ಚಿಕ್ಕವರಿಂದ ಹಿಡಿದು ದೊಡ್ಡವರವರೆಗೂ ವಯಸ್ಸಿನ ಬೇಧವಿಲ್ಲದೇ ಬಹಳ ಇಷ್ಟಪಟ್ಟು ತಿನ್ನುವ ಆಹಾರ ಪದಾರ್ಥಗಳಲ್ಲಿ ಪಿಜ್ಜಾ ಕೂಡಾ ಸಿಕ್ಕಾಪಟ್ಟೆ ಜನಪ್ರಿಯವಾಗಿದೆ. ಪಿಜ್ಜಾ ಒಂದು ಜಂಕ್ ಫುಡ್ ಎನ್ನುವುದು ತಿಳಿದಿದೆಯಾದರೂ ಸಹಾ ಅದರ ರುಚಿಗೆ ಮನಸೋತಿರುವ ಜನರು ನಾಲಗೆ ಚಪ್ಪರಿಸಿಕೊಂಡು ಪಿಜ್ಜಾ ರುಚಿಯನ್ನು ಸವಿಯುತ್ತಾರೆ ಎನ್ನುವುದು ಸಹಾ ನಿಜ. ಒಂದು ಕಾಲದಲ್ಲಿ ದೊಡ್ಡ ದೊಡ್ಡ ನಗರಗಳಿಗೆ ಮಾತ್ರವೇ ಸೀಮಿತವಾಗಿದ್ದ ಪಿಜ್ಜಾಗಳು ಈಗ ಸಣ್ಣ ಪುಟ್ಟ ಪಟ್ಟಣಗಳ ಕಡೆಗೂ ಸಹಾ ಪ್ರವೇಶ ನೀಡಿದ್ದು, ಬೇಡಿಕೆಯನ್ನು ಇನ್ನಷ್ಟು ಹೆಚ್ಚಿಸಿಕೊಂಡಿದೆ.
ಪಿಜ್ಜಾ ಗಳಿಗೆ ಮನುಷ್ಯರು ಮಾತ್ರವೇ ಅಲ್ಲ ಪ್ರಾಣಿಗಳು ಸಹಾ ಆಕರ್ಷಿತವಾಗುತ್ತದೆ ಎಂದರೆ ನಂಬುವಿರಾ?? ಏನು ಪ್ರಾಣಿಗಳು ಪಿಜ್ಜಾ ಕಡೆಗೆ ಆಕರ್ಷಿತವಾಗುವುದು ಅಂದರೆ ಏನರ್ಥ?? ಎಂದು ಆಲೋಚನೆ ಮಾಡುತ್ತಿದ್ದೀರಾ?? ಆದರೆ ಈಗ ವೈರಲ್ ಆಗ್ತಿರೋ ವೀಡಿಯೋ ಒಂದನ್ನು ನೋಡಿದ ಮೇಲೆ ನೀವು ಸಹಾ ಅದನ್ನು ಒಪ್ಪಲೇಬೇಕಾಗಿದೆ. ವಿವರಗಳಿಗೆ ಹೋಗುವುದಾದರೆ, ವೈರಲ್ ವೀಡಿಯೋದಲ್ಲಿ ವ್ಯಕ್ತಿಯೊಬ್ಬರು ಬೆಕ್ಕಿನ ಮುಂದೆ ಪಿಜ್ಜಾವನ್ನು ಹಿಡಿದುಕೊಂಡು ನಿಲ್ಲುತ್ತಾರೆ.
ವ್ಯಕ್ತಿಯು ತಾನು ಸಾಕಿರುವ ಬೆಕ್ಕಿಗೆ ಪಿಜ್ಜಾ ತೋರಿಸಿದ ಕೂಡಲೇ ಅದರ ಬಾಯಲ್ಲಿ ನೀರು ಬಂದಿತೇನೋ ಎನ್ನುವಂತೆ ಬೆಕ್ಕು ತನ್ನ ಯಜಮಾನನ ಮುಂದೆ ಪಿಜ್ಜಾ ನೀಡುವಂತೆ ವಿನಂತಿಸಿಕೊಳ್ಳುವಂತೆ ವರ್ತನೆ ಮಾಡುವುದುನ್ನು ನೋಡಬಹುದು. ಅದು ತನ್ನ ಮುಂದಿನ ಎರಡು ಕಾಲನ್ನು ಎತ್ತಿ ಪಿಜ್ಜಾ ನೀಡುವಂತೆ ಬೇಡಿಕೊಳ್ಳುವುದನ್ನು ಆ ವ್ಯಕ್ತಿ ವೀಡಿಯೋದಲ್ಲಿ ಸೆರೆ ಹಿಡಿದು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದು, ವೀಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಾ ಸಾಗಿದೆ.
ವೀಡಿಯೋ ನೋಡಿದ ನೆಟ್ಟಿಗರು ಸಹಾ ವೈವಿದ್ಯಮಯ ರೀತಿಯಲ್ಲಿ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ಕೆಲವರು ಪಿಜ್ಜಾ ಟೇಸ್ಟ್ ಗೆ ಯಾರಾದರೂ ಸಹಾ ಫಿದಾ ಆಗಲೇ ಬೇಕು ಎಂದರೆ ಇನ್ನೂ ಕೆಲವರು ಈ ಬೆಕ್ಕು ಬಹಳ ಕ್ಯೂಟಾಗಿದೆ ಎನ್ನುವ ಮಾತನ್ನು ಹೇಳಿದ್ದಾರೆ. ಕೆಲವರು ಈ ರೀತಿ ಬೆಕ್ಕಿಗೆ ಪಿಜ್ಜಾ ತಿನ್ನಿಸುವುದು ಸರಿಯಲ್ಲ ಎಂದು ಸಲಹೆಯನ್ನು ನೀಡಿದ್ದಾರೆ. ಅಲ್ಲದೇ ವೀಡಿಯೋದಲ್ಲಿ ಬೆಕ್ಕಿನ ವರ್ತನೆ ಹಾಗೂ ಅವರ ಹಾವ ಭಾವ ನೆಟ್ಟಿಗರ ಮನಸ್ಸು ಗೆದ್ದಿದೆ.