ಪಾಲ್ಕೆ ಪ್ರಶಸ್ತಿ ಸ್ವೀಕರಿಸಿ ಕರ್ನಾಟಕದ ತನ್ನ ಬಸ್ ಡ್ರೈವರ್ ಗೆಳೆಯನಿಗೆ ರಜನೀಕಾಂತ್ ಗೌರವ ಕೊಟ್ಟಿದ್ದು ಹೀಗೆ
ಭಾರತೀಯ ಚಿತ್ರರಂಗದ ದಿಗ್ಗಜ ನಟರ ಸಾಲಿನಲ್ಲಿ ತಮಿಳು ನಟ, ದಕ್ಷಿಣ ಭಾರತದ ಸೂಪರ್ ಸ್ಟಾರ್ ನಟ ಎನಿಸಿಕೊಂಡಿರುವ ರಜನೀಕಾಂತ್ ಅವರಿಗೆ ವಿಶೇಷವಾದ ಸ್ಥಾನ ಮಾನವಿದೆ. ಅಸಂಖ್ಯಾತ ಅಭಿಮಾನಿಗಳನ್ನು ಪಡೆದಿರುವ ರಜನೀಕಾಂತ್ ಇಂದು ಚಿತ್ರರಂಗದಲ್ಲೊಂದು ದಂತಕಥೆಯಂತಿರುವ ಮೇರು ನಟ. ಇಂತಹ ನಟನಿಗೆ ಭಾರತೀಯ ಸಿನಿಮಾ ರಂಗದ ಅತ್ಯುಚ್ಚ ಪ್ರಶಸ್ತಿ ಎನಿಸಿರುವ ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಗಿದೆ. ಈ ಮೂಲಕ ಅವರ ಚಿತ್ರ ಜಗತ್ತಿನ ಸೇವೆಗೆ ಸರ್ಕಾರವು ತನ್ನ ಗೌರವವನ್ನು ನೀಡಿ ಹಿರಿಯ ನಟನ ಸಾಧನೆಯನ್ನು ಪುರಸ್ಕರಿಸಿದೆ.
ನಟ ರಜನೀಕಾಂತ್ ಅವರು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರಿಂದ ದಾದಾ ಸಾಹೇಬ್ ಪ್ರಶಸ್ತಿಯನ್ನು ಸ್ವೀಕರಿಸಿದ ನಂತರ ಆ ಪ್ರಶಸ್ತಿಯನ್ನು ತಮ್ಮ ಜೀವನದಲ್ಲಿ ತಾನು ಈ ಎತ್ತರಕ್ಕೆ ಬೆಳೆಯುವಲ್ಲಿ ಪ್ರಮುಖವಾದ ಹಾಗೂ ಎಂದಿಗೂ ಮರೆಯಲಾಗದ ಪಾತ್ರವನ್ನು ನಿರ್ವಹಣೆ ಮಾಡಿರುವ ಮೂರು ಜನರಿಗೆ ಮುಖ್ಯವಾಗಿ ಅರ್ಪಣೆ ಮಾಡುವ ಮೂಲಕ ಎಲ್ಲರ ಗಮನವನ್ನು ಸೆಳೆದಿದ್ದಾರೆ. ಆ ಮೂವರಿಗೆ ತನ್ನ ಈ ಪ್ರಶಸ್ತಿ ಯನ್ನು ಅರ್ಪಣೆ ಮಾಡುವ ಮೂಲಕ ಸಂತೋಷದ ಕ್ಷಣಗಳಲ್ಲಿ ತನ್ನ ಸಾಧನೆಗೆ ಕಾರಣರಾದವರನ್ನು ಸ್ಮರಿಸಿದ್ದಾರೆ.
ಆ ಮೂವರು ವ್ಯಕ್ತಿಗಳು ರಜನೀಕಾಂತ್ ಅವರ ಆಪ್ತರು, ಮೆಂಟರ್ ಆಗಿರುವ ನಿರ್ದೇಶಕ ಕೆ.ಬಾಲಚಂದರ್, ರಜನೀಕಾಂತ್ ಅವರ ಅಣ್ಣ ಸತ್ಯ ನಾರಾಯಣ್ ಗಾಯಕ್ವಾಡ್, ಹಾಗೂ ಸ್ನೇಹಿತ ಬಸ್ ಚಾಲಕ ರಾಜ್ ಬಹುದ್ದೂರ್. ರಜನೀಕಾಂತ್ ಅವರು ತನ್ನ ತಂದೆಯ ಸ್ಥಾನವನ್ನು ತುಂಬಿ, ಪ್ರೀತಿ ವಾತ್ಸಲ್ಯ ತೋರಿದ ಅಣ್ಣ ಸತ್ಯನಾರಾಯಣ ಗಾಯಕ್ವಾಡ್ ಅವರನ್ನು ಸ್ಮರಣೆ ಮಾಡಿದ್ದಾರೆ. ಅನಂತರ ತನಗೆ ಗುರುವಂತಿರುವ ಕೆ.ಬಾಲ ಚಾಸರ್ ಅವರನ್ನು ಗೌರವ ವಾಗಿ ಸ್ಮರಿಸಿ ಈ ಪ್ರಶಸ್ತಿ ಅರ್ಪಣೆ ಮಾಡುವುದಾಗಿ ಹೇಳಿದ್ದಾರೆ.
ಅನಂತರ ಅವರು ತನ್ನಲ್ಲಿನ ನಟನನ್ನು ಗುರುತಿಸಿ, ನಟನಾಗಲು ಪ್ರೋತ್ಸಾಹ ನೀಡಿದ ಕರ್ನಾಟಕದ ಗೆಳೆಯ, ಬಸ್ ಚಾಲಕನಾಗಿ ಕೆಲಸವನ್ನು ಮಾಡುತ್ತಿದ್ದ ರಾಜ್ ಬಹದ್ದೂರ್ ಗೆ ತಮ್ಮ ಪ್ರಶಸ್ತಿಯನ್ನು ಅರ್ಪಣೆ ಮಾಡುವುದಾಗಿ ಹೇಳಿದ್ದಾರೆ ರಜನೀಕಾಂತ್. ಇದೇ ವೇಳೆ ಅವರು ತಮ್ಮ ಸಿನಿಮಾಗಳ ನಿರ್ಮಾಪಕರು, ನಿರ್ದೇಶಕರು, ತಂತ್ರಜ್ಞರು, ಸಹ ನಟ ನಟಿಯರು, ಮಾದ್ಯಮಗಳು ಹಾಗೂ ಅಭಿಮಾನಿಗಳಿಗೂ ಧನ್ಯವಾದಗಳನ್ನು ಅರ್ಪಿಸಿದ್ದಾರೆ.