ಟೋಕಿಯೋ ಒಲಂಪಿಕ್ಸ್ ಮುಗಿದಾಗಿದೆ, ಸದ್ಯಕ್ಕೆ ಟೋಕಿಯೋ ದಲ್ಲಿ ಪ್ಯಾರಾಲಂಪಿಕ್ಸ್ ನಡೆಯುತ್ತಿದ್ದು ಭಾರತೀಯ ಕ್ರೀಡಾಪಟುಗಳು ಈಗಾಗಲೇ ಭರ್ಜರಿ ಪದಕಗಳ ಬೇಟೆಯನ್ನು ನಡೆಸಿದ್ದು, ಭಾರತ ಒಲಿಂಪಿಕ್ಸ್ ಪದಕಗಳ ಗೆದ್ದ ದೇಶಗಳ ಪಟ್ಟಿಯಲ್ಲಿ ಕೂಡಾ ಉತ್ತಮ ಸ್ಥಾನದೊಂದಿಗೆ ಮೇಲೇರುತ್ತಿದೆ. ಇನ್ನು ಈಗಾಗಲೇ ಒಲಿಂಪಿಕ್ಸ್ ನಲ್ಲಿ ಪದಕ ಗೆದ್ದು ಬಂದವರಿಗೆ ದೇಶದೆಲ್ಲೆಡೆ ಸನ್ಮಾನ ಹಾಗೂ ಸತ್ಕಾರಗಳು ನಡೆಯುತ್ತಿವೆ. ಹಲವು ರಾಜ್ಯಗಳು ಹಾಗೂ ಸರ್ಕಾರಗಳು ನಗದು ಬಹುಮಾನಗಳನ್ನು ಘೋಷಣೆ ಮಾಡಿದ್ದವು. ಸೋಷಿಯಲ್ ಮೀಡಿಯಾಗಳಲ್ಲಿ ಸಹಾ ಅಸಂಖ್ಯಾತ ಜನ ನೆಟ್ಟಿಗರು ಪದಕ ವಿಜೇತರಿಗೆ ತಮ್ಮ ಕಡೆಯಿಂದ ಮೆಚ್ಚುಗೆಯನ್ನು ಹರಿಸುತ್ತಲೇ ಇದ್ದಾರೆ. ಮಾದ್ಯಮಗಳಲ್ಲಿ ಸಾಧಕರ ಜೀವನ ಹಾಗೂ ಸಾಧನೆಗಳ ಕುರಿತಾಗಿ ಬಹಳಷ್ಟು ಸುದ್ದಿಗಳು ಹರಿದಾಡುತ್ತಿವೆ.
ಟೋಕಿಯೋ ಒಲಂಪಿಕ್ಸ್ ನ ಬ್ಯಾಡ್ಮಿಂಟನ್ ಪಂದ್ಯದಲ್ಲಿ ತನ್ನ ಸಾಧನೆಯನ್ನು ಮೆರೆದು ರಜತ ಪದಕವನ್ನು ತನ್ನದಾಗಿಸಿಕೊಂಡು ದೇಶದ ವಿಜಯ ಪತಾಕೆಯನ್ನು ಹಾರಿಸಿ ಬಂದಿದ್ದಾರೆ. ಪಿ.ವಿ.ಸಿಂಧು ಅವರ ಸಂದರ್ಶನಗಳು ಸಹಾ ಮಾದ್ಯಮಗಳಲ್ಲಿ ಪ್ರಸಾರವಾದವು. ಇವೆಲ್ಲವುಗಳ ಬೆನ್ನಲ್ಲೇ ತೆಲುಗು ಸಿನಿ ರಂಗದ ಸೂಪರ್ ಸ್ಟಾರ್ ಗಳು ಎನಿಸಿಕೊಂಡಿರುವ ಮೆಗಾಸ್ಟಾರ್ ಚಿರಂಜೀವಿ ಅವರು ಹಾಗೂ ಅವರ ಪುತ್ರ ನಟ ರಾಮ್ ಚರಣ್ ತೇಜಾ ಅವರು ಪಿ.ವಿ. ಸಿಂಧು ಅವರನ್ನು ಸನ್ಮಾನಿಸಿ, ಗೌರವ ಸಲ್ಲಿಸುವ ಸಲುವಾಗಿ ಪಾರ್ಟಿಯೊಂದನ್ನು ಆಯೋಜನೆ ಮಾಡಿದ್ದರು. ನಟ ರಾಮ್ ಚರಣ್ ಪಾರ್ಟಿಯ ವೀಡಿಯೋವನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಪಿ.ವಿ.ಸಿಂಧೂ ಅವರಿಗೆ ಗೌರವಿಸಲು ಆಯೋಜಿಸಿದ್ದ ಈ ಪಾರ್ಟಿಯಲ್ಲಿ ನಟರಾದ ಚಿರಂಜೀವಿ, ನಾಗಾರ್ಜುನ, ರಾಮ್ ಚರಣ್ ತೇಜಾ, ದಗ್ಗುಬಾಟಿ ರಾಣಾ, ವರುಣ್ ತೇಜ್, ಸಾಯಿ ಧರಮ್ ತೇಜ್ ಹಾಗೂ ಅವರ ಸಹೋದರ ವೈಷ್ಣವ್ ತೇಜ್ ಅವರು, ಅಖಿಲ್ ಅಕ್ಕಿನೇನಿ, ಹಿರಿಯ ನಟಿಯರಾದ ಸುಹಾಸಿನಿ, ರಾಧಿಕಾ ಶರತ್ ಕುಮಾರ್ ಹಾಗೂ ಇನ್ನಿತರೆ ಕಲಾವಿದರು ಭಾಗವಹಿಸಿದ್ದರು. ಪಿ.ವಿ.ಸಿಂಧು ಅವರನ್ನು ಸನ್ಮಾನಿಸಿದ ಈ ಪಾರ್ಟಿಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇನ್ನು ಇದನ್ನು ನೋಡಿ ಬಹಳಷ್ಟು ಜನರು ಬಾಲಿವುಡ್ ಮಂದಿ ಇದನ್ನು ನೋಡಿ ಕಲಿಯಬೇಕು ಎಂದು ಟೀಕೆಗಳ ಮಳೆಗಳನ್ನೇ ಸುರಿಸುತ್ತಿದ್ದಾರೆ.
ಪಿ.ವಿ.ಸಿಂಧು ಅವರಿಗೆ ಟಾಲಿವುಡ್ ಮಂದಿ ಸನ್ಮಾಸಿರುವುದನ್ನು ನೋಡಿ, ಅನೇಕರು ಬಾಲಿವುಡ್ ಬೇಕಾದರೆ ಆಕೆಯ ಬಯೋಪಿಕ್ ತೆಗೆದು ಹಣ ಗಳಿಸುವ ಬಗ್ಗೆ ಆಲೋಚನೆ ಮಾಡುತ್ತದೆ ಎಂದರೆ, ಇನ್ನೂ ಕೆಲವರು ದಕ್ಷಿಣದ ಸಿನಿಮಾ ಮಂದಿ ನಮ್ಮ ಸಂಸ್ಕೃತಿ, ಸಂಪ್ರದಾಯಗಳನ್ನು ಬಿಂಬಿಸಿದರೆ, ಬಾಲಿವುಡ್ ಮಂದಿ ದೇವರುಗಳನ್ನು, ಧರ್ಮವನ್ನು ಹಾಳು ಮಾಡುವ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ ಎಂದು ಕೂಡಾ ಟೀಕೆಗಳನ್ನು ಮಾಡುತ್ತಾ ಸಾಗಿದ್ದಾರೆ.