ್ನೆರಡನೇ ವಯಸ್ಸಿನಲ್ಲಿ ಅವರಿದ್ದ ಪ್ರದೇಶದಲ್ಲಿ ಉಂಟಾದ ಭೀ ಕ ರ ಬಿರುಗಾಳಿಯಲ್ಲಿ ಆಕೆ ತನ್ನ ಎರಡೂ ಕಣ್ಣನ್ನು ಕಳೆದುಕೊಂಡರು. ಹೀಗೆ ಆಕೆ ನೇತ್ರಹೀನಳಾದರೂ ಭವಿಷ್ಯ ನೋಡುವ ವಿಶೇಷ ಶಕ್ತಿಯು ಆಕೆಯಲ್ಲಿ ಇತ್ತು ಎನ್ನಲಾಗುತ್ತದೆ.

1996 ರಲ್ಲಿ ತನ್ನ 85 ನೇ ವಯಸ್ಸಿನಲ್ಲಿ ಬಾಬಾ ವೇಂಗಾ ನಿಧನರಾದರು. ಬಾಬಾ ವೇಂಗಾ 5079 ರ ವರೆಗೆ ಭವಿಷ್ಯವಾಣಿಯನ್ನು ನುಡಿದಿದ್ದಾರೆ. ಬಾಬಾ ವೇಂಗಾ ಅವರು ನುಡಿದಿರುವ ಭವಿಷ್ಯವಾಣಿ ಗಳು ಬಹುತೇಕ ನಿಜವಾಗಿವೆ ಎನ್ನುವುದು ಅನೇಕರ ನಂಬಿಕೆಯಾಗಿದೆ. ಈಗ ರಷ್ಯಾ ಕುರಿತಾಗಿ ಬಾಬಾ ವೇಂಗಾ ನುಡಿದಿರುವ ಭವಿಷ್ಯವಾಣಿ ಮತ್ತೊಮ್ಮೆ ಸುದ್ದಿ ಮಾಡುತ್ತಿದ್ದು ಎಲ್ಲರ ಗಮನವನ್ನು ಸೆಳೆಯುತ್ತಿದೆ.

Leave a Reply

Your email address will not be published.